ಹುಣಸೇಕಾಯಿ ಮತ್ತು ಹಣ್ಣಿನ ಬೆಲೆ ಏರಿಕೆ / ವ್ಯಾಪಾರಸ್ಥನಿಗೆ ಲಾಭ / ಕಳೆದಕೊಂಡ ರೈತ / ಬೆಲೆ ಏರಿಕೆಯಿಂದ ರೈತನಿಗೆ ಹತ್ತಿರವಾದ ಹುಣಸೇ ಬೇಸಾಯ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ಕಳೆದ ೧೫ ದಿವಸಗಳಿಂದ ಹುಣಸೇಕಾಯಿ ಮತ್ತು ಹಣ್ಣಿಗೆ ದಿಢೀರನೆ ಬೆಲೆ ಏರಿಕೆಯಾಗಿದ್ದು, ರೈತನಿಗೆ ಒಂದೆಡೆ ನಿರಾಸೆಯಾದರೆ ಮತ್ತೊಂದೆಡೆ ರೈತರಿಂದ ದೂರವಾಗಿದ್ದ ಹುಣಸೇ ಬೇಸಾಯ ಮತ್ತೆ ಹತ್ತಿರವಾಗುತ್ತದೆ ಎಂಬ ಖುಷಿ ತಂದಿದೆ.

ಕಳೆದ ಐದು ವರ್ಷಗಳಿಂದ ಹುಣಸೇಕಾಯಿ ಮತ್ತು ಹಣ್ಣಿನ ಬೆಲೆ ಪಾತಾಳಕ್ಕೆ ಕುಸಿದಿತ್ತು. ಇದರಿಂದ ಹುಣಸೇ ಮರಗಳನ್ನು ರೈತರು ಕಟಾವು ಮಾಡಲು ಮುಂದಾಗಿ, ಅನೇಕರು ಮರಗಳನ್ನು ಕಟಾವು ಮಾಡಿದರು.

ಹುಣಸೇಕಾಯಿಗೆ ಬೆಲೆ ಕುಸಿದ ಕಾರಣ ಮರಗಳಲ್ಲಿ ಕಾಯಿಯನ್ನು ಕೀಳುವ ಖರ್ಚು ದುಬಾರಿಯಾದ ಕಾರಣ ಮರಗಳಲ್ಲಿಯೇ ಕಾಯಿಯನ್ನು ಕಳದೆ ವರ್ಷ ಬಿಡುವಂತಾಯಿತು. ಈ ವರ್ಷವೂ ಬೆಲೆ ಇಲ್ಲ ಎಂದು ಮರಗಳಲ್ಲಿ ಕಾಯಿ ಕಾಣಿಸಿಕೊಂಡ ಪ್ರಾರಂಭಲ್ಲಿಯೇ ವ್ಯಾಪಾರಸ್ಥರಿಗೆ ಮರಗಳ ಮೇಲೆಯೇ ಫಸಲನ್ನು ಮಾರಾಟ ಮಾಡಿ ಕೈತೊಳೆದುಕೊಂಡರು.

ಕಳೆದ ೧೫ ದಿನಗಳಿಂದ ಹುಣಸೇಕಾಯಿ ಮತ್ತು ಹಣ್ಣಿಗೆ ದಿಢೀರನೆ ಬೆಲೆ ಏರಿಕೆಯಾಗಿದೆ. ಹುಣ್ಣಸೇಕಾಯಿಯ ಚಿಪ್ಪು ತೆಗೆದಿರುವುದು ಪ್ರತಿ ಕೆ.ಜಿ.ಗೆ ೫೦ ರಿಂದ ೭೫ ರೂ.ಗಳ ತನಕ ಮಾರಾಟವಾಗುತ್ತಿದೆ. ಹಣ್ಣು ೧೫೦ ರಿಂದ ೨೦೦ ರೂ.ಗಳ ತನಕ ಮಾರಾಟವಾಗುತ್ತಿದೆ. ಕಳೆದ ವರ್ಷ ಚಿಪ್ಪೆ ತೆಗೆದಿರುವ ಹುಣಸೆ ಕಾಯಿ ೨೫ ರೂ.ಗಳಿಗೂ ಮಾರಾಟವಾಗದ ಕಾರಣ ಅನೇಕ ರೈತರು ಮರಗಳಲ್ಲಿಯೇ ಕಾಯಿಯನ್ನು ಕೀಳದೆ ಹಾಗೆ ಬಿಟ್ಟಿದ್ದರು.

