ಸೊಸೈಟಿಯಿಂದ ರೈತರಿಗೆ ಸಾಲದ ರೂಪದಲ್ಲಿಯೇ ಲಾಭದಾಯಕ ಸಸಿಗಳನ್ನು ನೀಡಲು ಡಿಸಿಪಿ ದೇವರಾಜ್ ಸಲಹೆ,

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ರೈತರು ಅಭಿವೃದ್ಧಿಯಾಗಲು ಲಾಭದಾಯಕ ಸಸಿಗಳನ್ನು ಸೊಸೈಟಿ ಮೂಲಕವೇ ಸಾಲದ ರೂಪದಲ್ಲಿ ನೀಡುವ ಮೂಲಕ ಹೊಸ ಬದಲಾವಣೆಗೆ ಮುಂದಾಗಬೇಕು ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್ ಸಲಹೆ ನೀಡಿದರು,

ಭಾನುವಾರ ತಾಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಉದ್ವಾಟನೆ ಹಾಗೂ ೨೦೨೩-೨೪ ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸಹಕಾರಿ ಸಂಘಗಳು ಎಂದರೆ ಕೇವಲ ಸಾಲ ಕೊಡುವುದು ಸಾಲವನ್ನು ಕಟ್ಟಿಸಿಕೊಳ್ಳುವುದಕ್ಕೆ ಅಷ್ಟೇ ಸೀಮಿತಗೊಳಿಸದೇ ರೈತರಿಗೆ ಉಪಯುಕ್ತ ಮಾಹಿತಿ ನೀಡಬೇಕು. ರೈತರು ಪ್ರತಿ ಬಾರಿ ಟಮೋಟ, ಆಲೂಗಡ್ಡೆ ಯಂತಹ ತರಕಾರಿ ಬೆಳೆಗಳಿಂದ ಸಾಲದ ಸುಳಿಯಲ್ಲಿ ಸಿಕ್ಕಿ ಜೀವನ ನಿರ್ವಹಣೆ ಕಷ್ಟವಾಗುತ್ತದೆ ಹೊಸ ಹೊಸ ಬಗೆಯ ಹಣ್ಣಿನ ಗಿಡಗಳನ್ನು ಸೊಸೈಟಿ ಮೂಲಕವೇ ನೀಡಿ, ಲಾಭ ಪಡೆಯುವುದು ಹೇಗೆ ಎಂಬುದನ್ನು ತೋರಿಸಿಕೊಡಬೇಕು ಎಂದರು.

ಯಾರಿಗೆ ಆಗಲಿ ಅಧಿಕಾರ ಎಂಬುದು ಶಾಶ್ವತವಲ್ಲ. ತಮಗೆ ಅಧಿಕಾರ ಸಿಕ್ಕಾಗ ಬದಲಾವಣೆ ಮಾಡುವುದು ಅವರ ಜವಾಬ್ದಾರಿಯಾಗಬೇಕು. ಸೊಸೈಟಿ ಕಟ್ಟಡವು ರೈತರ ಸ್ವತ್ತು ಆಗಿದ್ದು, ಇಲ್ಲಿಂದ ಹೋಬಳಿಯ ರೈತರಿಗೆ ಮಾಹಿತಿ, ಮಾರ್ಗದರ್ಶನ ನಿರಂತರವಾಗಿ ನೀಡಬೇಕು. ಸೊಸೈಟಿಗೆ ಸ್ವಂತ ಜಾಗವನ್ನು ಮಂಜೂರು ಮಾಡಿದ್ದರು. ಕಾರಣಾಂತರಗಳಿAದ ಸಮಸ್ಯೆಯಾಗಿತ್ತು. ಕೂಡಲೇ ಜಿಲ್ಲಾಧಿಕಾರಿಯೊಂದಿಗೆ ಮಾತಾಡಿ, ಆದಷ್ಟು ಬೇಗ ಸಮಸ್ಯೆ ಇತ್ಯರ್ಥ ಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.

