ಸಹಕಾರಿ ವ್ಯವಸ್ಥೆ ಉಳಿವಿಗಾಗಿ ಪ್ರತಿಯೊಬ್ಬರೂ ಉಳಿತಾಯ ಖಾತೆ ತರೆದು ಸೊಸೈಟಿಗೆ ಶಕ್ತಿ ತುಂಬಿ/ ಎಂಎಲ್ಸಿ ಅನಿಲ್ ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸಹಕಾರಿ ವ್ಯವಸ್ಥೆ ಬಲಗೊಳ್ಳಬೇಕಾದರೆ ಪ್ರತಿಯೊಬ್ಬ ಷೇರುದಾರರು ಸಹಕಾರಿ ಬ್ಯಾಂಕುಗಳಲ್ಲಿ ಉಳಿತಾಯ ಖಾತೆ ತೆರೆದು ಇತರೆ ಮೂಲಗಳಿಂದ ಬಂದ ಆದಾಯವನ್ನು ಬ್ಯಾಂಕಿನಲ್ಲಿ ಇಟ್ಟಾಗ ಮಾತ್ರವೇ ಸೊಸೈಟಿಗೆ ಶಕ್ತಿ ಬರುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು.

ತಾಲೂಕಿನ ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿAದ ಭಾನುವಾರ ನಡೆದ ಪ್ರಸಕ್ತ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಸರ್ಕಾರವಾಗಲಿ ನೇರವಾಗಿ ಡಿಸಿಸಿ ಬ್ಯಾಂಕ್ ಸೇರಿದಂತೆ ಸಹಕಾರಿ ಬ್ಯಾಂಕುಗಳಿಗೆ ಸಾಲ ಸೌಲಭ್ಯಗಳನ್ನು ನೀಡಲ್ಲ. ಆದರೆ ನಮ್ಮ ಎಲ್ಲರ ಠೇವಣಿ ಹಾಗೂ ಉಳಿತಾಯವನ್ನು ನೋಡಿ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್ ಸಾಲ ನೀಡುತ್ತಾರೆ. ಖಾಸಗಿ ಬ್ಯಾಂಕುಗಳಲ್ಲಿ ದಿನನಿತ್ಯದ ವ್ಯವಹಾರವನ್ನು ನಿಲ್ಲಿಸಿ ಸಹಕಾರಿ ಬ್ಯಾಂಕುಗಳಲ್ಲಿ ವ್ಯವಹಾರ ಮಾಡುವ ಮೂಲಕ ಸಹಕಾರಿ ಬ್ಯಾಂಕುಗಳಿಗೆ ಶಕ್ತಿ ತುಂಬುವAತೆ ಮನವಿ ಮಾಡಿದರು.

ಮಹಿಳಾ ಸಂಘಗಳಿಗೆ ಹಾಗೂ ರೈತರಿಗೆ ಹೆಚ್ಚಿನ ಸಾಲ ಸೌಲಭ್ಯಗಳನ್ನು ನೀಡಿದಾಗ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಾಲ ಮನ್ನಾ ಮಾಡಿದರೆ ಅದರ ಸದುಪಯೋಗ ಪಡೆಯಬಹುದಾಗಿದೆ. ಆದರೆ ೨೦೧೪ ಹಿಂದೆ ಮನಮೋಹನ್ ಸಿಂಗ್ ಸರಕಾರದಲ್ಲಿ ರೈತರ ಸಾಲ ಮನ್ನಾ ಮಾಡಿದರೂ ಎರಡು ಜಿಲ್ಲೆಯಲ್ಲಿ ಒಬ್ಬರಿಗೂ ಕೂಡ ಸಾಲ ಮನ್ನಾ ಪ್ರಯೋಜನ ಪಡೆಯಲು ಆಗಲಿಲ್ಲ. ಆದರೆ ಇತ್ತಿಚೆಗೆ ಸಾಲ ಮನ್ನಾದಲ್ಲಿ ಸುಮಾರು ೩೬೦ ಕೋಟಿ ಮನ್ನಾದ ಪ್ರಯೋಜನ ಪಡೆದುಕೊಂಡಿದ್ದಾರೆ ಎಂದರು.

