

ಬನ್ನೂರು: ಪಟ್ಟಣದಲ್ಲಿ ಹಿಂದುಳಿದ ವರ್ಗಗಳ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಒಬಿಸಿ ಸದಸ್ಯರಿಗೆ ಗುರುತಿನ ಚೀಟಿ ವಿತರಿಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಒಬಿಸಿ ಘಟಕದ ಅಧ್ಯಕ್ಷ ಎನ್.ನಾಗರಾಜಾಚಾರ್ ಗುರುತಿನ ಚೀಟಿ ವಿತರಿಸಿ ಮಾತನಾಡಿ, ಎಲ್ಲರೂ ಸದಸ್ಯತ್ವ ಪಡೆದುಕೊಂಡು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸುವಂತೆ ತಿಳಿಸಿದರು.
ಪುರಸಭೆ ಸದಸ್ಯರಾದ ಶಿವಣ್ಣ, ಉಪಾಧ್ಯಕ್ಷ ಚಲುವರಾಜು, ಮುಖಂಡರಾದ ಕೆ.ಎಸ್.ಸಿದ್ದರಾಜು, ಮಹದೇವು, ಜಯರಾಮು, ಕುಮಾರ್, ವಿಜೇಂದ್ರ, ಡಿ.ಬಿ.ಮಹೇಶ್, ಎಂ.ಸಿದ್ದರಾಜು, ಮಹೇಶ್, ದೇವರಾಜು, ಆನಂದ್, ಎಂ.ಪಿ.ಕುಮಾರ್, ಚಿಕ್ಕಣ್ಣ, ಸಿದ್ದಪ್ಪಾಜಿ, ಶಿವಣ್ಣ, ಪ್ರಕಾಶ್, ಹನುಮಂತು, ಪುಟ್ಟಸ್ವಾಮಾಚಾರ್, ಗುತ್ತಿಗೆದಾರ ಎ.ಎನ್.ಸ್ವಾಮಿ ಉಪಸ್ಥಿತರಿದ್ದರು.