ಹಕ್ಕಿಗಾಗಿ ಹೊರಾಡಬೇಕು ಹಠ ಸಾಧನೆಗಲ್ಲ

111111111112
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಬಾಳಬೇಕು. ಭಿನ್ನಾಭಿಪ್ರಾಯಗಳಿದ್ದರೆ ಹಕ್ಕಿಗಾಗಿ ಹೊರಾಡಬೇಕೆ ಹೊರತು ಹಠ ಸಾಧಿಸಲು ಅಲ್ಲ ಎಂದು ನಿವೃತ್ತ ನ್ಯಾಯಾಧೀಶ ಎಸ್.ಎಚ್. ಮಿಟ್ಟಲಕೋಡ ಹೇಳಿದರು.
ನಗರದ ಲಕಮನಹಳ್ಳಿಯ ಬಣಜಿಗ ಭವನದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ 20ನೇ ವರ್ಷದ ಸಂಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮಾಜದ ಬಡ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದು. ಸಮಾಜದ ಮಕ್ಕಳಿಗೆ ವಿದ್ಯಾರ್ಥಿ ನಿಲಯದ ಅವಶ್ಯಕತೆ ಇದ್ದು, ಈ ದಿಶೆಯಲ್ಲಿ ಸಂಘದ ಪದಾಧಿಕಾರಿಗಳು ಶ್ರಮಿಸಬೇಕು ಎಂದರು.
ಸಮಾಜದ ಮುಖಂಡ ಮಲ್ಲಿಕಾರ್ಜುನ ರೋಡಗಿ ಮಾತನಾಡಿ, ಸಮಾಜವನ್ನು ಸಂಘಟಿಸಲು ಹಿರಿಯರು ನಿಸ್ವಾರ್ಥದಿಂದ ಮುಂದೆ ಬರಬೇಕು ಎಂದರು.
ಬಣಜಿಗ ಸಮಾಜವನ್ನು ಸಂಘಟಿಸಿ ಏಳ್ಗೆಗಾಗಿ ಶ್ರಮಿಸಿದ ದಿ. ಮಲ್ಲಿಕಾರ್ಜುನ ಅಗಡಿ ಮತ್ತು ದಿ. ಮಲ್ಲಪ್ಪ ಕುಂಬಾರಿ ಅವರ ಸೇವೆಯನ್ನು ಗಣ್ಯರು ಸ್ಮರಿಸಿದರು.
ಜಿಲ್ಲಾಧ್ಯಕ್ಷ ಶೇಖರ ಕವಳಿ ಅಧ್ಯಕ್ಷತೆ ವಹಿಸಿದ್ದರು. ಮಲ್ಲಿಕಾರ್ಜುನ ಸಾಹುಕಾರ, ಮಹಾಂತೇಶ ಗುಂಜೆಟ್ಟಿ, ಶಿವಾನಂದ ಬಿದರಿ, ಆನಂದ ಉಪ್ಪಿನ, ವಿ.ಸಿ. ಸವಡಿ, ಈರಣ್ಣ ಮಾಳಗಿ, ಮಹೇಶ ಕಡಗದ, ಬಸವರಾಜ ಹೆಸರೂರ, ಶಂಕರ ಕುಂಬಿ, ಶಾಂತವೀರ ಬೆಟಗೇರಿ, ಶಿವಾನಂದ ಸೊಬರದ, ರವಿ ಕಮ್ಮಟಗಿ, ವೀರೇಶ ಸಂಗಳದ, ಮಲ್ಲಿಕಾರ್ಜುನ ಕನಶೆಟ್ಟಿ, ನಾಗರತ್ನಾ ನಾಗಶೆಟ್ಟಿ, ಚಂದ್ರಶೇಖರ ಮಹಾಜನಶೆಟ್ಟಿ, ಇತರರಿದ್ದರು.
ತಾಲೂಕು ಅಧ್ಯಕ್ಷ ಅರುಣ ಶೀಲವಂತ ಸ್ವಾಗತಿಸಿದರು. ವಿಶ್ವನಾಥ ಅಂಗಡಿ ನಿರೂಪಿಸಿದರು. ವೀರೇಶ ಕೆಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net