ಹಾವು ಕಡಿದು ರೈತ ಮಹಿಳೆ ಸಾವು

17 LAKSHMAMMA-1
Published on

ಕೆ.ಆರ್.ನಗರ: ತಾಲೂಕಿನ ಕಾಳೇನಹಳ್ಳಿ ಗ್ರಾಮದಲ್ಲಿ ಹಾವು ಕಡಿದ ಪರಿಣಾಮ ರೈತ ಮಹಿಳೆ ಲಕ್ಷ್ಮಮ್ಮ(46) ಎಂಬುವರು ಬುಧವಾರ ಮೃತಪಟ್ಟಿದ್ದಾರೆ.


ಅರಕಲಗೂಡು ತಾಲೂಕು ಕೇರಳಾಪುರ ಗ್ರಾಮದ ಸುರೇಶ್ ಎಂಬುವರ ಜತೆ 28 ವರ್ಷಗಳ ಹಿಂದೆ ಲಕ್ಷ್ಮಮ್ಮ ಅವರ ಮದುವೆ ನಡೆದಿತ್ತು. ಆದರೆ ಪತಿ ಅಕಾಲಿಕ ಮರಣಕ್ಕೀಡಾದ ನಂತರ ಪುತ್ರ ಅಜಯ್‌ಕುಮಾರ್ ಜತೆ ತವರು ಮನೆಯಲ್ಲಿ ಹಲವು ವರ್ಷಗಳಿಂದ ವಾಸವಿದ್ದರು.


ಲಕ್ಷ್ಮಮ್ಮ ನಿತ್ಯ ಜಮೀನಿನ ಕೂಲಿ ಕೆಲಸಕ್ಕಾಗಿ ಹೋಗುತ್ತಿದ್ದರು. ಅಂತೆಯೆ, ಕೆಲಸಕ್ಕೆ ಹೋಗಿದ್ದ ಸಂರ್ದರ್ಭ ಹಾವು ಕಡಿದಿದೆ. ಜತೆಯಲ್ಲಿದ್ದ ಮಹಿಳೆಯರು ಗ್ರಾಮಸ್ಥರ ಸಹಕಾರದಿಂದ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.


ಮರಣೋತ್ತರ ಪರೀಕ್ಷೆಯ ನಂತರ ಪತಿಯ ಕುಟುಂಬದವರು ಶವವನ್ನು ಕೇರಳಾಪುರಕ್ಕೆ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನಡೆಸಿದರು. ಕೆಪಿಸಿಸಿ ಕಾರ್ಯಕಾರಿಣಿ ಸದಸ್ಯ ದೊಡ್ಡಸ್ವಾಮೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net