ಸ್ಟಾರ್ ಲೋಕಲ್ ಮಾರ್ಟ್ 50ನೇ ಮಳಿಗೆ ಆರಂಭ

252525
Published on

ಬೆಳಗಾವಿ: ಸ್ಟಾರ್ ಲೋಕಲ್ ಮಾರ್ಟ್ ತನ್ನ 50ನೇ ಮಳಿಗೆ ಆರಂಭಿಸಿರುವುದು ನಮ್ಮ ಎಲ್ಲ ಪಾಲುದಾರರು ಮತ್ತು ಉದ್ಯೋಗಿಗಳಿಗೆ ಹೆಮ್ಮೆಯ ಕ್ಷಣವಾಗಿದೆ ಎಂದು ಘೋಡಾವತ್ ಕನ್ಸ್ಯೂಮರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೇನಿಕ್ ಘೋಡಾವತ್ ಹೇಳಿದರು.

ಮಹಾರಾಷ್ಟ್ರದ ಉತ್ತಮನಗರ-ಪುಣೆ, ನಾರ್ಹೆ-ಪುಣೆ ಮತ್ತು ವಿವೇಕಾನಂದ-ಕೊಲ್ಲಾಪುರದಲ್ಲಿ ಕ್ರಮವಾಗಿ 48, 49 ಮತ್ತು 50ನೇ ಹೊಸ ಮಳಿಗೆಯನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಸ್ಟಾರ್ ಲೋಕಲ್ ಮಾರ್ಟ್ ನಂಬಲಾಗದ ಸಾಧನೆ ಮಾಡಲು ನಮಗೆ ದಾರಿಮಾಡಿಕೊಟ್ಟಿತು. ಅದು ನಮ್ಮ ಗ್ರಾಹಕರಿಗೆ ಸೊಗಸಾದ ಶಾಪಿಂಗ್ ಅನುಭವ ನೀಡುತ್ತದೆ ಎಂದರು.

ಸಂಸ್ಥಾಪಕ ಅಧ್ಯಕ್ಷ ಸಂಜಯ ಡಿ.ಘೋಡಾವತ್ ಮಾತನಾಡಿ, ನಮ್ಮ ಬೆಳವಣಿಗೆಯು ಇಡೀ ಸ್ಟಾರ್ ಲೋಕಲ್ ಮಾರ್ಟ್ ಕುಟುಂಬದ ಶ್ರಮ ಮತ್ತು ಬುದ್ಧಿವಂತಿಕೆಗೆ ಸಾಕ್ಷಿಯಾಗಿದೆ. ಬೆಳವಣಿಗೆಯ ಉದ್ದಕ್ಕೂ, ಸ್ಟಾರ್ ಲೋಕಲ್ ಮಾರ್ಟ್ ಯಾವುದೇ ಸಮಯದಲ್ಲೂ ತನ್ನ ಧ್ಯೇಯವನ್ನು ಎಂದಿಗೂ ಬಿಟ್ಟಿಲ್ಲ. ದೇಶಾದ್ಯಂತ ಗ್ರಾಹಕರಿಗೆ ರಿಟೇಲ್ ಅನುಭವವನ್ನು ಹೆಚ್ಚಿಸುವ ನಮ್ಮ ಕರ್ತವ್ಯವನ್ನು ಮುಂದುವರಿಸಲು ನಾವು ಬಯಸುತ್ತೇವೆ ಎಂದರು.

ಸ್ಟಾರ್ ಲೋಕಲ್ ಮಾರ್ಟ್ ಪ್ರಸ್ತುತ ಮಹಾರಾಷ್ಟ್ರದ ಕೊಲ್ಲಾಪುರ, ಪುಣೆ, ಸಾಂಗ್ಲಿ, ಇಚಲಕರಂಜಿ, ರತ್ನಗಿರಿ, ಮಿರಜ್ ಹಾಗೂ ಕರ್ನಾಟಕದ ಬೆಳಗಾವಿ, ಬಾಗಲಕೋಟೆ ಮತ್ತು ಇತರ ಸ್ಥಳಗಳಲ್ಲಿ 50 ರಿಟೇಲ್ ಸ್ಟೋರ್‌ಗಳು ಕಾರ್ಯ ನಿರ್ವಹಿಸುತ್ತಿವೆ. 25,000 ಉದ್ಯೋಗಾವಕಾಶ ಸೃಷ್ಟಿಸಲು ಪ್ರಯತ್ನಿಸುತ್ತಿದೆ. 2025ರ ವೇಳೆಗೆ 3,000 ಸ್ಟೋರ್ ಪ್ರಾರಂಭಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net