ಸಿ.ಕೆ.ಅರುಣ್ ಅವರಿಗೆ ‘ಸರ್ವೋತ್ತಮ ಫಾರ್ಮಸಿಸ್ಟ್ ಸೇವಾ ಪ್ರಶಸ್ತಿ’

17
Published on

ವಿಶ್ವ ಫಾರ್ಮಸಿಸ್ಟ್ ದಿನ ಅಂಗವಾಗಿ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ವತಿಯಿಂದ ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಹಾಗೂ ಫಾರ್ಮಸಿಸ್ಟ್ ಸಿ.ಕೆ.ಅರುಣ್ ಅವರಿಗೆ ‘ಸರ್ವೋತ್ತಮ ಫಾರ್ಮಸಿಸ್ಟ್ ಸೇವಾ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ನಗರದಲ್ಲಿ ಇತ್ತೀಚೆಗೆ ನಡೆದ ವಿಶ್ವ ಫಾರ್ಮಸಿಸ್ಟ್ ದಿನ ಕಾರ್ಯಕ್ರಮಸಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಹಾಯಕ ಔಷಧ ನಿಯಂತ್ರಣಾಧಿಕಾರಿ ವಾಸಿಂ ರೆಹಮಾನ್ ಶರೀಫ್ ಮಾತನಾಡಿ, ಸಮುದಾಯದ ಆರೋಗ್ಯ ಕಾಪಾಡುವಲ್ಲಿ ಫಾರ್ಮಸಿಸ್ಟ್‌ಗಳ ಪಾತ್ರ ಮಹತ್ವದ್ದಾಗಿದೆ. ರೋಗಿಗಳಿಗೆ ಸಮಾಲೋಚನೆ ಹಾಗೂ ಸೂಕ್ತ ಮಾರ್ಗದರ್ಶನ ನೀಡುವುದು ಫಾರ್ಮಸಿಸ್ಟ್‌ಗಳ ಕರ್ತವ್ಯವಾಗಿದೆ. ಔಷದ ವ್ಯಾಪಾರ ಕ್ಷೇತ್ರವು ಸೇವಾ ಕ್ಷೇತ್ರವಾಗಿದ್ದು, ಸ್ವಯಂ ಪ್ರೇರಣೆಯಿಂದ ಗುಣಮಟ್ಟದ ಸೇವೆಯನ್ನು ಮಾಡುವುದಕ್ಕೆ ಆದ್ಯತೆಯನ್ನು ನೀಡಬೇಕು ಎಂದು ತಿಳಿಸಿದರು.

ಡಾ.ಎ.ಎನ್.ಕಾಂತರಾಜು ಮಾತನಾಡಿ, ಫಾರ್ಮಸಿಸ್ಟ್ ಗಳು ಔಷಧಿ ವಿತರಣೆಯಲ್ಲಿ ಹೆಚ್ಚಿನ ಜಾಗರೂಕತೆಯನ್ನು ವಹಿಸುವುದರ ಜೊತೆಗೆ ಕೌಶಲ್ಯತೆ ಹಾಗೂ ವೃತ್ತಿಪರತೆಯನ್ನು ಹೊಂದಬೇಕು. ವೃತ್ತಿಯಲ್ಲಿ ನೈತಿಕತೆ ಹಾಗೂ ಮಾನವೀಯತೆಯ ಸ್ಪರ್ಶವನ್ನು ನೀಡಬೇಕು ಎಂದು ಹೇಳಿದರು.

ಮೈಸೂರು ನಗರ ಮತ್ತು ಜಿಲ್ಲಾ ಚಿಲ್ಲರೆ ಔಷಧಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಂ.ರಾಜು ಮಾತನಾಡಿ, ಸರ್ಕಾರವು ಫಾರ್ಮಸಿಸ್ಟ್ ಗಳ ಸೇವೆಯನ್ನು ಗುರುತಿಸಿ ಪ್ರಶಸ್ತಿಯನ್ನು ನೀಡುತ್ತಿರುವುದು ಸಂತೋಷಕರವಾದ ಹಾಗೂ ಸ್ಪೂರ್ತಿದಾಯಕ ವಿಷಯ. ಔಷಧ ವ್ಯಾಪಾರಿಗಳು ಮತ್ತು ಔಷಧ ತಜ್ಞರ ಪರವಾಗಿ ರಾಜ್ಯ ಸರ್ಕಾರಕ್ಕೆ ಮತ್ತು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಗೆ ತುಂಬು ಹೃದಯದ ಧನ್ಯ ವಾದಗಳನ್ನು ಅರ್ಪಿಸುತ್ತೇನೆ ಎಂದರು. ಸಹಾಯಕ ಔಷದ ನಿಯಂತ್ರಣ ಅಧಿಕಾರಿ ಆಶಾಲತಾ ಮಾತನಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net