ವಕ್ಕಲೇರಿ ರೇಷ್ಮೆ ಬೆಳಗಾರರ ಹಾಗೂ ರೈತರ ಸಹಕಾರ ಸಂಘದ ಅಧ್ಯಕ್ಷ ಎಂ.ಪಾಲಾಕ್ಷಗೌಡ ಮಾತನಾಡಿ, ಸೊಸೈಟಿಯಲ್ಲಿ ಈ ಸಾಲಿನಲ್ಲಿ ೨೩.೩೯ ಲಕ್ಷದಷ್ಟು ಲಾಭವನ್ನು ಗಳಿಸಿದೆ. ಈ ವರ್ಷವು ಸಹ ರೈತರಿಗೆ ಮಹಿಳಾ ಸಂಘಗಳಿಗೆ ಹಾಗೂ ರೇಷ್ಮೆ ಬೆಳೆಗಾರರಿಗೆ ಹೆಚ್ಚಿನ ಸಾಲ ನೀಡುವ ಮೂಲಕ ಜಿಲ್ಲೆಗೆ ಮಾದರಿ ಸೊಸೈಟಿಯಾಗಿ ಮಾಡಿದ್ದೇವೆ. ರೈತ ಭವನದ ನಿರ್ಮಾಣಕ್ಕೆ ೩೭.೫೦ ಲಕ್ಷದಷ್ಟು ದಾನಿಗಳ ಮೂಲಕವೇ ಪಡೆದಿದ್ದು, ಇದರಲ್ಲಿ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ೧೫ ಲಕ್ಷವನ್ನು ಅಪೆಕ್ಸ್ ಬ್ಯಾಂಕ್ ಮೂಲಕ ಮತ್ತು ಮಾಜಿ ಕೆ.ಶ್ರೀನಿವಾಸಗೌಡ ೪ ಲಕ್ಷ ಸೇರಿದ್ದು, ಉಳಿದ ಹಣವನ್ನು ದಾನಿಗಳಿಂದ ಪಡೆದಿದ್ದು, ಎಂಎಲ್ಸಿ ಅನಿಲ್ ಕುಮಾರ್ ಅವರು ೧೦ ಲಕ್ಷ ಕೊಡತ್ತೇವೆ ಎಂದು ಭರವಸೆ ನೀಡಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಜೆಡಿಎಸ್ ಮುಖಂಡ ವಕ್ಕಲೇರಿ ರಾಮು, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಂಬರೀಶ್, ಕ್ರಿಯಾಜಿನ್ ಸಂಸ್ಥೆಯ ಮಂಜುನಾಥ್ ಯಾದವ್, ನಾರಾಯಣಸ್ವಾಮಿ, ಶ್ರೀಕಾಂತ್, ಸತೀಶ್, ವಕ್ಕಲೇರಿ ಗ್ರಾಪಂ ಅಧ್ಯಕ್ಷೆ ರಾಧಿಕಾ ಮಂಜುನಾಥ್, ಮುದವತ್ತಿ ಗ್ರಾಪಂ ಅಧ್ಯಕ್ಷೆ ರತ್ನಮ್ಮ, ಸೊಸೈಟಿ ಉಪಾಧ್ಯಕ್ಷ ವಿ.ಮಂಜುನಾಥ್, ನಿರ್ದೇಶಕರಾದ ಎಂ.ಆನAದ್ ಕುಮಾರ್, ಆರ್.ಚಂದ್ರೇಗೌಡ, ವೆಂಕಟಗಿರಿಯಪ್ಪ, ಟಿ.ಮುನಿಯಪ್ಪ, ಜಿ.ಎಸ್ ಸದಾಶಿವಯ್ಯ, ಎಸ್.ಕೃಷ್ಣಪ್ಪ, ಬಿ.ಎನ್ ಚಿದಾನಂದ, ಎಂ ರಮೇಶ್, ಚೌಡಮ್ಮ, ಶಾಂತಕುಮಾರಿ ಕಾರ್ಯದರ್ಶಿ ಎಂ.ಮAಜುನಾಥ್ ಮುಂತಾದವರು ಇದ್ದರು.

ಚಿತ್ರ ೨೨ ಕೆ.ಎಲ್.ಆರ್. ೦೭ : ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಕಟ್ಟಡ ಉದ್ವಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಬೆಂಗಳೂರು ಪೂರ್ವ ವಲಯ ಡಿಸಿಪಿ ಡಿ.ದೇವರಾಜ್, ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಜೆಡಿಎಸ್ ಮುಖಂಡ ವಕ್ಕಲೇರಿ ರಾಮು ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net