ಸಿದ್ದಾಪುರ ಗ್ರಾಪಂಗೆ ರಂಗೇಶ್‌ಕುಮಾರ್ ಅಧ್ಯಕ್ಷ, ಸುಕನ್ಯಾ ಉಪಾಧ್ಯಕ್ಷೆ

31 KRN-1
ಕೆ.ಆರ್.ನಗರ ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದ ಕೆ.ಎಸ್.ರಂಗೇಶ್‌ಕುಮಾರ್ ಹಾಗೂ ಸುಕನ್ಯಾ ಅವರನ್ನು ಸದಸ್ಯರು ಮತ್ತು ಮುಖಂಡರು ಅಭಿನಂದಿಸಿದರು. ರಾಜಮ್ಮಕೃಷ್ಣಯ್ಯ, ಕೆ.ಬಿ.ಮಾದೇಗೌಡ, ಸರ್ವಮಂಗಳಾ, ಎಂ.ಎಸ್.ಹರಿಚಿದಂಬರ, ಹೆಬ್ಬಾಳುಮಂಜು, ಸಿದ್ದಾಪುರರಮೇಶ್, ಹರೀಶ್‌ಕುಮಾರ್, ಸಿರಿ ಇದ್ದರು.
Published on

ಕೆ.ಆರ್.ನಗರ: ತಾಲೂಕಿನ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಕೆ.ಎಸ್.ರಂಗೇಶ್‌ಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಸುಕನ್ಯಾ ಆಯ್ಕೆಯಾದರು.

ಒಟ್ಟು 14 ಸದಸ್ಯ ಬಲವಿರುವ ಪಂಚಾಯಿತಿಯಲ್ಲಿ 30 ತಿಂಗಳ ಅಧಿಕಾರ ಪೂರ್ಣಗೊಂಡಿದ್ದರಿಂದ ಮುಂದಿನ 30 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗ ಬಿ ಹಾಗೂ ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಸರ್ಕಾರ ಮೀಸಲು ಪ್ರಕಟಿಸಿತ್ತು. ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಂಗೇಶ್‌ಕುಮಾರ್ ಮತ್ತು ಕೆ.ಎಂ.ಶೃತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸುಕನ್ಯಾ ಮತ್ತು ಎಚ್.ಎನ್.ಉಮಾ ನಾಮಪತ್ರ ಸಲ್ಲಿಸಿದರು.

ಮತದಾನದಲ್ಲಿ ರಂಗೇಶ್‌ಕುಮಾರ್ 8 ಮತ ಪಡೆದು ಚುನಾಯಿತರಾದರೆ, ಕೆ.ಎಂ.ಶೃತಿ 5 ಮತ ಪಡೆದು ಪರಾಭವಗೊಂಡರು. 1 ಮತ ತಿರಸೃತಗೊಂಡಿತು. ಸುಕನ್ಯಾ 9 ಮತ ಪಡೆದು ಆಯ್ಕೆಯಾದರೆ ಉಮಾ 5 ಮತ ಪಡೆದು ಪರಭಾವಗೊಂಡರು.

ಚುನಾವಣಾಧಿಕಾರಿಯಾಗಿ ಲೋಕೋಪಯೋಗಿ ಇಲಾಖೆಯ ಎಇಇ ಎಸ್.ವಿ.ಸುಮಿತಾ ಕರ್ತವ್ಯನಿರ್ವಹಿಸಿದರು. ಸದಸ್ಯರಾದ ರಾಜಮ್ಮಕೃಷ್ಣಯ್ಯ, ಕೆ.ಬಿ.ಮಾದೇಗೌಡ, ಗೋವಿಂದಯ್ಯ, ಟಿ.ಮೋಹನ್‌ಕುಮಾರ್, ಮಹಾದೇವ, ಎಸ್.ಕೆ.ಅಭಿಲಾಷ್, ವಿಜಯಲಕ್ಷ್ಮೀ, ಆರ್.ರಂಜಿನಿ, ಸರ್ವಮಂಗಳಾ, ತ್ಯಾಗರಾಜ್, ಪಿಡಿಒ ಗೂಳಪ್ಪ ಹೊರಟಿ, ಕಾರ್ಯದರ್ಶಿ ಸೋಮಸುಂದರ್, ಬಿಲ್‌ಕಲೆಕ್ಟರ್ ರಮೇಶ್ ಇದ್ದರು.
ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಹಿ ವಿತರಿಸಿ, ಸಂಭ್ರಮಾಚರಿಸಿದರು.

ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಎಂ.ಎಸ್.ಹರಿಚಿದಂಬರ, ಗ್ರಾಪಂ ಮಾಜಿ ಸದಸ್ಯ ಹೆಬ್ಬಾಳುಮಂಜು, ಕಾಂಗ್ರೆಸ್ ಮುಖಂಡರಾದ ಲಕ್ಷ್ಮೀನಾರಾಯಣ, ಕಂಚುಗಾರಕೊಪ್ಪಲು ಸ್ವಾಮಿ, ಸಿದ್ದಾಪುರ ರಮೇಶ್, ತ್ಯಾಗರಾಜ್, ರಘು, ಸಿರಿ, ಹರೀಶ್‌ಕುಮಾರ್, ಬ್ಯಾಡರಹಳ್ಳಿ ಸಣ್ಣಯ್ಯ, ಬಿ.ಎಚ್.ಕುಮಾರ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net