ಹಣವಿದ್ದ ಪರ್ಸ್ ಮರಳಿಸಿದ ಬಾಲಕಿ

1hnr1
Published on

ಹೊನ್ನಾವರ: ಪಟ್ಟಣದ ಪ್ರಭಾತನಗರದ ರಸ್ತೆಯಲ್ಲಿ ಬಿದ್ದಿದ್ದ 22 ಸಾವಿರ ರೂ. ತುಂಬಿದ್ದ ಪರ್ಸ್ ಅನ್ನು ಬಾಲಕಿಯೊಬ್ಬಳು ವಾರಸುದಾರರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಘಟನೆ ಶನಿವಾರ ನಡೆದಿದೆ.

ಪ್ರಭಾತ ನಗರದಲ್ಲಿರುವ ಶಿಕ್ಷಣ ಇಲಾಖೆ ಸಂಯೋಜಕ ಆರ್.ಪಿ. ಹರಿಜನ ಅವರ ಪುತ್ರಿ 9ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿ ಗೀತಾ ಹಿರೇಹಾಳ ಮನೆಯ ಸಮೀಪವಿರುವ ಅಂಗಡಿಗೆ ಹೋಗಿ ಮರಳಿ ಬರುವಾಗ ರಸ್ತೆಯಲ್ಲಿ ಹಣ ತುಂಬಿದ್ದ ಪರ್ಸ್ ದೊರೆತಿದೆ. ಅದನ್ನು ಮನೆಗೆ ತಂದು ತಂದೆಯ ಬಳಿ ಹೇಳಿದ್ದಾಳೆ. ನಂತರ ಪರ್ಸ್

ನಲ್ಲಿದ್ದ ಗುರುತಿನ ಚೀಟಿ ಮತ್ತಿತರ ದಾಖಲೆ ಪರಿಶೀಲಿಸಿದಾಗ ಹೊನ್ನಾವರ ಅರ್ಬನ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುವ ನರಸ ಮಂಜು ಗೌಡ ಅವರದು ಎಂಬುದು ಗೊತ್ತಾಗಿದೆ. ಅವರನ್ನು ಸಂರ್ಪಸಿ ಖಚಿತ ಪಡಿಸಿಕೊಂಡು ಹಣವನ್ನು ಮರಳಿಸಿದ್ದಾರೆ. ಬಾಲಕಿ ಮತ್ತು ಅವಳ ತಂದೆಯ ಪ್ರಾಮಾಣಿಕತೆಗೆ ಕೃತಜ್ಞತೆ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net