ಸುನೀಲ್‌ಗೆ ನೇಶನ್ ಬಿಲ್ಡರ್ ಪ್ರಶಸ್ತಿ

award
ಬಾಳೆಹೊನ್ನೂರಿನ ರೋಟರಿ ಕ್ಲಬ್‌ನಿಂದ ಪ್ರಾಧ್ಯಾಪಕ ಸಿ.ವಿ.ಸುನೀಲ್ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎ.ಆರ್.ಸುರೇಂದ್ರ, ಬಿ.ಸಿ.ಗೀತಾ, ಎಚ್.ಎಚ್.ಕೃಷ್ಣಮೂರ್ತಿ, ಸಂದೇಶ್, ವೆಂಕಟೇಶ್ ಇದ್ದರು.
Published on

ಬಾಳೆಹೊನ್ನೂರು: ಪಟ್ಟಣದ ರೋಟರಿ ಕ್ಲಬ್‌ಯಿಂದ ಬುಧವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಬಿಇಎಸ್ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಸಿ.ವಿ.ಸುನೀಲ್ ಅವರಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ರೋಟರಿ ಜಿಲ್ಲಾ ಗವರ್ನರ್ ಬಿ.ಸಿ.ಗೀತಾ ಮಾತನಾಡಿ, ಶಿಕ್ಷಕರು ಪಾಠದೊಂದಿಗೆ ಮಾಲ್ಯಾಧಾರಿತ ಶಿಕ್ಷಣವನ್ನು ನೀಡಲು ಒತ್ತು ನೀಡಬೇಕು. ಮೌಲ್ಯಾಧಾರಿತ ಶಿಕ್ಷಣದಿಂದ ಮಾತ್ರ ವಿದ್ಯಾರ್ಥಿಗಳಲ್ಲಿ ಉತ್ತಮ ಗುಣಗಳು ಬೆಳೆಯಲು ಸಾಧ್ಯ ಎಂದರು.
ರೋಟರಿ ಮಾಜಿ ಅಧ್ಯಕ್ಷ ಎಚ್.ಎಚ್.ಕೃಷ್ಣಮೂರ್ತಿ ಮಾತನಾಡಿ, ಹಿಂದಿನ ಕಾಲದ ಶಿಕ್ಷಣಕ್ಕೂ, ಈಗಿನ ಶಿಕ್ಷಣ ವ್ಯವಸ್ಥೆಗೂ ಸಾಕಷ್ಟು ವ್ಯತ್ಯಾಸಗಳಿವೆ. ಇಂದು ವಿದ್ಯಾರ್ಥಿಗಳಿಗೆ ಕಲಿಕೆಯ ವಿಪುಲ ಅವಕಾಶಗಳಿವೆ. ಇಂದಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ಪೂರಕವಾಗುವ ಪಠ್ಯ ಚಟುವಟಿಕೆಗಳನ್ನು ನೀಡಬೇಕು ಎಂದರು.
ರೋಟರಿ ಅಧ್ಯಕ್ಷ ಎ.ಆರ್.ಸುರೇಂದ್ರ, ಕಾರ್ಯದರ್ಶಿ ಯಶವಂತ್, ರೋಟರಿ ಸದಸ್ಯ ಎಂ.ಎಲ್.ಮಂಜೇಶ್, ಎ.ಸಿ.ಸಂದೇಶ್, ಜಯರಾಮ್, ಕೆ.ಟಿ.ವೆಂಕಟೇಶ್, ಎಂ.ಆರ್.ರವಿ, ಕೆ.ಕೆ.ವೆಂಕಟೇಶ್, ತಿಮ್ಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net