

ಕಳಸ: ತಾಲೂಕಿನ ವಿವಿಧೆೆಡೆ ಸಾರ್ವಜನಿಕ ಶ್ರೀ ಗಣಪತಿ ಪೂಜಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಇಲ್ಲಿಯ ಕಲ್ಮಕ್ಕಿ ಶ್ರೀ ಬಾಲಗಣಪತಿ ಸೇವಾ ಸಮಿತಿ ಮತ್ತು ಆದರ್ಶ ಯುವಕ ಸಂಘದ ಶ್ರೀ ಬಾಲಗಣಪತಿ ಪೂಜಾ ಮಹೋತ್ಸವ ಸೋಮವಾರ ನೆರವೇರಿತು. ಐದು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಮರಸಣಿಗೆಯಲ್ಲಿ ಮಹಾಗಣಪತಿ ಪೂಜಾ ಮಹೋತ್ಸವ ನಿಮಿತ್ತ ಮೂರು ದಿನ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.
ಕಳಸದಲ್ಲಿ ಮಂಗಳವಾರ ಸಾರ್ವಜನಿಕ ಶ್ರೀ ಶಕ್ತಿಗಣಪತಿ ಪೂಜಾ ಮಹೋತ್ಸವ ಹಾಗೂ ಬಸ್ರಿಕಲ್‌ನಲ್ಲಿ ವಿದ್ಯಾಗಣಪತಿ ಪೂಜಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ತಾಲೂಕಿನ ಸಂಸೆ, ಕಾರಗದ್ದೆ, ಗಂಗನಗುಡಿಗೆ, ನೆಲ್ಲಿಬೀಡು, ಹಳುವಳ್ಳಿ, ಬಾಳೆಹೊಳೆ, ಹಿರೇಬೈಲ್, ಮೇಲ್ಪಾಲ್, ನೆಲ್ಲಿಕೆರೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜಿಸಲಾಗುತ್ತಿದೆ.