ವಿಜಯವಾಣಿ ಸುದ್ದಿಜಾಲ ಕೋಲಾರ
ಕೋಲಾರ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಕೋಲಾರ ನಗರವನ್ನು ಮತ್ತು ಕೋಲಾರ ಜಿಲ್ಲೆಯನ್ನು ಅಭಿವೃದ್ದಿಪಡಿಸುವುದಾಗಿ ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭರವಸೆ ನೀಡಿದ್ದ ಮುಖ್ಯ ಮಂತ್ರಿ ಸಿದ್ಧರಾಮಯ್ಯ ಕೊನೆ ಗಳಿಗೆಯಲ್ಲಿ ಕೋಲಾರ ಕ್ಷೇತ್ರ ಕೈಬಿಟ್ಟ ನಂತರ ಮುಖ್ಯಮಂತ್ರಿ ಆಗಿ ಪ್ರಥಮ ಬಾರಿಗೆ ಕೋಲಾರ ನಗರಕ್ಕೆ ಇಂದು ಆಗಮಿಸುತ್ತಿದ್ದಾರೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಆಗಮದ ಹಿನ್ನಲೆ ಕೋಲಾರ ಜನತೆ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೊಂದಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಿಂದ ಸಿದ್ಧರಾಮಯ್ಯ ಸ್ಪರ್ಧೆ ಮಾಡಿಸಿ, ಕೋಲಾರ ನಗರದ ರಸ್ತೆಗಳ ಅಭಿವೃದ್ಧಿ, ವರ್ತುಲ ರಸ್ತೆ, ಟಮೆಟೋ ಮಾರುಕಟ್ಟೆ ಜಾಗ, ಕೆ.ಸಿ.ವ್ಯಾಲಿ ೩ನೇ ಹಂತದ ಶುದ್ಧೀಕರಣ, ಎತ್ತಿನಹೊಳೆ ನೀರು ಸೇರಿದಂತೆ ಕೋಲಾರ ನಗರ ಮತ್ತು ಜಿಲ್ಲೆಯನ್ನು ಸಮಗ್ರ ಅಭಿವೃದ್ಧಿ ಪಡಿಸುವ ಮಟ್ಟದಲ್ಲಿ ಆಗಿನ ಕಾಂಗ್ರೇಸ್ ಶಾಸಕರು ಹಾಗೂ ಮುಖಂಡರು ಸಿದ್ಧರಾಮಯ್ಯ ರವರನ್ನು ಕೋಲಾರದಿಂದಲೇ ಸ್ಪರ್ಧೆ ಮಾಡಿಸಬೇಕೆಂಬ ಹಠಕ್ಕೆ ಬಿದ್ದು, ಕೋಲಾರಕ್ಕೆ ಸಿದ್ಧರಾಮಯ್ಯ ರವರನ್ನು ಕರೆಯಿಸಿ, ಚುನಾವಣಾ ಪ್ರಚಾರ ಸಭೆಗಳನ್ನು ನಡೆಸಿದ್ದರು.
ಕೊನೆ ಗಳಿಗೆಯಲ್ಲಿ ಕೋಲಾರ ಸ್ಪರ್ಧೆ ಕೈತಪ್ಪಿದ ಹಿನ್ನೆಲೆಯಲ್ಲಿ ಇಲ್ಲಿನ ಹಾಲಿ ಶಾಸಕ ಕೊತ್ತೂರು ಮಂಜುನಾಥ್ ಕಾಂಗ್ರೇಸ್ ಅಭ್ಯರ್ಥಿಯಾದ ನಂತರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಕೊತ್ತೂರು ಮಂಜುನಾಥ್ ರವರನ್ನು ಶಾಸಕರನ್ನಾಗಿ ಆಯ್ಕೆ ಮಾಡಿ, ಕೋಲಾರ ಜನತೆ ನನ್ನ ಮೇಲೆ ಇಟ್ಟಿದ್ದ ಭರವಸೆಯನ್ನು ಕೊತ್ತೂರು ಮಂಜುನಾಥ್ ಮೂಲಕ ಈಡೇರಿಸುತ್ತೇನೆ ಎಂದು ಭರವಸೆ ನೀಡಿದ್ದರು.
ಬಂಗಾರಪೇಟೆ ಸಮೀಪದ ಯರಗೋಳ್ ಯೋಜನೆ ಉದ್ಘಾಟನೆಗೆ ಸೆಪ್ಟೆಂಬರ್ ತಿಂಗಳಿನಲ್ಲಿ ಆಗಮಿಸಿದ್ದ ವೇಳೆ ಕೋಲಾರದಲ್ಲಿ ಅಧಿಕಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸುವಂತೆ ಸ್ಥಳೀಯ ಕಾಂಗ್ರೇಸ್ ಮುಖಂಡರು ಹಾಗೂ ಶಾಸಕರುಗಳು ಮುಂದಾಗಿದ್ದರು. ಕಾರಣಾಂತರಗಳಿAದ ಅದು ಸಾಧ್ಯವಾಗಿರಲಿಲ್ಲ.
ಆದಿಮ ಸಾಂಸ್ಕೃತಿಕ ಕೇಂದ್ರದ ಹುಣ್ಣಿಮೆ ಹಾಡು ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿಗಳು ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಬೆಳ್ಳಿಗ್ಗೆ ೧೧ ಗಂಟೆಗೆ ಅಧಿಕಾರಿಗಳ ಸಭೆಯನ್ನು ಏರ್ಪಡಿಸಲಾಗಿದೆ. ಕೋಲಾರ ಅಭಿವೃದ್ಧಿಗೆ ಸಿದ್ಧರಾಮಯ್ಯನವರು ನೀಡಿದ್ದ ಭರವಸೆಗಳನ್ನು ಈಡೇರಿಸುತ್ತಾರೆಯೇ ಎಂಬ ನಿರೀಕ್ಷೆಯಲ್ಲಿ ಕೋಲಾರ ಜನತೆ, ಕಾರ್ಯಕರ್ತರು ಹಾಗೂ ಮುಖಂಡರು ಇದ್ದಾರೆ.
ಇಲ್ಲಿನ ಕೋಲಾರ ಜಿಲ್ಲೆಯಿಂದ ಆಯ್ಕೆ ಆಗಿರುವ ಕಾಂಗ್ರೇಸ್ ಶಾಸಕರು ಸಹ ಸಿದ್ಧರಾಮಯ್ಯನವರಿಂದ ಜಿಲ್ಲೆಯ ಅಭಿವೃದ್ಧಿ ಬಗ್ಗೆ