*ಇಬ್ಬರಿಗೆ ಗಂಭೀರ ಗಾಯ
ಬಳ್ಳಾರಿ
ತಾಲೂಕಿನ ಕಪ್ಪಗಲ್ಲು ಗ್ರಾಮದ ಮನೆಯೊಂದರಲ್ಲಿ ಮಂಗಳವಾರ ಮಧ್ಯರಾತ್ರಿ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರ ಗಾಯಗೊಂಡಿದ್ದಾರೆ.
ಗ್ರಾಮದ ನಿವಾಸಿ ಹೊಟೇಲ್ ಜಯಮ್ಮ(45) ಹಾಗೂ ಮಗ ಸಂದೀಪ್ (25) ಗಾಯಗೊಂಡಿದ್ದಾರೆ.
ಇವರಿಬ್ಬರು ಮನೆಯ 2ನೇ ಮಹಡಿಯಲ್ಲಿ ಮಲಗಿಕೊಂಡಿ ದ್ದಾರೆ.ಕೆಳಮಹಡಿಯ ಕಿಚನ್ ನಲ್ಲಿದ್ದ ಸಿಲಿಂಡರ್ ನಲ್ಲಿರುವ ಅನಿಲ ಸೋರಿಕೆ ಕಂಡು ಬಂದು ಅದರ ಹೊಗೆಯು ಮನೆಯ ಮಹಡಿ ಮೇಲಕ್ಕೆ ತೆರಳಿದೆ.
ಎಚ್ಚರಗೊಂಡ ಜಯಮ್ಮ ಹೊಗೆ ಯಾಡುತ್ತಿರೋದನ್ನ ಕಂಡು ಗಾಬರಿಯಾಗಿ ಕೊಠಡಿಯೊಳಗಿದ್ದ ವಿದ್ಯುತ್ ಬಲ್ಬ್ ಅನ್ನ ಹಾಕಿದಾಗ ಸ್ಫೋಟಗೊಂಡು ಗಂಭೀರವಾಗಿ ಗಾಯಗೊಂಡಿದ್ದಾಳೆ. ಸಂದೀಪ್ ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇಬ್ಬರನ್ನು ಚಿಕಿತ್ಸೆಗೆ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.