ಕಳೆದ ೫ ವರ್ಷಗಳಿಂದಲೂ ಹುಣಸೇಕಾಯಿ ಮತ್ತು ಹಣ್ಣಿಗೆ ಬೆಲೆ ಇಲ್ಲದ ಕಾರಣ ಮುಂದೆ ಬೆಲೆ ಬರುವುದು ಅನುಮಾನ ಎಂದು ಅನೇಕ ರೈತರು ಮರಗಳನ್ನು ಕಟಾವು ಮಾಡಿಸಿ ಆ ಜಾಗದಲ್ಲಿ ಮಾವಿನ ಗಿಡ ಹಾಕಿ ಕೃಷಿಗಾಗಿ ಜಮೀನನ್ನು ಬಳಸಿಕೊಂಡರು.

ಈ ವರ್ಷ ಪ್ರಾರಂಭದಲ್ಲಿ ಕಳೆದ ವರ್ಷದ ಬೆಲೆಯನ್ನಾಧರಿಸಿ ಫಸಲನ್ನು ಕಡಿಮೆ ಬೆಲೆಗೆ ವ್ಯಾಪಾರಸ್ಥರಿಗೆ ರೈತರಿಗೆ ಮಾರಾಟ ಮಾಡಿದರು. ದಿಢೀರನೆ ಬೆಲೆ ಏರಿಕೆಯಾಗಿರುವುದನ್ನು ಕಂಡ ರೈತರು ಕಂಗಾಲಾದರೆ ಫಸಲನ್ನು ಉಳಿಸಿಕೊಂಡ ರೈತರ ಮುಖದಲ್ಲಿ ಹರ್ಷ ಕಂಡAತಾಗಿದೆ.

ಹುಣಸೇಕಾಯಿ ಮತ್ತು ಹಣ್ಣು ಹೊರ ದೇಶಗಳಿಗೆ ರಫ್ತಿಗೆ ಅನುಮತಿ ಸಿಕ್ಕಿದೆ. ಆದ ಕಾರಣ ಹುಣಸೇಹಣ್ಣಿಗೆ ಬೆಲೆ ಏರಿಕೆಯಾಗಿದೆ. ಇನ್ನು ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಸ್ಥರು ತಿಳಿಸಿದ್ದಾರೆ.

