ಸಿಯುಕೆ ಪ್ರೊಫೆಸರ್​ ಕಾಶ್ಮೀರ ವಿವಿ ಕುಲಪತಿ

PH 02
ಪ್ರೊ. ಎ. ರವೀಂದ್ರನಾಥ
Published on

ಕಲಬುರಗಿ: ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಜೀವ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಎ.ರವೀಂದ್ರನಾಥ ಅವರನ್ನು ಕಾಶ್ಮೀರದಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿಯನ್ನಾಗಿ ನೇಮಕ ಮಾಡಿ ಕೇಂದ್ರೀಯ ವಿವಿ ಕುಲಾಧಿಪತಿಯೂ ಆದ ರಾಷ್ಟ್ರಪತಿಗಳು ಆದೇಶ ಹೊರಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ಸಿ.ಪಿ.ರತ್ನಾಕರನ್ ತಿಳಿಸಿದ್ದಾರೆ.

ರವೀಂದ್ರನಾಥ ಅವರನ್ನು ವಿವಿ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ, ಕುಲಸಚಿವ ಡಾ.ಬಸವರಾಜ ಡೋಣೂರು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net