ಸಾಂಬಾರು ಬೆಳೆ ಲಾಭದಾಯಕ

26 nrp 2 krishi
ಎನ್.ಆರ್.ಪುರ ಸೋಷಿಯಲ್ ವೆಲ್ಫೇರ್ ಸೊಸೈಟಿಯಲ್ಲಿ ಆಯೋಜಿಸಿದ್ದ ಕಾರ್ಯಾಗಾರವನ್ನು ಸೊಸೈಟಿ ನಿರ್ದೇಶಕ ರೆ.ಾ. ಜೋಬಿಶ್ ಉದ್ಘಾಟಿಸಿದರು. ದೀಪಕ್, ಪ್ರಿನ್ಸಿ, ಸಿನಿ ಜೋರ್ಜ್, ಅಶ್ವಿನಿ, ಉಷಾ ಇದ್ದರು.
Published on

ಎನ್.ಆರ್.ಪುರ: ಸಾಂಬಾರು ಬೆಳೆ ಕೃಷಿ ಲಾಭದಾಯಕವಾಗಿದ್ದು ಮಿಶ್ರ ಬೆಳೆಯಾಗಿ ಬೆಳೆದು ಹೆಚ್ಚಿನ ಆದಾಯ ಗಳಿಸಲು ಸಾಧ್ಯ ಎಂದು ಸಾಂಬಾರು ಮಂಡಳಿ ಅಧಿಕಾರಿ ದೀಪಕ್ ತಿಳಿಸಿದರು.

ಪಟ್ಟಣದ ಸೋಷಿಯಲ್ ವೆಲ್ಫೇರ್ ಸೊಸೈಟಿಯಲ್ಲಿ ನಡೆದ ಆಧುನಿಕ ಕೃಷಿ ಪದ್ಧತಿ ಮತ್ತು ಸಾಂಬಾರ ಬೆಳೆ ಮಾಹಿತಿ ಕಾರ್ಯಕ್ರಮದಲ್ಲಿ ಮಾತನಾಡಿ, ಈಗಿನ ಕೃಷಿ ಪದ್ಧತಿಯಲ್ಲಿ ಏಲಕ್ಕಿ, ಶುಂಠಿ, ಲವಂಗ, ಜಾಯಿಕಾಯಿ, ಚಕ್ಕೆ, ಕಾಳುಮೆಣಸು ಇತ್ಯಾದಿ ಬೆಳೆಗಳನ್ನು ಅಡಕೆ ತೋಟದಲ್ಲಿ ಮಿಶ್ರ ಬೆಳೆಯಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿದರು.

ಸೋಷಿಯಲ್ ವೆಲ್ಫೇರ್ ಸೊಸೈಟಿಯ ಕಾರ್ಯಕ್ರಮ ಸಂಯೋಜಕ ಪ್ರಭಾಕರ್ ಮಾತನಾಡಿ, ಸೋಷಿಯಲ್ ವೆಲ್ಫೇರ್ ಸೊಸೈಟಿಯು 35 ವರ್ಷಗಳಿಂದ ಗ್ರಾಮೀಣ ಭಾಗದ ರೈತರಿಗೆ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ರೈತರಿಗೆ ಸೋಲಾರ್ ಅಳವಡಿಕೆಯ ನೂತನ ಕಾರ್ಯಕ್ರಮದ ಮಾಹಿತಿ ನೀಡುತ್ತಿದ್ದೇವೆ ಎಂದರು.

ಸುಮಾರು 60 ರೈತರು ಹಾಗೂ ಸ್ವ ಸಹಾಯ ಸಂಘದ ಸದಸ್ಯರು ಮಾಹಿತಿ ಪಡೆದರು. ರೋಬರ್ಟ್ ವ್ಯಾನ್ ಬಿಸಿನೆಸ್ ಕನ್ಸಲ್‌ಟೆಂಟ್ ಸ್ಫೋರ್ಟ್ ಎಕಾನಮಿ ನೆದರ್‌ಲ್ಯಾಂಡ್ ಅವರು ಸೋಲಾರ್ ಅಳವಡಿಕೆ, ವೈಜ್ಞಾನಿಕ ಕೃಷಿ ಪದ್ಧತಿ, ಸೋಲಾರ್ ಬೇಲಿ ಆಳವಡಿಕೆ ಹಾಗೂ ಸೋಲಾರ್ ಮೂಲಕ ನೀರಾವರಿ ವ್ಯವಸ್ಥೆ ಮತ್ತು ವೈಜ್ಞಾನಿಕವಾಗಿ ತರಕಾರಿ ಬೆಳೆಗಳನ್ನು ಬೆಳೆಯುವ ಕ್ರಮ ತಿಳಿಸಿದರು. ಪ್ರಿನ್ಸಿ, ಸಿನಿ ಜೋರ್ಜ್, ಅಶ್ವಿನಿ, ಉಷಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net