ಸಾಲದ ಭಾದೆಗೆ ಆತ್ಮಹತ್ಯೆಗೆ ಶರಣು / ವಿವಿಧ ಖಾಸಗಿ ಕಂಪನಿಗಳಿAದ ೧೦ ಲಕ್ಷಕ್ಕೂ ಹೆಚ್ಚು ಹಣ ಸಾಲ ಪಡೆದಿದ್ದ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಾಲದ ಭಾದೆ ತಾಳಲಾರದೆ ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೋಲಾರ ತಾಲ್ಲೂಕು ಚಿಟ್ನಹಳ್ಳಿ ಗ್ರಾಮದಲ್ಲಿ ಭಾನುವಾರ ಬೆಳ್ಳಿಗ್ಗೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ನಾಗರಾಜ್ (೩೫) ಎನ್ನಲಾಗಿದ್ದು, ಖಾಸಗಿ ಫೈನಾನ್ಸ್, ಧರ್ಮಸ್ಥಳ ಸಂಘ, ವಿವಿದೆಡೆಯಲ್ಲಿ ೧೦ ಲಕ್ಷಕ್ಕೂ ಹೆಚ್ಚು ಸಾಲ ಮಾಡಿಕೊಂಡಿದ್ದು, ಕುಟುಂಬದಲ್ಲಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ನಾಗರಾಜ್ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದು, ವ್ಯಾಪಾರಕ್ಕಾಗಿ ಕೈಸಾಲ ಸೇರಿದಂತೆ ವಿವಿಧ ಫೈನಾನ್ಸ್ ಕಂಪನಿಯಲ್ಲಿ ಸಾಲ ಮಾಡಿಕೊಂಡಿದ್ದು, ಸಾಲಗಾರರ ಕಾಟ ತಾಳಲಾರದೆ ಇಂದು ಬೆಳ್ಳಿಗ್ಗೆ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಕಳೆದ ೫ ವರ್ಷಗಳ ಹಿಂದೆ ಮನೆ ನಿರ್ಮಾಣಕ್ಕೆಂದು ನಾಗರಾಜ್ ವಾಸ್ತು ಫೈನಾನ್ಸ್ನಲ್ಲಿ ೫ ಲಕ್ಷ ರೂ.ಗಳು, ಬಜಾಜ್ ಫೈನಾನ್ಸ್ನಲ್ಲಿ ೧.೯೦ ಲಕ್ಷ, ಧರ್ಮಸ್ಥಳ ಸಂಘದಲ್ಲಿ ೫ ಲಕ್ಷö್ಮ, ಭಾರತ್ ಫೈನಾನ್ಸ್ ಬಳಿ ೧ ಲಕ್ಷ ಸಾಲ ಮಾಡಲಾಗಿತ್ತು. ತರಕಾರಿಕ ವ್ಯಾಪಾರದಲ್ಲಿ ಇತ್ತೀಚೆಗೆ ನಷ್ಟ ಅನುಭವಿಸುವಂತಾಗಿತ್ತು. ಫೈನಾನ್ಸ್ ಕಂಪನಿಳಿAದ ಹಣ ಕಟ್ಟುವಂತೆ ಆಗಾಗ ಫೋನ್ ಕಾಲ್ ಬರುತ್ತಿತ್ತು. ಇದರಿಂದ ಮನೆಯಲ್ಲಿ ಹಣದ ವಿಚಾರವಾಗಿ ಆಗಾಗ ಗಲಾಟೆ ನಡೆಯುತ್ತಿತ್ತು ಎಂದು ನಾಗರಾಜ್ ಪತ್ನಿ ನೇತ್ರಾವತಿ ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.

ಕೋಲಾರ ಗ್ರಾಮಾಂತರ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಚಿತ್ರ ೦೨ ಕೆ.ಎಲ್.ಆರ್. ೦೨ : ಸಾಲ ಭಾದೆಯಿಂದ ಆತ್ಮಹತ್ಯೆಗೆ ಶರಣಾಗಿರುವ ನಾಗರಾಜ್ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net