

ಸಾಂಸ್ಕೃತಿಕ ನಗರಿ ಮೈಸೂರಿನ ಜಯನಗರದ ಹೊಸ ಕೋರ್ಟ್ ರಸ್ತೆಯಲ್ಲಿರುವ ಎ.ವಿ.ಟೆಕ್ನಾಲಜಿಸ್ ( ಸನ್ ರೈಸರ್ ಸೋಲಾರ್) ಸಂಸ್ಥೆಯ ಸೋಲಾರ್ ಉತ್ಪನ್ನಗಳು ಜನ ಮನ್ನಣೆ ಗಳಿಸಿದ್ದು, ಸೋಲಾರ್ ವಾಟರ್ ಹೀಟರ್ ಮತ್ತು ಸೋಲಾರ್ ರಿನಿವೇಬಲ್ ಎನರ್ಜಿ ಸಂಬಂಧಿತ ಎಲ್ಲ ರೀತಿಯ ಉತ್ಪನ್ನಗಳು ಲಭ್ಯ ಇವೆ.
ಸನ್ ರೈಸರ್ ಸೋಲಾರ್ಸ್ ಸಂಸ್ಥೆ ಅತ್ಯುತ್ತಮ ಬ್ರಾೃಂಡ್‌ನ ಸೋಲಾರ್ ಉತ್ಪನ್ನಗಳ ತಯಾರಿ ಮಾಡುವಲ್ಲಿ ಹೆಸರಾಗಿದೆ. ಗ್ರಾಹಕರ ನಂಬಿಕೆಯ ಹಾಗೂ ವಿಶ್ವಾಸಾರ್ಹ ಸಂಸ್ಥೆ ಆಗಿದೆ. ಮೈಸೂರಿನಲ್ಲಿ ಆರಂಭವಾದ ಸದರಿ ಸಂಸ್ಥೆಯು ಗ್ರಾಹಕರ ಬೆಂಬಲದಿಂದಾಗಿ ಈಗ ರಾಜ್ಯದ ಅನೇಕ ಜಿಲ್ಲೆಯಲ್ಲಿ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಇದಕ್ಕೆ ಕಾರಣ ಸಂಸ್ಥೆಯ ಉತ್ತಮ ಸೇವೆ, ಆಕರ್ಷಕ ಕೊಡುಗೆ ಆಗಿದೆ.
ಒಂದು ಕಾಲದಲ್ಲಿ ಉದ್ಯೋಗಕ್ಕಾಗಿ ಅಲೆಡಾಡುತ್ತಿದ್ದ ರವೀಂದ್ರ ಎಸ್.ಕೆ. ಅವರೀಗ ಯಶಸ್ವಿ ಉದ್ಯಮಿಯಾಗಿದ್ದು, ಸನ್ ರೈಸರ್ ಸೋಲಾರ್ ಸಂಸ್ಥೆಯನ್ನು ಸ್ಥಾಪಿಸಿ ಯುವಕರಿಗೆ ಉದ್ಯೋಗ ನೀಡುವ ಮೂಲಕ ಯುವ ಉದ್ಯಮಿಗಳಿಗೆ ಪ್ರೇರಣೆಯಾಗಿದ್ದಾರೆ.