ಕೋಟ್

ಹುಣಸೇಕಾಯಿಯನ್ನು ಮರಗಳಿಂದ ಕೀಳಲು ಒಬ್ಬ ಮನುಷ್ಯನಿಗೆ ದಿನಕ್ಕೆ ೧೦೦೦ ರೂ.ಗಳಿಂದ ೧೫೦೦ ರೂ.ಗಳ ತನಕ ನೀಡಬೇಕಾಗಿತ್ತು. ಒಂದು ಕೆ.ಜಿ.ಹುಣಸೇಕಾಯಿ ಬೆಲೆ ೧೦ ರೂ.ಗಳಿಂದ ೨೫ ರೂ.ಗಳ ತನಕ ಮಾರಾಟವಾಗುತ್ತಿತ್ತು. ಮರಗಳಿಂದ ಕಾಯಿ ಕೀಳುವ ಕೂಲಿಯೂ ಸಿಗದ ಕಾರಣ ಅನೇಕ ರೈತರು ಹುಣಸೇ ಮರಗಳನ್ನು ಕಟಾವು ಮಾಡಿದರು. ಉಳಿಸಿಕೊಂಡ ರೈತರು ಮರಗಳ ಮೇಲೆ ಫಸಲನ್ನು ವ್ಯಾಪಾರಸ್ಥರು ಕೇಳಿದ ದರಕ್ಕೆ ಮಾರಾಟ ಮಾಡಿದರು. ಈಗ ಬೆಲೆ ಏರಿಕೆಯಾಗಿದೆ. ಆದರೆ ರೈತರನ ಕೈ ಜಾರಿಹೋಗಿದೆ. ವ್ಯಾಪಾರಸ್ಥನಿಗೆ ಹಣ ಸಿಗುವಂತಾಗಿದೆ. ಮುಂದಿನ ವರ್ಷ ಇದೇ ರೀತಿ ಬೆಲೆ ಇರುತ್ತದೆ ಅಂದುಕೊAಡಿದ್ದೇವೆ.

-ಚಿಕ್ಕವೆಂಕಟರೆಡ್ಡಿ, ರೈತ

ಕೋಟ್

ಕಳೆದ ೫ ವರ್ಷಗಳ ಹಿಂದೆ ಹುಣಸೇಕಾಯಿ ಮತ್ತು ಹಣ್ಣಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿತ್ತು. ಬೇಸಿಗೆ ಕಾಲದಲ್ಲಿ ಹುಣಸೇ ಮರಗಳಲ್ಲಿ ಕಾಯಿ ಕೀಳುವುದು, ಚಿಪ್ಪೆ ತೆಗೆಯುವುದು, ಹಣ್ಣು ಮಾಡುವುದು ಎಂದರೆ ಗ್ರಾಮೀಣ ಭಾಗದಲ್ಲಿ ೨ ರಿಂದ ೩ ತಿಂಗಳ ಕಾಲ ಕೂಲಿ ಕಾರ್ಮಿಕರಿಗೆ ಕೂಲಿ ಸಿಗುತ್ತಿತ್ತು. ಇತ್ತೀಚೆಗೆ ಬೆಲೆ ಕುಸಿದ ಕಾರಣ ಹುಣಸೇ ಬೇಸಾಯ ಮಾಡುವವರ ಸಂಖ್ಯೆಯು ಕ್ಷೀಣಿಸಿತ್ತು. ಈಗ ದಿಢೀರನೆ ಬೆಲೆ ಏರಿಕೆಯಾಗಿದೆರ. ಇದೇ ರೀತಿ ಬೆಲೆ ಮುಂದುವರೆದರೆ ಈ ಹಿಂದೆ ಇದ್ದಂತೆ ಹುಣಸೇ ಬೇಸಾಯ ಮತ್ತೆ ಮರುಕಳಿಸುವಂತಾಗುತ್ತದೆ. ರೈತನ ಜೇಬು ತುಂಬುವAತಾಗುತ್ತದೆ.

-ಪಿ.ಆರ್.ಸೂರ್ಯನಾರಾಯಣ, ರೈತ

ಚಿತ್ರ ೦೬ ಕೆ.ಎಲ್.ಆರ್. ೦೧ : ಹುಣಸೇಮರದಲ್ಲಿ ಇರುವ ಹುಣಸೇಕಾಯಿ ಫಸಲು

ಚಿತ್ರ ೦೬ ಕೆ.ಎಲ್.ಆರ್. ೦೧ಎ : ಚಿಕ್ಕವೆಂಕಟರೆಡ್ಡಿ, ರೈತ ಭಾವಚಿತ್ರ

ಚಿತ್ರ ೦೬ ಕೆ.ಎಲ್.ಆರ್. ೦೧ಬಿ : ಪಿ.ಆರ್.ಸೂರ್ಯನಾರಾಯಣ, ರೈತ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net