ಸಚಿವ ಸ್ಥಾನಕ್ಕಾಗಿ ದೆಹಲಿಗೆ ಅಲೆಯುವುದಿಲ್ಲ ಎಂದ ಎಚ್.ವಿಶ್ವನಾಥ

IMG-20201128-WA0023.png
Published on

ಬಳ್ಳಾರಿ:
ಪಕ್ಷದಲ್ಲಿ ಮೂಲ, ವಲಸಿಗ ಎಂಬುದು ಇಲ್ಲ. ಈ ವಿಚಾರವಾಗಿ ಯಾರು ಮಾತನಾಡಬಾರದು. ಅದು ಪಕ್ಷಕ್ಲೆ ಶೋಭೆ ತರುವುದಿಲ್ಲ. ಇದರಿಂದ ಪಕ್ಷಕ್ಕೆ ಮುಜುಗರವಾಗಲಿದೆ ಎಂದು ಎಂಎಲ್ಸಿ ಎಚ್.ವಿಶ್ವನಾಥ ಹೇಳಿದರು.
ನಾವೆಲ್ಲ ಬಿಜೆಪಿಯನ್ನು ಪ್ರತಿನಿಧಿಸುತ್ತಿದ್ದೇವೆ. ಇದರಿಂದಾಗಿ ಮೂಲ ವಲಸಿಗ ಎಂಬ ಪ್ರಶ್ನೆಯೇ ಬರುವುದಿಲ್ಲ. ಸಚಿವ ಸ್ಥಾನ ಸಿಗಲಿದೆ ಎಂದು ನಾನು ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲ.
ಸಮ್ಮಿಶ್ರ ಸರ್ಕಾರದ ನಾಯಕತ್ವದ ವಿರುದ್ಧ ದಂಗೆ ಎದ್ದು ರಾಜೀನಾಮೆ ನೀಡಿದ್ದೇವೆ. ಅದು ಪಕ್ಷಾಂತರ ಅಲ್ಲ. ನನಗೆ ನಲವತ್ತು ವರ್ಷದ ಅನುಭವ ಇದೆ. ಮಂತ್ರಿಗಿರಿಗಾಗಿ ದೆಹಲಿಗೆ ಅಲೆಯುವುದಿಲ್ಲ. ನನ್ನ ಅನುಭವ ನೋಡಿ ಅವರು ಕೊಡಬೇಕು ಎಂದು ವಿಶ್ವನಾಥ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net