ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಿ

ಪಿರಿಯಾಪಟ್ಟಣ ತಾಲೂಕಿನ ಐಲಾಪುರ ಗ್ರಾಮದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಕೆ.ಮಹದೇವ್ ಭೂಮಿಪೂಜೆ ನೆರವೇರಿಸಿದರು. ಕೃಷ್ಣಕುಮಾರ್, ಡಾ.ಸೋಮಯ್ಯ, ಸುನಿಲ್ ಇತರರಿದ್ದರು.
IMG20220907151927
Published on

ಬೈಲಕುಪ್ಪೆ: ಸಾರ್ವಜನಿಕರು ನಿತ್ಯದ ಕೆಲಸಗಳಿಗಾಗಿ ಬಂದಾಗ ಅಧಿಕಾರಿಗಳು ವಿಳಂಬ ಮಾಡದೆ ಸಮಸ್ಯೆಗಳ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಶಾಸಕ ಕೆ.ಮಹದೇವ್ ತಿಳಿಸಿದರು.


ಪಿರಿಯಾಪಟ್ಟಣ ತಾಲೂಕಿನ ಐಲಾಪುರ, ಪುನಾಡಹಳ್ಳಿ ಗ್ರಾಮಗಳಿಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ನಂತರ ತಾಲೂಕಿನ ಅದೆಷ್ಟೋ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಿದ್ದು, ಇನ್ನೂ ಸಾಕಷ್ಟು ಸಮಸ್ಯೆಯನ್ನು ಜನರು ಅನುಭವಿಸುತ್ತಿರುವುದು ಕಂಡುಬರುತ್ತದೆ. ವಿವಿಧ ಇಲಾಖೆ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಕಚೇರಿಗೆ ಬಂದರೆ ಅವರನ್ನು ಸುಮ್ಮನೆ ಅಲೆದಾಡಿಸುವುದು, ವಿಳಂಬ ಮಾಡದೆ ಕೂಡಲೇ ಅವರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಿದರು.


ಈಗಾಗಲೇ ತಾಲೂಕಿನ ಬಹುಪಾಲು ಎಲ್ಲ ರಸ್ತೆಗಳು ಸೇರಿದಂತೆ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಮುಂದಿನ ದಿನಗಳಲ್ಲಿಯೂ ಜನತೆಗೆ ಅಗತ್ಯ ಕೆಲಸ ಮಾಡುವುದಾಗಿ ಭರವಸೆ ನೀಡಿದರು.


ತಾಪಂ ಇಒ ಕೃಷ್ಣಕುಮಾರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ಇಂಜಿನಿಯರ್ ಮಲ್ಲಿಕಾರ್ಜುನ್, ಎಇಇ ಮಹಮ್ಮದ್ ಪಾಷ, ಕೆಇಬಿ ಎಇಇ ಸುನೀಲ್, ಪಿಡಿಒ ಮಂಜುನಾಥ್, ಮುಖಂಡರಾದ ಅಣ್ಣಯ್ಯಶೆಟ್ಟಿ, ರಾಮು ಐಲಾಪುರ, ರಂಗಸ್ವಾಮಿ, ಸ್ವಾಮಿಗೌಡ, ಅಶೋಕ್, ಜಲೇಂದ್ರ, ಲೋಕೇಶ್, ಕಿರಂಗೂರು ಮಹದೇವ್, ಗುರುರಾಜ್, ಪ್ರದೀಪ್ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net