ಸರ್ಕಾರದ ವತಿಯಿಂದ ರೈತ ದಿನಾಚರಣೆ ಆಚರಿಸಲು ಕ್ರಮ / ಎಂಎಲ್ಸಿ ಅನಿಲ್ ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಸರ್ಕಾರದ ವತಿಯಿಂದಲ್ಲೇ ಡಿ.೨೩ ರಂದು ರೈತ ದಿನಾಚರಣೆ ಆಚರಿಸಲು ಅಧಿವೇಶನದಲ್ಲಿ ಪ್ರಸ್ತಾಪಿಸಿ ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸಲಾಗುತ್ತದೆ. ರೈತ ಸಂಘಟನೆಗಳ ಕೂಗು ಇದಕ್ಕೆ ಹೆಚ್ಚಾಗಬೇಕು ಎಂದು ಎಂಎಲ್ಸಿ ಎಂ. ಎಲ್ ಅನಿಲ್ ಕುಮಾರ್ ತಿಳಿಸಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಸೋಮವಾರ ಕರುನಾಡ ರೈತ ಸಂಘದ ವತಿಯಿಂದ ನಡೆದ ರೈತ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿ, ಭಾರತ ದೇಶದಲ್ಲಿ ರೈತ, ಕೂಲಿ ಕಾರ್ಮಿಕರು ಶೇ.೭೫ ರಷ್ಟಿದ್ದಾರೆ. ಯಾವುದೇ ರಾಜ್ಯವಾಗಲಿ ಅಥವಾ ಕೇಂದ್ರ ಸರ್ಕಾರವಾಗಲಿ ಇದುವರೆಗೂ ರೈತ ದಿನಾಚರಣೆಯನ್ನು ಇಲ್ಲಿವರೆಗೆ ಆಚರಿಸಿಲ್ಲ. ಎಲ್ಲಾ ಆಚರಣೆಗಳನ್ನು ಆಚರಿಸುವ ಸರ್ಕಾರಗಳು, ರೈತ ದಿನಾಚರಣೆಗೆ ಯಾಕೆ ನಿರ್ಲಕ್ಷ್ಯ ತೋರಿದ್ದಾರೆ. ಸರ್ಕಾರದ ಮೂಲಕವೇ ಆಚರಿಸಲು ಕ್ರಮವಹಿಸಲಾಗುವುದು ಎಂದರು.

ಸಮಾಜದಲ್ಲಿ ಸ್ವಾಭಿಮಾನದ ಬದುಕು ರೈತರಿಂದ ಮಾತ್ರವೇ ಸಾಧ್ಯ. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ ಬೆಂಬಲ ಬೆಲೆ ಇಲ್ಲದಿದ್ದರೂ ಕೂಡ ಸ್ವಾಭಿಮಾನ ಬಿಟ್ಟಿಲ್ಲ. ಕೊರೊನಾ ಸಂದರ್ಭದಲ್ಲಿ ರೈತರು ಬೆಳೆಗಳು ಮಾತ್ರವೇ ಜನರ ಕೈಹಿಡಿದಿದೆ. ರೈತರಿಗೆ ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಸಮಸ್ಯೆಗಳು ಬರುತ್ತದೆ. ಸಂಘಟನೆಯು ಅಂತಹ ಸಮಸ್ಯೆಗಳ ಪರಿಹಾರಕ್ಕೆ ಜೊತೆಯಾಗಬೇಕು ಎಂದರು.

ಸAಸದ ಎಂ.ಮಲ್ಲೇಶ್ ಬಾಬು ಮಾತನಾಡಿ, ದೇಶದ ಆಸ್ತಿ ರೈತರು. ಪ್ರತಿನಿತ್ಯ ಆಹಾರ ಸೇವನೆ ರೈತರಿಂದ. ಆದರೆ ಸಮಾಜದಲ್ಲಿ ರೈತರನ್ನು ಗುರುತತಿಸುತ್ತಿಲ್ಲ. ರೈತಸಂಘಟನೆಗಳು ಒಗ್ಗಟ್ಟಿನಿಂದ ತಮ್ಮ ಸಮಸ್ಯೆಗಳನ್ನು ಪ್ರಶ್ನೆ ಮಾಡುವಂತೆ ಮಾಡಬೇಕು. ರೈತ ದಿನಾಚರಣೆ ಮುಂದಿನ ವರ್ಷ ಅದ್ದೂರಿಯಾಗಿ ನಡೆಸುವ ಜೊತೆಗೆ ನಿಮ್ಮ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುತ್ತದೆ ಎಂದರು.

ಚಿತ್ರದುರ್ಗ ಜಿಲ್ಲೆಯ ಮುರುಗ ಮಠದ ಡಾ ಬಸವಪ್ರಭು ಮಾತನಾಡಿ, ದೇಶದಲ್ಲಿ ತ್ರಿಮೂರ್ತಿಗಳಾದ ರೈತರು, ಸೈನಿಕರು, ಹಾಗೂ ಶಿಕ್ಷಕರು. ಇವರನ್ನು ಉದ್ದಾರ ಮಾಡುವುದು ಆಳುವ ಸರ್ಕಾರದ ಜವಾಬ್ದಾರಿಯಾಗಬೇಕು. ರೈತರ ಕಾಯಕವು ಸಮಾಜದಲ್ಲಿ ಮೋಸ, ವಂಚನೆ ಇಲ್ಲದೇ, ಪ್ರಾಮಾಣಿಕವಾಗಿದ್ದು, ಇಂತಹ ಕಾಯಕಕ್ಕೆ ನಾವು ಎಲ್ಲರೂ ಬೆಂಬಲಿಸುವAತೆ ಮನವಿ ಮಾಡಿದರು.

ಸಂಘಟನೆಯ ರಾಜ್ಯ ಅಧ್ಯಕ್ಷ ಡಾ.ಜಿ.ಸಿ ನಾರಾಯಣಸ್ವಾಮಿ, ಸಂಸ್ಥಾಪಕ ಅಧ್ಯಕ್ಷ ಗೋಪಾಲಯ್ಯ, ಮುಖಂಡರಾದ ರಮೇಶ್, ರಾಜಪ್ಪ, ರವಿಕುಮಾರ್, ಅಪ್ಪಾ ಸಾಹೇಬ್ ಬುಗಡೆ, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ತೋಟಗಾರಿಕೆ ಇಲಾಖೆಯ ಪರಮೇಶ್, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ವಿಜಯಲಕ್ಷ್ಮಿ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ರೈತರು ಇದ್ದರು.

ಚಿತ್ರ ೨೩ ಕೆ.ಎಲ್.ಆರ್. ೦೪ : ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಕರುನಾಡ ರೈತ ಸಂಘದ ವತಿಯಿಂದ ನಡೆದ ರೈತ ದಿನಾಚರಣೆಯನ್ನು ಉದ್ಘಾಟಿಸಿದ ಎಂ.ಎಲ್.ಸಿ.ಅನಿಲ್‌ಕುಮಾರ್, ಸಂಸದ ಎಂ.ಮಲ್ಲೇಶ್‌ಬಾಬು, ಮುರುಗ ಮಠದ ಡಾ.ಬಸವಪ್ರಭು ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net