ಸಮಾನತೆಯಿಂದ ಜೀವಿಸುವ ಹಕ್ಕು ಸಂವಿಧಾನ ನೀಡಿದ ಕೊಡುಗೆ / ಎಂಎಲ್ಸಿ ಅನಿಲ್ ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ದೇಶದ ಪ್ರತಿಯೊಬ್ಬರೂ ಸಮಾನತೆಯಿಂದ ಜೀವಿಸುವ ಹಕ್ಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಪ್ರತಿಯೊಂದು ಧರ್ಮಕ್ಕೂ ಒಂದೊAದು ಗ್ರಂಥ ಇದೆ. ಆದರೆ ಎಲ್ಲಾ ಧರ್ಮಗಳಿಗೂ ಸಂವಿಧಾನವೇ ಪವಿತ್ರ ಗ್ರಂಥ ಎಂದು ವಿಧಾನ ಪರಿಷತ್ ಸದಸ್ಯ ಎಂ.ಎಲ್ ಅನಿಲ್ ಕುಮಾರ್ ತಿಳಿಸಿದರು.

ತಾಲೂಕಿನ ಹೊನ್ನೇನಹಳ್ಳಿ ಗ್ರಾಮ ಪಂಚಾಯತಿ ಆವರಣದಲ್ಲಿ ಸೋಮವಾರ ಡಾ.ಬಿ.ಆರ್ ಅಂಬೇಡ್ಕರ್ ಅವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಅಂಬೇಡ್ಕರ್ ಅವರ ಹೆಜ್ಜೆಗುರುತುಗಳನ್ನು ಅರಿತುಕೊಂಡು ಅವರ ಮಾರ್ಗದರ್ಶನದಲ್ಲಿ ನಾವು ಎಲ್ಲರೂ ನಡೆಯಬೇಕಾಗಿದೆ. ವಿಶ್ವದ ಅತೀ ದೊಡ್ಡ ಪ್ರಜ್ಞಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ರೂಪಿಸಿದ್ದಾರೆ. ಇಂದು ಶಾಂತಿಯುತ ರಾಷ್ಟçವಾಗಿ ಭಾರತವು ಮುನ್ನೆಡೆಯುತ್ತಿದೆ ಎಂದರೆ ಅದಕ್ಕೆ ಭದ್ರ ತಳಪಾಯ ಹಾಕಿಕೊಟ್ಟಿರುವ ಸಂವಿಧಾನವೇ ಶ್ರೇಷ್ಠವಾಗಿದ್ದು, ಅಭಿವೃದ್ಧಿಗೆ ಒಗ್ಗಟ್ಟು ಮತ್ತು ಸಾಮರಸ್ಯದಿಂದ ಹೋಗಬೇಕು ಎಂದರು.

ಭಾರತ ದೇಶದಲ್ಲಿ ಸಂವಿಧಾನ ಮೀಸಲಾತಿಯು ಇಲ್ಲದ ಸಂದರ್ಭದಲ್ಲಿ ಯಾರು ಓದದೇ ಇರುವಷ್ಟು ಪದವಿಗಳನ್ನು ಅಂಬೇಡ್ಕರ್ ಪಡೆದಿದ್ದಾರೆ. ಆದರೆ ಇವತ್ತು ಮೀಸಲಾತಿಯಲ್ಲಿ ಎಲ್ಲಾ ಅವಕಾಶಗಳು ಇದ್ದರೂ ಶಿಕ್ಷಣಕ್ಕೆ ಅಧ್ಯತೆ ನೀಡುತ್ತಿಲ್ಲ. ಮೀಸಲಾತಿ ಒಂದು ವರ್ಗಕ್ಕೆ ಸೀಮಿತವಾಗಿಲ್ಲ. ಸಮಾಜದಲ್ಲಿನ ಎಲ್ಲಾ ಬಡವರಿಗೆ ಮೀಸಲಾತಿ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ಶಿಕ್ಷಣವನ್ನು ಪಡೆಯಬೇಕು ಎಂದರು.

ಸಾಹಿತಿ ಡಾ.ಕುಪ್ಪಹಳ್ಳಿ ಬೈರಪ್ಪ ಮಾತನಾಡಿ, ದೇಶದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲೂ ಸಹ ವರ್ಷದ ೩೬೫ ದಿನವು ನೆನಪು ಮಾಡಿಕೊಳ್ಳುವ ಮಹಾನ್ ಚೇತನ ಅಂಬೇಡ್ಕರ್. ಎಲ್ಲಿ ಭ್ರಷ್ಟಾಚಾರ, ಸಮಾನತೆ, ಅನ್ಯಾಯ ಕೂಡಿದೆ ಅಲ್ಲಿ ಸಂವಿಧಾನ ಪ್ರಸ್ತುತವೆನಿಸುತ್ತದೆ. ಅಂಬೇಡ್ಕರ್ ಆಶಯಗಳನ್ನು ಬಲಪಡಿಸಲು ಇಂತಹ ಪುತ್ಥಳಿಗಳ ಅವಶ್ಯಕತೆ ಹೆಚ್ಚಾಗಬೇಕು. ದೇಶದಲ್ಲಿ ಭಾಷಾವಾರು ಪ್ರಾಂತ್ಯಗಳ ವಿಂಗಡನೆಗೆ ಸಹ ಮಾರ್ಗದರ್ಶನ ನೀಡಿದ್ದಾರೆ ಶಿಕ್ಷಣಕ್ಕೆ ಹೆಚ್ಚಿನ ಅಧ್ಯತೆಯನ್ನು ನೀಡಿದ್ದಾರೆ ಎಂದರು

ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ವೈ ಶಿವಕುಮಾರ್, ಹೊನ್ನೇನಹಳ್ಳಿ ಗ್ರಾಪಂ ಅಧ್ಯಕ್ಷೆ ನಾಗವೇಣಿ, ಉಪಾಧ್ಯಕ್ಷ ಮಂಜುನಾಥ್, ಪಿಡಿಒ ಹರೀಶ್ ಕುಮಾರ್, ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲಗೌಡ, ಜಿಪಂ ಸಿಎ ಗಂಗಾಧರಯ್ಯ, ಮಾಜಿ ಗ್ರಾಪಂ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ನಾಗೇಂದ್ರ, ವೆಂಕಟೇಶಪ್ಪ, ಮುಖಂಡರಾದ ಬೆಳಗಾನಹಳ್ಳಿ ಮುನಿವೆಂಕಟಪ್ಪ, ಖಾದ್ರಿಪುರ ಬಾಬು, ಹೊನ್ನೇನಹಳ್ಳಿ ಗ್ರಾಪಂ ಸದಸ್ಯರಾದ ಶ್ರೀನಾಥ್, ಗಣೇಶ್, ಜಯರಾಮ್, ಯಲ್ಲಮ್ಮ, ರೇಣುಕಮ್ಮ, ಶಿಲ್ಪಾ, ಸೌಂದರ್ಯ, ಅರುಣಾ, ಗೋವಿಂದರಾಜು, ಮುಂತಾದವರು ಇದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೫ : ಕೋಲಾರ ತಾಲ್ಲೂಕು ಹೊನ್ನೇನಹಳ್ಳಿ ಗ್ರಾ.ಪಂ. ಆವರಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ರವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಂ.ಎಲ್.ಸಿ. ಅನಿಲ್ ಕುಮಾರ್, ಸಾಹಿತಿ ಡಾ.ಕುಪ್ಪಳ್ಳಿ ಬೈರಪ್ಪ, ಹೊನ್ನೇನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ನಾಗವೇಣಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net