ಸೀತೂರಲ್ಲಿ ಎಲ್ಲ ಸ್ಥಾನ ಗೆದ್ದ ಸಹಕಾರ ಭಾರತಿ

20 nrp 2 election
ಎನ್.ಆರ್.ಪುರ ತಾಲೂಕು ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ವಿಜೇತ ಅಭ್ಯರ್ಥಿಗಳೊಂದಿಗೆ ಮುಖಂಡರು.
Published on

ಎನ್.ಆರ್.ಪುರ: ಸೀತೂರು ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಸಹಕಾರ ಭಾರತಿ ತಂಡದ 11 ಅಭ್ಯರ್ಥಿಗಳೂ ಜಯಗಳಿಸಿದ್ದಾರೆ. ಸೀತೂರು ಸಹಕಾರ ಸಂಘಕ್ಕೆ 12 ನಿರ್ದೇಶಕರು ಆಯ್ಕೆ ಆಗಬೇಕಾಗಿತ್ತು. ಅದರಲ್ಲಿ ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಸಹಕಾರ ಭಾರತಿ ತಂಡದ ಸುಧಾಕರ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11 ನಿರ್ದೇಶಕ ಸ್ಥಾನಕ್ಕಾಗಿ 22 ಸದಸ್ಯರು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಸಹಕಾರ ಭಾರತಿ ನೇತೃತ್ವದಲ್ಲಿ ಸ್ಪರ್ಧಿಸಿದ್ದ 11 ಮಂದಿಯೂ ಜಯಗಳಿಸಿದ್ದು ಅವಿರೋಧವಾಗಿ ಆಯ್ಕೆಯಾಗಿರುವ ಸಹಕಾರಿ ಭಾರತಿಯ ಒಬ್ಬ ಅಭ್ಯರ್ಥಿ ಸೇರಿದರೆ ಸಹಕಾರ ಭಾರತಿಯ ಒಟ್ಟು 12 ಸದಸ್ಯರು ಜಯಗಳಿಸಿದಂತಾಗಿದೆ. ಇದರಿಂದ ಸಹಕಾರಿ ಭಾರತಿ ತಂಡ ಪೂರ್ಣ ಪ್ರಮಾಣದಲ್ಲಿ ಅಧಿಕಾರಕ್ಕೆ ಬಂದಿದೆ.

ಗೆದ್ದವರು: ಸಾಮಾನ್ಯ ವರ್ಗದಲ್ಲಿ ವೈ.ಎಸ್.ಸುಬ್ರಹ್ಮಣ್ಯ, ಬಿ.ಪಿ.ಮೋಹನ್, ಉಪೇಂದ್ರ ಎಸ್. ರಾವ್, ಕೆ.ಎಂ.ಜಗದೀಶ್, ಕೆ.ಜಿ.ರಮೇಶ್, ಜಯರಾಂ, ಮಹಿಳಾ ಮೀಸಲಾತಿಯಲ್ಲಿ ವೈ.ವಿ.ಲೋಲಾಕ್ಷಿ, ಎಂ.ಎಸ್.ಗೀತಾ, ಬಿಸಿಎಂ(ಎ) ಮೀಸಲಾತಿಯಲ್ಲಿ ಎಚ್.ಎನ್.ಸತೀಶ್, ಬಿಸಿಎಂ(ಬಿ) ಮೀಸಲಾತಿಯಲ್ಲಿ ಎಚ್.ವಿ.ಸಂದೀಪ್ ಕುಮಾರ್, ಪರಿಶಿಷ್ಟ ಪಂಗಡದ ಮೀಸಲಾತಿಯಲ್ಲಿ ಎಚ್.ಎಚ್.ನಾರಾಯಣ ಗೆಲುವು ಸಾಧಿಸಿದರು. ಲಿತಾಂಶ ಬಂದ ನಂತರ ಗೆಲುವು ಸಾಧಿಸಿದ ಸಹಕಾರ ಭಾರತಿ ತಂಡದ ಅಭ್ಯರ್ಥಿಗಳನ್ನು ಬಿಜೆಪಿ ಮುಖಂಡರು ಅಭಿನಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net