ಸೊಸೈಟಿ ಅಧ್ಯಕ್ಷ ಎಂ.ಪಾಲಾಕ್ಷಗೌಡ ಮಾತನಾಡಿ, ಸೊಸೈಟಿಯಲ್ಲಿ ಈ ಸಾಲಿನಲ್ಲಿ ೨೫.೪೫ ಲಕ್ಷದಷ್ಟು ಲಾಭವನ್ನು ಗಳಿಸಿದೆ ಈ ವರ್ಷ ರೈತರಿಗೆ ೭ ಕೋಟಿ, ರೇಷ್ಮೆ ಮನೆ ಕಟ್ಟಲು ೧.೬೫ ಕೋಟಿ, ಮಹಿಳೆಯರಿಗೆ ೨.೩೫ ಕೋಟಿ ಹಾಗೂ ಒಡವೆ ಸಾಲ ೩೬ ಲಕ್ಷ ನೀಡುವ ಮೂಲಕ ಜಿಲ್ಲೆಗೆ ಮಾದರಿ ಸೊಸೈಟಿಯಾಗಿದೆ ರೈತ ಭವನವನ್ನು ಸೊಸೈಟಿ ಅನುದಾನ ಬಳಸದೇ ದಾನಿಗಳು, ರೈತರು ಹಾಗೂ ಜನಪ್ರತಿನಿಧಿಗಳ ಅನುದಾನದಿಂದ ನಿರ್ಮಿಸಲಾಗುತ್ತಿದೆ ಎಂದರು.

ಬಾಕ್ಸ್

ಜಿಲ್ಲೆಯಲ್ಲಿ ರೈತರ ರಸಗೊಬ್ಬರಗಳು ಹಾಗೂ ಔಷಧೀಗಳಲ್ಲಿ ದೊಡ್ಡ ಮಾಫಿಯಾ ನಡೆಯುತ್ತಿದೆ. ಅದನ್ನು ಪ್ರಶ್ನೆ ಮಾಡುವ ಮನಸ್ಥಿತಿ ಪ್ರತಿಯೊಬ್ಬ ರೈತರಲ್ಲಿ ಬರಬೇಕು. ರೈತರಿಗೆ ಬ್ಯಾಂಕ್ ಮತ್ತು ಸೊಸೈಟಿ ಕಡೆಯಿಂದ ಬೆಳೆ ಸಾಲ ನೀಡಲಿದೆ ಹೊರತು ಜಮೀನು ನೋಡಿ ಸಾಲ ಕೊಡುವುದಿಲ್ಲ.
-ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಯಲವಾರ ಸೊಣ್ಣೇಗೌಡ, ಕಡಗಟ್ಟೂರು ದಯಾನಂದ ಜೆಡಿಎಸ್ ಮುಖಂಡ ವಕ್ಕಲೇರಿ ರಾಮು, ಗ್ರಾಪಂ ಅಧ್ಯಕ್ಷ ರಾಧಿಕಾ ಮಂಜುನಾಥ್, ಸೊಸೈಟಿ ಮಾಜಿ ಅಧ್ಯಕ್ಷರಾದ ಯಶೋಧಮ್ಮ, ಡಿ.ವಿ ಮುನಿಯಪ್ಪ, ಪಿ.ನಾರಾಯಣಪ್ಪ, ಹಾಲಿ ಉಪಾಧ್ಯಕ್ಷ ವಿ.ಮಂಜುನಾಥ್, ನಿರ್ದೇಶಕರಾದ ಎಂ.ಆನAದ್ ಕುಮಾರ್, ಆರ್.ಚಂದ್ರೇಗೌಡ, ವೆಂಕಟಗಿರಿಯಪ್ಪ, ಟಿ.ಮುನಿಯಪ್ಪ, ಜಿ.ಎಸ್ ಸದಾಶಿವಯ್ಯ, ಎಸ್.ಕೃಷ್ಣಪ್ಪ, ಬಿ.ಎನ್ ಚಿದಾನಂದ, ಎಂ ರಮೇಶ್, ಚೌಡಮ್ಮ, ಶಾಂತಕುಮಾರಿ ಕಾರ್ಯದರ್ಶಿ ಎಂ.ಮAಜುನಾಥ್ ಇತರರು ಇದ್ದರು.

ಚಿತ್ರ ೨೪ ಕೆ.ಎಲ್.ಆರ್. ೦೨ : ವಕ್ಕಲೇರಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟನೆ ಮಾಡಿ ಮಾತನಾಡಿದ ಎಂ.ಎಲ್.ಸಿ. ಅನಿಲ್ ಕುಮಾರ್, ಡಿ.ಡಿ.ಸಿ.ಬ್ಯಾಂಕ್ ನಿರ್ದೇಶಕರಾದ ಯಲವಾರ ಸೊಣ್ಣೇಗೌಡ, ಕಡಗಟ್ಟೂರು ದಯಾನಂದ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net