ಸಂಸ್ಥೆಯಲ್ಲಿ ‘ಸೋಲಾರ್ ವಾಟರ್ ಹೀಟರ್’, ‘ಸೋಲಾರ್ ಬೀದಿ ದೀಪ’, ‘ಅಕ್ವಟಿಕ್ ಆಟೋಮೆಟಿಕ್ ವಾಟರ್ ಲೆವೆಲ್ ಕಂಟ್ರೋಲರ್’ ಉತ್ಪನ್ನಗಳನ್ನು ತಯಾರು ಮಾಡಲಾಗುತ್ತಿದೆ. ಜಯನಗರದ ಹೊಸ ಕೋರ್ಟ್ ರಸ್ತೆ, 5 ನೇ ಕ್ರಾಸ್, 2ನೇ ಮೇನ್‌ನಲ್ಲಿ ಸಂಸ್ಥೆಯ ಕಚೇರಿ ಇದ್ದು, ಶ್ರೀರಾಂಪುರದ ಮೈಸೂರು ಪಬ್ಲಿಕ್ ಶಾಲೆಯ ಬಳಿ ಕಾರ್ಖಾನೆ ಇದೆ. ಸಂಸ್ಥೆಯಲ್ಲಿ ಸುಮಾರು 8 ಜನಕ್ಕೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಕಾರ್ಖಾನೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಸ್ವಂತ ಕಟ್ಟಡ ಹೊಂದಲು ಕೆಐಡಿಬಿಗೆ ಭೂಮಿ ನೀಡುವಂತೆ ಅರ್ಜಿ ಸಲ್ಲಿಸಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆ, ಸಿಂದಗಿ ತಾಲೂಕು ಹಂದಿಗನೂರಿನ ಸಿದ್ದಪ್ಪ ಮತ್ತು ರತ್ನ ಭಾಯಿ ಎಂಬ ರೈತಾಪಿ ದಂಪತಿಯ ಪುತ್ರ ರವೀಂದ್ರ 2004 ರಲ್ಲಿ ಈ ಕ್ಷೇತ್ರಕ್ಕೆ ಪ್ರವೇಶಿಸಿದರು. ಆರಂಭದಲ್ಲಿ ಬೇರೆ ಸೋಲಾರ್ ಕಂಪನಿಗಳ ಡೀಲರ್ ಆಗಿ ಕೆಲಸ ಮಾಡಿದರು. 2017ರಲ್ಲಿ ಸನ್ ರೈಸರ್ಸ್ ಸೋಲಾರ್ ಎಂಬ ಸ್ವಂತ ಕಂಪನಿ ಆರಂಭಿಸಿ ಸಕ್ಸಸ್ ಆಗಿದ್ದಾರೆ. ಪತ್ನಿ ಶ್ವೇತಾ ಕೂಡ ತಮ್ಮ ಸಕ್ಸಸ್‌ನ ಹಿಂದೆ ಇದ್ದಾರೆ. ಶೂನ್ಯದಿಂದಲೂ ತಮಗೆ ಪ್ರೋತ್ಸಾಹ ನೀಡಿದ್ದಾರೆ. ಹಾಗಾಗಿ ಇಂತ ಸಂಸ್ಥೆ ಕಟ್ಟಲು ಕಾರಣವಾಯಿತು. ಹಗಲಿರುಳು ಸಿಬ್ಬಂದಿ ವರ್ಗದವರು ಕೈಜೋಡಿಸಿ ಈ ಯಶಸ್ವಿಗೆ ಕಾರಣಿ ಭೂತರಾಗಿರುತ್ತಾರೆ ಎಂದು ರವೀಂದ್ರ ಹೇಳುತ್ತಾರೆ.
ನೂರಾರು ಜನರಿಗೆ ಉದ್ಯೋಗ ನೀಡುವ ಆಸೆ:
ಸದ್ಯ ಮೈಸೂರು ಸೇರಿದಂತೆ ಹಾಸನ, ಮಂಡ್ಯ, ವಿಜಯಪುರ, ಕಲಬುರಗಿ, ಯಾದಗಿರಿ, ಹುಬ್ಬಳ್ಳಿ, ಬೀದರ್, ಚಾಮರಾಜನಗರ, ರಾಯಚೂರು, ಕೊಪ್ಪಳದಲ್ಲಿ ಸಂಸ್ಥೆಯ ಉತ್ಪನ್ನಗಳು ಸಿಗುತ್ತಿವೆ. ಮುಂದೆ ರಾಜ್ಯದ ಎಲ್ಲೆಡೆ ವಿಸ್ತರಿಸುವ ಯೋಜನೆ ರವೀಂದ್ರ ಅವರಲ್ಲಿದೆ. ಕರ್ನಾಟಕದಲ್ಲಿ ತಮ್ಮ ಸನ್ ರೈಸರ್ ಸೋಲಾರ್ ದೊಡ್ಡ ಬ್ರಾೃಂಡ್ ಆಗಿ ಅಭಿವೃದ್ಧಿ ಮಾಡಬೇಕು. ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಮತ್ತು ಹೋಬಳಿ ಕೇಂದ್ರಗಳಲ್ಲೂ ಸನ್ ರೈಸರ್ ಸೋಲಾರ್ ಉತ್ಪನ್ನಗಳು ಜನರಿಗೆ ಸಿಗುವಂತಾಗಬೇಕು. ಕಾರ್ಪೋರೇಟ್ ಮಟ್ಟದಲ್ಲಿ ತಮ್ಮ ಸಂಸ್ಥೆಯನ್ನು ಬೆಳೆಸಿ ನೂರಾರು ಜನರಿಗೆ ಉದ್ಯೋಗ ನೀಡಬೇಕು. ಎಲ್ಲೆಡೆ ತಮ್ಮ ಸಂಸ್ಥೆಯ ಡೀಲರ್ಸ್ ಮತ್ತು ಡಿಸ್ಟ್ರಿಬ್ಯೂಟರ್ ಪ್ರಾರಂಭಿಸಬೇಕು ಎನ್ನುವುದು ರವೀಂದ್ರ ಅವರ ಕನಸು.
