ಸಾಗರ ವ್ಯಾಪ್ತಿಯಲ್ಲಿ ಗೋ ಕಳ್ಳತನ ತಡೆಗಟ್ಟಿ

27sgr2 manavi
ಸಾಗರದಲ್ಲಿ ಗೋ ಕಳ್ಳತನ ತಡೆಗಟ್ಟಬೇಕು ಎಂದು ಆಗ್ರಹಿಸಿ ವಿಹಿಂಪ, ಬಜರಂಗದಳ ಕಾರ್ಯಕರ್ತರು ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಅವರಿಗೆ ಮನವಿ ಸಲ್ಲಿಸಿದರು. ಕೆ.ಎಚ್.ಸುದರ್ಶನ್, ಪ್ರತಿಮಾ ಜೋಗಿ, ಕಿರಣ್, ಸುನೀಲ್, ರುದ್ರಪ್ಪ, ಪವನ್ ಇತರರಿದ್ದರು.
Published on

ಸಾಗರ: ಪಟ್ಟಣ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಗೋ ಕಳ್ಳತನ ತಡೆಗಟ್ಟಬೇಕು. ರಸ್ತೆಯಲ್ಲಿ ಮಲಗಿರುವ ಗೋವುಗಳನ್ನು ವಾಹನದಲ್ಲಿ ತುಂಬಿಕೊಂಡು ಹೋಗುತ್ತಿರುವ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಪದಾಧಿಕಾರಿಗಳು ಮಂಗಳವಾರ ನಗರಸಭೆ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.

ನಗರವ್ಯಾಪ್ತಿಯಲ್ಲಿ ಬಿಡಾಡಿ ದನಗಳ ಸಂಖ್ಯೆ ಹೆಚ್ಚುತ್ತಿದೆ. ರಸ್ತೆಯಲ್ಲಿ ಮಲಗಿರುವ ಹಸುಗಳನ್ನು ರಾತ್ರಿವೇಳೆ ಗೋಕಳ್ಳರು ಕಳವು ಮಾಡುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ನಾಲ್ಕೈದು ದನಗಳನ್ನು ತುಂಬಿ ಚಿತ್ರಹಿಂಸೆ ನೀಡಿ ಸಾಗಿಸಲಾಗುತ್ತಿದೆ. ಬಿಡಾಡಿ ದನಗಳನ್ನು ರಕ್ಷಣೆ ಮಾಡಲು ನಗರಸಭೆಯಿಂದ ಅಗತ್ಯ ಕ್ರಮ ಕೈಗೊಳ್ಳಬೇಕು. ಗೋವುಗಳಿಗೆ ಚಿತ್ರಹಿಂಸೆ ನೀಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಶಿಫಾರಸು ಮಾಡಬೇಕು ಎಂದು ನೀಡಬೇಕು ಎಂದು ಬಜರಂಗದಳದ ಜಿಲ್ಲಾ ಸಂಚಾಲಕ ಸಂತೋಷ್ ಶಿವಾಜಿ ಒತ್ತಾಯಿಸಿದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಗೋವುಗಳನ್ನು ಅಪಹರಿಸಿ ಅದನ್ನು ಬೇರೆ ಕಡೆ ಸಾಗಿಸುವ ದೊಡ್ಡ ಜಾಲವೊಂದು ಸಾಗರದಲ್ಲಿ ಕೆಲಸ ಮಾಡುತ್ತಿದೆ. ಪೊಲೀಸ್ ಇಲಾಖೆ ಇಂಥವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಬಿಡಾಡಿ ದನಗಳ ರಕ್ಷಣೆಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆ.ಎಚ್.ಸುದರ್ಶನ್, ಕಿರಣ್, ಸುನೀಲ್, ರುದ್ರಪ್ಪ, ಪವನ್, ಶ್ರೀಧರ್, ರಾಘವೇಂದ್ರ, ಶ್ರೀಕರ್ ಭಟ್, ಸುದರ್ಶನ ಭಟ್, ಪವನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net