

ಕೋಲಾರ: ಜಿಲ್ಲೆಯ ಪ್ರಮುಖ ಬೆಳೆಯಲ್ಲಿ ಒಂದಾದ ವಾವು ಹೂವು ಬಿಡಲು ಶುರು ವಾಡಿದೆ. ಸಕಾಲದಲ್ಲಿ ಹೂವು ಆಗಮಿಸುತ್ತಿರುವುದರಿಂದ ಉತ್ತಮ ಫಸಲು ನಿರೀಕ್ಷೆಯಲ್ಲಿ ರೈತರಿದ್ದಾರೆ. ಪ್ರಸ್ತುತ ಹೂವು ಬರಲು ಹಾಗೂ ಬಂದಿರುವ ಮರಗಳಲ್ಲಿ ಹೂ ಉಳಿಸಿಕೊಳ್ಳಲು ಔಷಧ ಸಿಂಪಡಣೆಯಲ್ಲಿ ವಾವು ಬೆಳೆಗಾರರು ತೊಡಗಿದ್ದಾರೆ.
ಕಳೆದ ವರ್ಷ ಉತ್ತಮ ಮಳೆಯಾಗಿದ್ದು, ಹೂವು ಬಿಡುವ ನಿಕಟಪೂರ್ವ ಹಂತ (ಡಿಸೆಂಬರ್, ಜನವರಿ)ದಲ್ಲಿ ಬಿಸಿಲು ಬರುತ್ತಿರುವುದರಿಂದ ಹೂವು ಸಮರ್ಪಕವಾಗಿ ಕಾಣಿಸಿಕೊಳ್ಳಲು ಪೂರಕ ವಾತಾವರಣವಿದೆ. ಈ ಹಂತದಲ್ಲಿ ಮಳೆ, ಮಂಜು ಹೆಚ್ಚಾಗಿ ಸುರಿದರೆ ಇಳುವರಿ ಮೇಲೆ ದುಷ್ಪರಿಣಾಮ ಬೀರುತ್ತದೆ. ಇದೇ ವಾತಾವರಣವಿದ್ದರೆ ಅಗತ್ಯದಷ್ಟು ಕಾಯಿಗಳು ಮರಗಳಲ್ಲಿ ಉಳಿದುಕೊಳ್ಳಲು ಸಹಕಾರಿಯಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ.
ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ ಇದ್ದು, ರಾಜ್ಯದಲ್ಲಿ ಕೋಲಾರ ಪ್ರಥಮ ಸ್ಥಾನದಲ್ಲಿದೆ. ವಾರ್ಷಿಕ ಐದರಿಂದ ಏಳೂವರೆ ಲಕ್ಷ ಟನ್ ಇಳುವರಿ ನಿರೀಕ್ಷಿಸಲಾಗುತ್ತದೆ. ವಾವು ವಾರಾಟಕ್ಕೆ ರಾಜ್ಯದ ದೊಡ್ಡ ವಾರುಕಟ್ಟೆ ಎನಿಸಿರುವ ಶ್ರೀನಿವಾಸಪುರದಲ್ಲಿ ವಾರ್ಷಿಕ 75 ಕೋಟಿ ರೂ.ಗೂ ಅಧಿಕ ವಹಿವಾಟು ನಡೆಯುತ್ತದೆ. ಆದರೆ ಕರೊನಾ ಎದುರಾದ ನಂತರ ರೈತ ಮತ್ತು ವ್ಯಾಪಾರಸ್ಥರು ಸತತ ನಷ್ಟ ಹೊಂದುವಂತಾಯಿತು.
ಕಳೆದ ವರ್ಷ ಲಾಕ್‌ಡೌನ್ ಜತೆಗೆ ನೊಣದ ಕಾಟದಿಂದ ತೋಟಗಳಲ್ಲೇ ಹಣ್ಣು ಕೊಳೆತು ಹೋಗಿದ್ದರಿಂದ ಲಕ್ಷಾಂತರ ರೂ. ನಷ್ಟವಾಯಿತು. ಈ ಬಾರಿ ಕರೊನಾ ಮೂರನೇ ಅಲೆಯಲ್ಲಿ ವೈರಸ್ ತೀಕ್ಷ್ಣತೆ ಕಳೆದುಕೊಂಡು, ಲಾಕ್‌ಡೌನ್ ಸಾಧ್ಯತೆ ಕಡಿಮೆ ಎಂದು ಸರ್ಕಾರ ಹೇಳುತ್ತಿರುವುದರಿಂದ ಹಾಗೂ ಹೂವು ಸಕಾಲಕ್ಕೆ ಬರುತ್ತಿರುವುದರಿಂದ ಈ ವರ್ಷವಾದರೂ ಒಳ್ಳೆಯದಾಗಬಹುದೇನೋ ಎಂದು ರೈತರು ಆಸೆ ಕಂಗಳಿಂದ ಎದುರು ನೋಡುತ್ತಿದ್ದಾರೆ.
