ಹಿರೇಹಳ್ಳಿ ಭಾಗದಲ್ಲಿ ಅನಿಲ್ ಮತಯಾಚನೆ

24HDK01
ಎಚ್.ಡಿ.ಕೋಟೆ ತಾಲೂಕಿನ ಹಿರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಅನಿಲ್ ಚಿಕ್ಕಮಾದು ಮತಯಾಚನೆ ಮಾಡಿದರು.
Published on

ಎಚ್.ಡಿ.ಕೋಟೆ : ತಾಲೂಕಿನ ಮತ್ತಷ್ಟು ಅಭಿವೃದ್ಧಿಗೆ ನನ್ನನ್ನು ಮರು ಆಯ್ಕೆ ಮಾಡಬೇಕು ಎಂದು ಕಾಂಗ್ರೆಸ್ ಅಭ್ಯರ್ಥಿ ಶಾಸಕ ಅನಿಲ್ ಚಿಕ್ಕಮಾದು ಮನವಿ ಮಾಡಿದರು.
ದಾಸನಪುರ, ದಟ್ಟಹಳ್ಳ, ಹಿರೇಹಳ್ಳಿ ಎ ಕಾಲನಿ, ಹಿರೇಹಳ್ಳಿ ಗಿರಿಜ್ನ ಕಾಲನಿ, ಹಿರೇಹಳ್ಳಿ, ಅಂಕನಾಥಪುರ, ಪೆಂಜಹಳ್ಳಿ ಹಾಡಿ, ಸತ್ತಿಗೆಹುಂಡಿ, ಪೆಂಜಹಳ್ಳಿ ಹಾಡಿ, ತಾರಕ, ಹಿರೇಹಳ್ಳಿ ಬಿ ಕಾಲನಿ ಸೇರಿದಂತೆ ವಿವಿಧ ಹಾಡಿ ಹಾಗೂ ಗ್ರಾಮಗಳಲ್ಲಿ ಮತಯಾಚಿಸಿ ಗ್ರಾಮದ ಮುಖಂಡರೊಂದಿಗೆ ಚರ್ಚಿಸಿದರು. ಶಾಸಕನಾಗಿದ್ದ 5 ವರ್ಷಗಳ ಅವಧಿಯಲ್ಲಿ ತಾಲೂಕಿನ ಜನರ ನೋವಿಗೆ ಸ್ಪಂದಿಸಿದ್ದು, ಗ್ರಾಮೀಣ ಭಾಗದಲ್ಲಿ ಸಾಕಷ್ಟು ಅನುದಾನ ನೀಡಿ ಅಭಿವೃದ್ಧಿ ಕೆಲಸಗಳನ್ನು ಕೈಗೊಂಡಿದ್ದೇನೆ. ಮುಂದೆಯೂ ಶ್ರಮಿಸಲು ನಿಮ್ಮೆಲ್ಲರ ಸಹಕಾರ ಮುಖ್ಯ ಎಂದರು.
ಈ ಭಾಗದ ಅನೇಕ ಗ್ರಾಮಗಳಲ್ಲಿ ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ತಿ, ಆಸ್ಪತ್ರೆ ನಿರ್ಮಾಣ, ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಶ್ರಮಿಸಿದ್ದೇನೆ. ಬಗರ್ ಹುಕ್ಕುಂ ಸಾಗುವಳಿ ಹಕ್ಕುಪತ್ರಗಳ ವಿತರಣೆಯಂತಹ ಜನಪರ ಕೆಲಸಗಳನ್ನು ಮಾಡಿದ್ದೇನೆ. ಎಲ್ಲ ಸಮುದಾಯಗಳಿಗೂ ಅನುಕೂಲವಾಗುವಂತೆ ಸಮುದಾಯ ಭವನಗಳ ನಿರ್ಮಾಣಕ್ಕೂ ಅನುದಾನ ಒದಗಿಸಿದ್ದೇನೆ. ಮುಂದೆ ನಿಮ್ಮ ಸೇವೆ ಮಾಡಲು ಉತ್ಸುಕನಾಗಿದ್ದು, ಮತ್ತೊಮ್ಮೆ ಅವಕಾಶ ಮಾಡಿಕೊಡಿ ಎಂದು ಕೋರಿದರು. ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ನಂಜನಗೂಡು ಕೆಪಿಸಿಸಿ ಉಸ್ತುವಾರಿ ಹಿರೇಹಳ್ಳಿ ಸೋಮೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಚ್.ಸಿ.ಮಂಜುನಾಥ್, ಮುಖಂಡರಾದ ನವೀನ್ ದಾಸ್, ನಾಗನಹಳ್ಳಿ ಪ್ರದೀಪ್, ಜಯರಾಮ್, ಮೊಳೆಯೂರು ಆನಂದ್, ಶಂಭು ಲಿಂಗನಾಯಕ, ಕಾಳಿಂಗೇಗೌಡ, ಸುಬ್ರಹ್ಮಣ್ಯ, ಸತೀಶ್‌ಗೌಡ, ಗಣೇಶಾಚಾರಿ, ಸಿದ್ದರಾಮು, ಫಯಾಜ್, ನಯಾಜ್, ಶಿವಲಿಂಗನಾಯಕ, ಅಶೋಕ ಇದ್ದರು.

ಅನಿಲ್ ಚಿಕ್ಕಮಾದು ಗ್ರಾಮಗಳಿಗೆ ಭೇಟಿ ನೀಡುತ್ತಿರುವ ವಿಚಾರ ತಿಳಿದು ಜನರು ಗ್ರಾಮಕ್ಕೆ ಆತ್ಮೀಯವಾಗಿ ಬರಮಾಡಿಕೊಂಡು ಅಭಿನಂದಿಸಿ, ಸನ್ಮಾನಿಸಿದರು. ಪಟಾಕಿ ಸಿಡಿಸಿ ಸಂಭ್ರಮಿಸಿ ಶಾಸಕರ ಪರ ಜೈಕಾರ ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net