

ರಾಣೆಬೆನ್ನೂರ: ಪಾಕಿಸ್ತಾನದ ಕಲಾವಿದರ ದ ಲೆಜೆಂಡ್ ಆ್ ಮೌಲಾ ಜಟ್ಟ ಚಲನಚಿತ್ರವನ್ನು ದೇಶದಲ್ಲಿ ನಿಷೇಧಿಸಬೇಕು. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ಮಾಡಿರುವುದನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಗುರುವಾರ ತಹಸೀಲ್ದಾರ್ ಆರ್.ಎಚ್. ಭಾಗವಾನ್ ಮೂಲಕ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಹುದ್ದೆಗಾಗಿ ಉರ್ದು ಭಾಷೆ ಕಡ್ಡಾಯ ಮಾಡಿ ಆದೇಶಿಸಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಉದ್ಯೋಗದಿಂದ ವಂಚಿತರಾಗುವಂತಾಗಿದೆ. ಅಲ್ಲದೆ ಇದು ಕನ್ನಡ ಭಾಷೆಗೆ ಅವಮಾನಿಸಿದಂತೆ ಆಗಿದೆ. ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಆದೇಶ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಭಾರತದ ವಿರುದ್ಧ ಅಘೋಷಿತ ಯುದ್ಧ ಸಾರಿ ಸಾವಿರಾರು ಸೈನಿಕರು ಮತ್ತು ನಿರಪರಾಧಿ ಭಾರತೀಯರನ್ನು ಕೊಲ್ಲುವ ಪಾಕಿಸ್ತಾನದ ಕಲಾವಿದರ ದ ಲೆಜೆಂಡ್ ಆಫ್ ಮೌಲಾ ಜಟ್ಟ ಚಲನಚಿತ್ರವನ್ನು ಭಾರತದಲ್ಲಿ ನಿಷೇಧಿಸಬೇಕು ಎಂದು ಆಗ್ರಹಿಸಿದರು.
ಪ್ರಮುಖರಾದ ಗದಿಗೆಪ್ಪ ಹೊಟ್ಟಿಗೌಡ್ರ, ಜಟ್ಟೆಪ್ಪ ಕರೇಗೌಡ್ರ, ಕಿರಣ ಗುಳೆದ, ಯಲ್ಲಪ್ಪ ಚಿಕ್ಕಣ್ಣನವರ, ಕಿರಣ ಅಂತರವಳ್ಳಿ, ಬಿ.ಸಿ.ನಂದಿಹಳ್ಳಿ, ರಾಯಣ್ಣ ಮಾಕನೂರ, ವಿಕ್ರಾಂತ ವಾಲಿ ಮತ್ತಿತರರು ಉಪಸ್ಥಿತರಿದ್ದರು.