ಸರ್ಕಾರಿ ಶಾಲೆಗಳಿಗೆ ನೀಡುತ್ತಿರುವ ಕೋಳಿ ಮೊಟ್ಟೆ ದರ ಹೆಚ್ಚಳ / ಅಡುಗೆ ಸಹಾಯಕ ಮತ್ತು ಕಾರ್ಯಕರ್ತರಿಗೂ ಆಯ-ವ್ಯಯದಲ್ಲಿ ೧೦೦ ಕೋಟಿ ರೂ.ಗಳು ಮೀಸಲಿರಿಸಿದೆ / ಮಧು ಬಂಗಾರಪ್ಪ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎಣ್ಣೆ ಮತ್ತು ಬೇಳೆ ಖರೀದಿಗೆ ಕೇಂದ್ರ ಸರ್ಕಾರದ ನಿಯಮಗಳನ್ವಯ ದರ ನಿಗಧಿಪಡಿಸಲಾಗಿದೆ. ಕೇಂದ್ರ ಸರ್ಕಾರ ಬೆಲೆ ಹೆಚ್ಚಳ ಮಾಡಿದರೆ ರಾಜ್ಯ ಸರ್ಕಾರವು ಬೆಲೆ ಹೆಚ್ಚಿಸಬೇಕಾಗುತ್ತದೆ. ಅಡುಗೆ ಸಹಾಯಕ ಮತ್ತು ಕಾರ್ಯಕರ್ತರ ಬೇಡಿಕೆಯಂತೆ ೨೦೨೫-೨೬ನೇ ಸಾಲಿನ ಆಯ-ವ್ಯಯದಲ್ಲಿ ೧೦೦ ಕೋಟಿ ರೂ.ಗಳನ್ನು ಹೆಚ್ಚಿಸಿದೆ. ಕೋಳಿಮೊಟ್ಟೆ ದರ ಹೆಚ್ಚಿಗೆ ಮಾಡಲಾಗುವುದು. ಮತ್ತು ಪಿ.ಯು.ಸಿ. ಮಕ್ಕಳಿಗೂ ಬಿಸಿಯೂಟ ಯೋಜನೆ ವಿಸ್ತರಿಸುವ ಬಗ್ಗೆ ಮುಖ್ಯಮಂತ್ರಿಗಳ ಬಳಿ ಚರ್ಚಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಧಾನಸಭಾ ಸದಸ್ಯ ಅನಿಲ್ ಕುಮಾರ್ ರವರು ಸೋಮವಾರ ಅಧಿವೇಶನದಲ್ಲಿ ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿರುವ ಬಿಸಿಯೂಟ ಯೋಜನೆ ಬಗ್ಗೆ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿ ಕೋಳಿ ಮೊಟ್ಟೆ ಖರೀದಿ ೪.೩೦ ರಿಂದ ೫ ರೂ.ಗಳು ನೀಡುತ್ತಿದ್ದು, ಮಕ್ಕಳ ಪೌಷ್ಟಿಕತೆ ಮತ್ತು ಕಲಿಕಾ ಸಾಮರ್ಥ್ಯ ಹೆಚ್ಚಿಸಲು ಅಜೀಮ್‌ಪ್ರೇಮ್ ಜಿ ಫೌಂಡೇಷನ್ ವತಿಯಿಂದ ಮೊಟ್ಟೆ ನೀಡುತ್ತಿದ್ದು, ಆರ್ಥಿಕ ಇಲಾಖೆ ಮತ್ತು ಅಜೀಮ್ ಪ್ರೇಮ್ ಜಿ ಫೌಂಡೇಷನ್ ರವರೊಂದಿಗೆ ಚರ್ಚಿಸಿ ಮೊಟ್ಟೆ ಖರೀದಿ ಮತ್ತು ಸುಲಿಯುವ ವೆಚ್ಚವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಹಾರ ಯೋಜನೆಯನ್ನು ಒದಗಿಸಲು ಮುಖ್ಯಮಂತ್ರಿಗಳೊAದಿಗೆ ಪ್ರಸ್ತಾಪಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಎಂ.ಎಲ್.ಸಿ.ಅನಿಲ್‌ಕುಮಾರ್ ಸದನದಲ್ಲಿ ಪ್ರಶ್ನಿಸಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಮತ್ತು ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಪೌಷ್ಟಿಕ ಆಹಾರ ನೀಡಲು ಬಿಸಿಯೂಟ ಯೋಜನೆಯನ್ನು ರೂಪಿಸಿದರು. ಆದರೆ ಸರ್ಕಾರಿ ಶಾಲೆಗಳಿಗೆ ಸರಿಯಾದ ಸಮಯಕ್ಕೆ ಎಣ್ಣೆ, ಬೇಳೆ ಹಾಗೂ ಇತರೆ ಆಹಾರ ಪದಾರ್ಥಗಳು ಸರಿಯಾದ ಸಮಯಕ್ಕೆ ಸರಬರಾಜು ನೀಡದೆ ತೊಂದರೆಯಾಗುತ್ತಿದೆ.

ಪೌಷ್ಟಿಕ ಆಹಾರವೆಂದು ನೀಡುತ್ತಿರುವ ಮೊಟ್ಟೆ ಖರೀದಿಗೆ ಸರ್ಕಾರದಿಂದ ೬ ರೂಪಾಯಿಗಳು ಸಾಲದೇ ಮುಟ್ಟೆ ಖರೀದಿಗೆ ಮತ್ತು ಬೇಯಿಸಲು ಸರ್ಕಾರಿ ಶಾಲಾ ಶಿಕ್ಷಕರು ಮತ್ತು ಸಿಬ್ಬಂದಿಗಳು ತಮ್ಮ ವೇತನದಲ್ಲಿ ಹಣ ನೀಡುತ್ತಿದ್ದಾರೆ. ಸರ್ಕಾರವು ಈ ಹಿಂದೆ ನಿಗದಿಪಡಿಸಿರುವ ದರಗಳನ್ನು ಬದಲಿಸಿ ಈಗಿನ ಮಾರುಕಟ್ಟೆಯ ದರಗಳನ್ವಯ ಸರ್ಕಾರಿ ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಮತ್ತು ಮೊಟ್ಟೆ ಖರೀದಿಗೆ ಅನುದಾನ ನೀಡಬೇಕು ಹಾಗೂ ಅಡುಗೆ ಸಹಾಯಕರಿಗೆ ಮತ್ತು ಕಾರ್ಯಕರ್ತೆಯರಿಗೆ ಸರ್ಕಾರಿ ಕಾರ್ಮಿಕ ಕಾಯ್ದೆಯನ್ವಯ ವೇತನ ನೀಡಬೇಕು ಮತ್ತು ಸರ್ಕಾರಿ ಶಾಲೆಗಳೊಂದಿಗೆ ಜೂನಿಯರ್ ಕಾಲೇಜುಗಳಿದ್ದು, ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಹ ಮಧ್ಯಾಹ್ನದ ಉಪಹಾರ ಯೋಜನೆ ನೀಡಲು ಕ್ರಮವಹಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಸಚಿವರಲ್ಲಿ ಪ್ರಶ್ನಿಸಿದರು.

ಚಿತ್ರ ೦೯ ಕೆ.ಎಲ್.ಆರ್. ೦೧ : ಎಂ.ಎಲ್.ಸಿ.ಅನಿಲ್‌ಕುಮಾರ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net