ಸಹೋದರತ್ವದ ಜಾಗೃತಿ

IMG-20230821-WA0127--008
Published on


ಚಿತ್ರದುರ್ಗ:ರಕ್ಷಾಬಂಧನ ಆಚರಣೆ ಸಹೋದರತ್ವ ಮತ್ತು ಸಹಬಾಳ್ವೆಯನ್ನು ಜಾಗೃತಗೊಳಿಸುತ್ತದೆ ಎಂದು ನಗರದ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ರಶ್ಮಿ ಅವರು ಹೇಳಿದರು. ನಗರದ ಎಸ್‌ಜೆಎಂ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ರಕ್ಷಾ ಬಂಧನದ ಅರಿವು ಕಾರ‌್ಯಕ್ರಮದಲ್ಲಿ ಮಾತನಾಡಿದ ಅವರು,ಜ್ಞಾನಾಭಿವೃದ್ಧಿಗೆ ಧ್ಯಾನದ ಅಗತ್ಯವಿದೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿ ದರು. ಪ್ರಾಚಾರ‌್ಯ ಎಸ್.ವಿ.ರವಿಶಂಕರ್,ಅಧ್ಯಾಪಕರಾದ ಮಮ್ತಾಜ್‌ಬೇಗಂ,ಜೆ.ಪ್ರತಿಮಾ,ಟಿ.ಲತಾ ಇತರರು ಇದ್ದರು. ಕೆ. ಸುರೇಶ್ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net