ಹುಯಿಗೆರೆ ಬಳಿ ಧರೆ ಕುಸಿತ

18bhr 2 rain
ಬಾಳೆಹೊನ್ನೂರು ಸಮೀಪದ ಎಲೆಕಲ್ಲು-ಹುಯಿಗೆರೆ ನಡುವಿನ ತಲೆಗದ್ದೆ ಎಂಬಲ್ಲಿ ಧರೆ ಕುಸಿದಿರುವುದು.
Published on

ಬಾಳೆಹೊನ್ನೂರು: ಎರಡ್ಮೂರು ದಿನಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿಯುತ್ತಿದ್ದ ಮಳೆಯ ಅಬ್ಬರ ಬುಧವಾರ ಕೊಂಚ ತಗ್ಗಿದ್ದು ಬಿಸಿಲಿನ ದರ್ಶನವಾಗಿದೆ. ಮಂಗಳವಾರ ರಾತ್ರಿ ಮಳೆ ಕ್ಷೀಣಿಸಿದ್ದು ಬುಧವಾರ ಆಗೊಮ್ಮೆ ಈಗೊಮ್ಮೆ ಮಳೆ ಬಂದಿದೆ. ಬಿಡುವಿನ ವೇಳೆಯಲ್ಲಿ ಬಿಸಿಲು ಕಾಣಿಸಿಕೊಂಡಿದೆ.

ಗಾಳಿಯ ಅಬ್ಬರ ಹೆಚ್ಚಾಗಿದೆ. ಮಂಗಳವಾರ ಸಂಜೆ ವೇಳೆಗೆ ಧಾರಾಕಾರ ಗಾಳಿಮಳೆಗೆ ಬಾಳೆಹೊನ್ನೂರು ಸಮೀಪದ ಎಲೆಕಲ್ಲು ಮೂಲಕ ಹುಯಿಗೆರೆ ಗ್ರಾಮಕ್ಕೆ ತಲುಪುವ ರಸ್ತೆಯ ತಲೆಗದ್ದೆ ಎಂಬಲ್ಲಿ ಧರೆ ಕುಸಿದು ಬೃಹತ್ ಮರ ರಸ್ತೆಗೆ ಉರುಳಿದ ಪರಿಣಾಮ ಆ ಭಾಗದ ಸಂಪರ್ಕ ಕಡಿತಗೊಂಡಿತ್ತು. ಬುಧವಾರ ಬೆಳಗ್ಗೆ ವೇಳೆಗೆ ಮರ ಹಾಗೂ ಧರೆ ಕುಸಿತದ ಮಣ್ಣು ತೆರವುಗೊಳಿಸಿದ್ದು ಬಳಿಕ ಸಂಚಾರಕ್ಕೆ ರಸ್ತೆ ಮುಕ್ತಗೊಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net