ಸದಸ್ಯರ ಸಹಭಾಗಿತ್ವದಿಂದ ಅಭಿವೃದ್ಧಿ ಸಾಧ್ಯ

ಸದಸ್ಯರ ಸಹಭಾಗಿತ್ವದಿಂದ ಅಭಿವೃದ್ಧಿ ಸಾಧ್ಯ
Published on

ಪಿರಿಯಾಪಟ್ಟಣ: ಪ್ರತಿಯೊಬ್ಬ ಸದಸ್ಯರ ಸಹಭಾಗಿತ್ವದಲ್ಲಿ ಮಾತ್ರ ಸಂಘಗಳು ಉತ್ತುಂಗಕ್ಕೇರಲು ಸಾಧ್ಯ ಎಂದು ತಾಲೂಕು ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಸ್.ಸಿ.ಪರಮಶಿವಯ್ಯ ತಿಳಿಸಿದರು.

ಪಟ್ಟಣದ ಕೆ.ಆರ್.ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 2023-24ನೇ ಸಾಲಿನ ವಾರ್ಷಿಕ ಸಭೆ ಉದ್ಘಾಟಿಸಿ ಮಾತನಾಡಿದರು. ಸುಸ್ತಿಯಾಗಿರುವ ಸಾಲದ ಹಣವನ್ನು ನೌಕರರು ಸಮಯಕ್ಕೆ ಸರಿಯಾಗಿ ಮರುಪಾವತಿಸಿದರೆ ನೌಕರರ ವಿವಿಧೋದ್ದೇಶ ಸಹಕಾರ ಸಂಘ ಲಾಭ ಹೊಂದಲು ಸಾಧ್ಯ ಎಂದರು.

ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಯಲ್ಲಿ ಕುಂಠಿತವಾಗದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಗುಣ ಪ್ರತಿಯೊಬ್ಬರಲ್ಲೂ ಮೂಡಬೇಕು ಹಾಗೂ ಸಂಘವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದರು.

ಉಪಾಧ್ಯಕ್ಷ ಜಿ.ದೇವರಾಜು ಮಾತನಾಡಿ, ಸಂಘವು ಅಭಿವೃದ್ಧಿ ಹೊಂದಲು ಸದಸ್ಯರಲ್ಲಿ ಯಾವುದೇ ರೀತಿಯ ಹಸ್ತಕ್ಷೇಪ ಬಾರದೆ ಅನ್ಯೋನತೆಯಿಂದ ಕಾರ್ಯನಿರ್ವಹಿಸಿದರೆ ಯಾವ ಸಮಸ್ಯೆಗಳೂ ತಲೆದೋರದಂತೆ ಸಂಘವನ್ನು ಬೆಳೆಸಲು ಸಹಕಾರಿಯಾಗುತ್ತದೆ ಎಂದರು.

ಎಸ್‌ಎಸ್‌ಎಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳನ್ನು ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸರ್ಕಾರಿ ನೌಕರರಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಖಜಾಂಚಿ ಸಿ.ಮಂಜುನಾಥ್, ನಿರ್ದೇಶಕ ಪಿ.ವಿ.ದೇವರಾಜು, ಜಯಲಕ್ಷ್ಮೀ, ಶ್ಯಾಮ್, ಜಗದೀಶ್ ಆರಾಧ್ಯ, ಗಿರೀಶ್, ಆರ್.ಮಹೇಶ್, ಕೆ.ಸುರೇಶ್, ಪಿ.ಎನ್.ರವಿಕುಮಾರ್, ಎಂ.ಜಿ.ರೂಪಾ, ನಾಗರಾಜು, ವಿ.ಎಸ್.ಸರ್ವಮಂಗಳಾ ಹಾಗೂ ಕಾರ್ಯದರ್ಶಿ ಎಚ್.ಡಿ.ರವಿಕುಮಾರ್, ಬಿ.ಎಂ.ಗಣೇಶ್ ವಿವಿಧ ಇಲಾಖೆಯ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net