ಈಗಾಗಲೇ ರಾಜ್ಯದಂತ ಉತ್ಪನ್ನಗಳಿಗೆ ಜನ ಮನ್ನಣೆ ಸಿಕ್ಕಿದೆ:
ಈಗಾಗಲೇ ಹಲವಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸನ್ ರೈಸರ್ ಸೋಲಾರ್ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಮೈಸೂರು ನಗರ ಹೈವೇ ವೃತ್ತದ ಬಿಷಪ್ ಹೌಸ್‌ನಲ್ಲೂ ಅವಳಡಿಕೆ ಮಾಡಲಾಗಿದೆ. ನಗರದ ಅನೇಕ ಸಾರ್ವಜನಿಕರು ಕೂಡ ಸದರಿ ಸೋಲಾರ್ ಬೀದಿ ದೀಪಗಳನ್ನು ತಮ್ಮ ಬಳಿ ಅಳವಡಿಸಿಕೊಂಡಿದ್ದು, ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಹೊಸ ಬಡಾವಣೆಗಳಲ್ಲೂ ಸದರಿ ದೀಪಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಅಭಾವ ತಪ್ಪಿಸಲು ಸೋಲಾರ್ ಪಂಪ ಸೆಟ್ ಗಳನ್ನು ಒದಗಿಸುತಿದ್ದಾರೆ. ಇದು ರೈತರಿಗೆ ಕೃಷಿ ನೀರಾವರಿಗೆ ಸಹಕಾರಿಯಾಗಿದೆ. ಸಾಮಾನ್ಯ ಪಂಪ್‌ಸೆಟ್‌ಗಳಾದರೆ, ರಾತ್ರಿ ವೇಳೆಯಲ್ಲಿ ವಿದ್ಯುತ್ ನೀಡಿದಾಗ ಆನ್ ಮಾಡಬೇಕಾಗುತ್ತದೆ. ಆದರೆ ಸೋಲಾರ್ ಪಂಪ್ ಸೆಟ್ ಹಗಲು ಹೊತ್ತಿನಲ್ಲಿ ಪೂರ್ಣವಾಗಿ ನೀರಾವರಿ ವ್ಯವಸ್ಥೆ ಇರುತ್ತದೆ. ಅಲ್ಲದೆ ವಿದ್ಯುತ್ ಮತ್ತು ನೀರಿನ ವ್ಯರ್ಥವನ್ನು ಕಡಿಮೆ ಮಾಡುತ್ತದೆ. ಸದ್ಯ ಎಲ್ಲೆಡೆ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಸೋಲಾರ್ ಪಂಪ್ ಅಳವಡಿಸಿಕೊಂಡರೆ ಬೆಳಗ್ಗಿನಿಂದ ಸಂಜೆವರೆಗೂ ಪಂಪ್ ಬಳಸಬಹುದಾಗಿದೆ. ಹಾಗೂ ಮನೆ ಬಳಕೆಗೆ ಬೇಕಾದ ವಿದ್ಯುತ್ ಬಳಕೆಯನ್ನು ಸಂಪೂರ್ಣವಾಗಿ ಸೋಲಾರ್ ರೂಫ್ ಟಾಪ್ ನೀಡುತ್ತದೆ ಇದರಿಂದ ವಿದ್ಯುತ್ ಬಿಲ್ ಪಾವತಿ ಹೊರೆ ತಪ್ಪಿಸಬಹುದು. ಇದಕ್ಕೆ ಕೇಂದ್ರದಿಂದ 78 ಸಾವಿರ ರೂ ವರೆಗೂ. ಸಬ್ಸಿಡಿಯೂ ಸಿಗುತ್ತದೆ.