ಸರ್ಕಾರಿ ಸೌಲಭ್ಯ ಪಡೆಯಲು ಲಂಚ ಕೊಡಬೇಡಿ / ಮಧ್ಯವರ್ತಿಗಳನ್ನು ದೂರವಿಡಿ / ಲಂಚ ಕೇಳಿದರೆ ಗಮನಕ್ಕೆ ತನ್ನಿ / ಕೊತ್ತೂರು ಮಂಜುನಾಥ್,

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಅಧಿಕಾರಿಗಳಿಗೆ, ಮಧ್ಯವರ್ತಿಗಳು ಸೇರಿದಂತೆ ಯಾರಿಗೂ ಒಂದು ರೂಪಾಯಿ ಲಂಚ ಕೊಡಬೇಡಿ, ಪಾರದರ್ಶಕತೆಯಿಂದ ಪಲಾನುಭವಿಗಳ ಆಯ್ಕೆ ಮಾಡಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಯಾರೇ ಆಗಲಿ ಲಂಚ ಕೇಳಿದರೆ ಗಮನಕ್ಕೆ ತನ್ನಿ ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ಶಾಸಕರ ಕಛೇರಿ ಬಳಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್, ಕರ್ನಾಟಕ ಆದಿ ಜಾಂಬವ, ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಗಳ ವತಿಯಿಂದ ೨೦೧೮-೧೯, ೨೦೨೧-೨೨, ಮತ್ತು ೨೦೨೨-೨೩ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು ೪೮ ಪಲಾನುಭವಿಗಳ ಕೊಳವೆಬಾವಿಗಳಿಗೆ ಪಂಪ್ ಮೋಟಾರು ಹಾಗೂ ಇತರೆ ಪೂರಕ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿ, ಬಡವರು ಸರ್ಕಾರದ ಸೌಲಭ್ಯಗಳ ಸದುಪಯೋಗಪಡಿಸಿಕೊಳ್ಳಬೇಕು. ನಿಮ್ಮ ಜೀನವ ನಿರ್ವಹಣೆಗೆ ಈ ಸೌಲಭ್ಯಗಳು ಬಳಕೆಯಾಗಬೇಕು. ಅವಾಗ ಮಾತ್ರವೇ ಸೌಲಭ್ಯ ಕೊಟ್ಟಿದ್ದು ಸಾರ್ಥಕವಾಗುತ್ತದೆ ಎಂದರು.

೨೦೧೮ ರಿಂದ ಗಂಗಾ ಕಲ್ಯಾಣ ಯೋಜನೆಯಿಂದ ಕೊಳವೆಬಾವಿ ಕೊರೆದಿರುವ ಪಲಾಭವಿಗಳಿಗೆ ಸೌಲಭ್ಯಗಳನ್ನು ನೀಡಿಲ್ಲ. ಇದರಿಂದಾಗಿ ರೈತರಿಗೆ ಸಾಕಷ್ಟು ಸಮಸ್ಯೆಗಳಾಗಿವೆ. ಬಡವರಿಗೆ ಕೊಡುವ ಸೌಲಭ್ಯಗಳನ್ನು ಕೊಡಲು ಸಿದ್ದರಾಮಯ್ಯ ಸರ್ಕಾರವು ಸಿದ್ದವಿದೆ. ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳ ಸಹಕಾರವು ಇದೆ. ರೈತರಿಗೆ ಬಾಕಿ ಉಳಿದಿರುವ ಪಾಲಾನುಭವಿಗಳಿಗೆ ಸೌಲಭ್ಯಗಳನ್ನು ಕೊಡಿಸಲಾಗುತ್ತದೆ. ಜೊತೆಗೆ ರೈತರಿಗೆ ಗೊತ್ತಾಗಲಿ ಅಂತ ಸಾರ್ವಜನಿಕವಾಗಿ ನೇರವಾಗಿ ಪಲಾನುಭವಿಗಳಿಗೆ ಸೌಲಭ್ಯಗಳನ್ನು ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶದ ಜನರ ಜೀವನವನ್ನು ಸುಧಾರಿಸಲು ಸರ್ಕಾರವು ವಿವಿಧ ಇಲಾಖೆಗಳಿಂದ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಇದರ ಸದುಪಯೊಗ ಪಡೆದುಕೊಳ್ಳಬೇಕು. ಈ ಸೌಲಭ್ಯಗಳು ಸ್ವಂತಿಕೆಗೆ ಮಾತ್ರವೇ ಬಳಕೆಯಾಗಬೇಕು ಬೇರೆಯವರಿಗೆ ಕೊಡಬಾರದು ಮುಂದೆ ಅಧಿಕಾರಿಗಳು ಸಹ ಮನೆ ಬಾಗಿಲಿಗೆ ಬಂದು ಪರಿಶೀಲನೆ ನಡೆಸಲಿದ್ದಾರೆ ತಪ್ಪು ಕಂಡುಬAದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ವೈ ಶಿವಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಹಿರಿಯ ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಹನುಮಂತಪ್ಪ, ಖಾಜಿಕಲ್ಲಹಳ್ಳಿ ಮುನಿರಾಜು, ಚೋಳಘಟ್ಟ ಸೀನಪ್ಪ, ಫೈರೋಜ್ ಖಾನ್, ಅಂಬರೀಶ್, ಗಂಗಮ್ಮನಪಾಳ್ಯ ರಾಮಯ್ಯ, ಯಲವಾರ ರಾಜಕುಮಾರ್, ವೀರೇಂದ್ರ ಪಾಟೀಲ್, ಚಿನ್ನಾಪುರ ನಾರಾಯಣಸ್ವಾಮಿ, ಸುಧಾಕರ್, ಗಾಂಧಿನಗರ ಐಯ್ಯ ಮುನಿಆಂಜಿ ಮುಂತಾದವರು ಇದ್ದರು.

ಚಿತ್ರ ೧೭ ಕೆ.ಎಲ್.ಆರ್. ೦೨ : ನಗರದ ಶಾಸಕರ ಕಛೇರಿ ಬಳಿ ಸೋಮವಾರ ಡಾ. ಬಿ.ಆರ್.ಅಂಬೇಡ್ಕರ್, ಕರ್ನಾಟಕ ಆದಿ ಜಾಂಬವ, ಹಾಗೂ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಗಳ ವತಿಯಿಂದ ಕೊಳವೆ ಬಾವಿ ಕೊರೆಸಿರುವ ಫಲಾನುಭವಿಗಳಿಗೆ ಪಂಪು ಮೋಟಾರ್ ಮುಂತಾದ ಸಾಮಗ್ರಿಗಳನ್ನು ಶಾಸಕ ಕೊತ್ತೂರು ಮಂಜುನಾಥ್ ವಿತರಿಸಿದರು. ಎಂ.ಎಲ್.ಸಿ.ಅನಿಲ್‌ಕುಮಾರ್, ನಗರಸಭೆ ಅಧ್ಯಕ್ಷೆ ಲಕ್ಷಿö್ಮÃದೇವಮ್ಮ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net