ಸೈನಿಕರ ದೇಶಪ್ರೇಮ ಅನುಪಮ

27sri-1 kargil
ಮೆಣಸೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ನಿವೃತ್ತ ಸೈನಿಕ ಕೆ.ಎಸ್.ಸೀತಾರಾಮ್ ಅವರನ್ನು ಗೌರವಿಸಲಾಯಿತು. ಸುರೇಶ್ ಹೆಗಡೆ, ಮಂಜುನಾಥ್ ಗೌಡ, ರವೀಂದ್ರ, ಪ್ರಿಯದರ್ಶಿನಿ, ಮಂಜುಳಾ ಇತರರಿದ್ದರು.
Published on

ಶೃಂಗೇರಿ: ಅತ್ಯಂತ ಕಠಿಣ ಸಂದರ್ಭದಲ್ಲಿ ದುರ್ಗಮ ಪ್ರದೇಶದಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಗೆದ್ದ ಸೈನಿಕರ ದೇಶಪ್ರೇಮ ಅನುಪಮ ಎಂದು ಎಎಸ್‌ಐ ಮೋಹನ್ ರಾಜಣ್ಣ ತಿಳಿಸಿದರು.

ರಾಷ್ಟ್ರೀಯ ಸೇವಾ ಯೋಜನಾ ಘಟಕ ಹಾಗೂ ರೋಟರಿ ಸಂಸ್ಥೆ ಶನಿವಾರ ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ಶಿಕ್ಷಣದ ಜತೆ ರಾಷ್ಟ್ರಪ್ರೇಮ ಬೆಳೆಸಿಕೊಳ್ಳಬೇಕು. ಮಿಲಿಟರಿ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಹುದ್ದೆಗಳನ್ನು ಅಲಂಕರಿಸಿ ಭಾರತಮಾತೆಯ ಋಣ ತೀರಿಸಬೇಕು. ದೇಶ ಎಲ್ಲಕ್ಕಿಂತ ಸರ್ವಶ್ರೇಷ್ಠವಾದುದು. ದೇಶಕ್ಕಾಗಿ ಮಾಡುವ ಸೇವೆ ಉತ್ಕೃಷ್ಟವಾದುದು ಎಂದರು.

ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಆಶಾಲತಾ ಮಾತನಾಡಿ, ಧ್ಯೆರ್ಯ, ತ್ಯಾಗ ಮನೋಭಾವದ ಜತೆಗೆ ದೇಶಭಕ್ತಿಯನ್ನು ಅನಾವರಣಗೊಳಿಸಿದ ಕಾರ್ಗಿಲ್ ಯುದ್ಧದ ವಿಜಯ ಸೈನಿಕರ ಸಮರ್ಪಣಾಭಾವದಿಂದ ದೊರಕಿದೆ. ದೇಶದಲ್ಲಿ ಉಂಟಾಗುವ ಸಂಘರ್ಷಗಳಿಂದ ರಾಷ್ಟ್ರದ ಅಸ್ಮಿತೆಗೆ ಧಕ್ಕೆ ಉಂಟಾಗುತ್ತದೆ. ಹಾಗಾಗಿ ದೇಶದ ಉನ್ನತಿಗಾಗಿ ನಮ್ಮ ಮನೋಬಲ ಬದಲಾಗಬೇಕು. ದ್ವೇಷ-ಹಿಂಸೆಗಳು ಪರಿವರ್ತನೆಗೊಂಡು ಜೀವನದಲ್ಲಿ ಸಾಮರಸ್ಯ ಮೂಡಬೇಕು ಎಂದು ತಿಳಿಸಿದರು.

ರೋಟರಿ ಅಧ್ಯಕ್ಷ ಅಂಬಲಮನೆ ಸುಬ್ರಹ್ಮಣ್ಯ ಮಾತನಾಡಿ, ಪರಿವರ್ತನಶೀಲ ಸಮಾಜಕ್ಕೆ ಶಾಶ್ವತವಾದ ಮೌಲ್ಯ ನೀಡಲು ಯುವ ಪೀಳಿಗೆ ಸನ್ನದ್ಧವಾಗಬೇಕು. ದೇಶ ಮೊದಲು ಎಂಬ ಪರಿಕಲ್ಪನೆಯಿಂದ ನಾವು ಬೆಳೆದರೆ ಮಾತ್ರ ದೇಶ ಪ್ರಗತಿಪಥದತ್ತ ಸಾಗಲು ಸಾಧ್ಯ ಎಂದರು.

ಪ್ರಾಧ್ಯಾಪಕ ಚೇತನ್ ಅವರಿಂದ ಕಾರ್ಗಿಲ್ ಯುದ್ಧ ವಿಜಯಗಳ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ನಿವೃತ್ತ ಸೈನಿಕ ಕೆ.ಎಸ್.ಸೀತಾರಾಮ್ ಅವರನ್ನು ಗೌರವಿಸಲಾಯಿತು. ರೋಟರಿ ಸಂಸ್ಥೆ ಕಾರ್ಯದರ್ಶಿ ಪ್ರಿಯದರ್ಶಿನಿ ಹೆಗಡೆ, ವಲಯ-6ರ ಸೇನಾನಿ ಮಹೇಶ್, ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ, ಎನ್‌ಎಸ್‌ಎಸ್ ಅಧಿಕಾರಿ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net