ಮೇ, ಜೂನ್‌ನಲ್ಲಿ ಕಟಾವಿಗೆ ಬರುವ ಹಣ್ಣುಗಳು ಇಲ್ಲಿಂದ ದೇಶದ ನಾನಾ ಕಡೆಯಷ್ಟೇ ಅಲ್ಲದೆ, ಅಮೆರಿಕ, ಕೆನಡಾ, ದುಬೈ ಮತ್ತಿತರ ದೇಶಗಳಿಗೆ ರಫ್ತಾಗುತ್ತವೆ. ಶೇಕಡಾ 60, ತೋತಾಪುರಿ, ಬಂಗನಪಲ್ಲಿ, ಮಲ್ಲಿಕಾ ತಲಾ ಶೇ.10, ರಸಪುರಿ, ಸಿಂಧೂರ, ಬಾದಾಮಿ, ದಶಾರಿ, ಕೇಸರ್ ಮತ್ತಿತರ ತಳಿಗಳನ್ನೂ ಬೆಳೆಸಲಾಗಿದ್ದು, ತೋತಾಪುರಿ, ಬಂಗನಪಲ್ಲಿ ಹಣ್ಣುಗಳು ಜ್ಯೂಸ್‌ಗೆ ಹೆಚ್ಚಿನ ಪ್ರವಾಣದಲ್ಲಿ ರವಾನೆಯಾಗುತ್ತವೆ. ತಿನ್ನಲು ಬಲು ರುಚಿಕರವಾದ ಮಲ್ಲಿಕಾ, ದಶಾರಿ, ಕೇಸರ್ ಮತ್ತಿತರ ತಳಿಗಳ ಹಣ್ಣುಗಳು ಹೊರದೇಶಗಳಿಗೆ ಹೆಚ್ಚು ರವಾನೆಯಾಗುತ್ತವೆ.
ಮಳೆ ಬರದಿದ್ದರೆ ಒಳಿತು: ಜ.14ರ ರಾತ್ರಿ ಮಾಲೂರು, ಕೋಲಾರದ ಕೆಲಭಾಗಗಳಲ್ಲಿ ಹಾಗೂ 15ರ ರಾತ್ರಿ ಶ್ರೀನಿವಾಸಪುರದ ಹಲವು ಭಾಗಗಳಲ್ಲಿ ಚದುರಿದಂತೆ ಮಳೆಯಾಗಿದ್ದು, ವಾವು ಹೂವು ಬಿಡುವ ಹಂತದಲ್ಲಿ ಇದು ದುಷ್ಪರಿಣಾಮ ಬೀರಲಿದೆ. ಈ ತಿಂಗಳ ಪೂರ್ತಿ ಮಳೆ ಬಾರದಿದ್ದರೆ ಒಳಿತು. ಹೂವು ಬರುವ ಮುನ್ನ ಒಮ್ಮೆ, ಹೂವು ಬಂದ ನಂತರ 2 ಬಾರಿ ಔಷಧ ಸಿಂಪಡಣೆ ವಾಡಬೇಕಾಗುತ್ತದೆ ಎಂಬುದು ಅನುಭವಿ ವಾವು ಬೆಳೆಗಾರರ ಅಭಿಪ್ರಾಯ.
ಹೂವು ಕಚ್ಚದಿರುವ ಮರಗಳಿಗೆ ಲೀಟರ್ ನೀರಿಗೆ ಐಐಎಚ್‌ಆರ್ ವ್ಯಾಂಗೋ ಸ್ಪೆಷಲ್ 5 ಗ್ರಾಂ ಅಥವಾ ಯಾವುದೇ ಪೋಷಕಾಂಶ ಮಿಶ್ರಣ 2 ಮಿಲೀ. ಮಿಶ್ರಣ ಸಿಂಪಡಿಸಬೇಕು. 20 ಗ್ರಾಂ ಪೊಟ್ಯಾಸಿಯಂ ನೈಟ್ರೇಟ್ (ಇದರೊಂದಿಗೆ ಮರಗಳ ಫಲಪ್ರದತೆ ಕಡಿಮೆಯಾಗುವುದರಿಂದ ಪೋಷಕಾಂಶ ಅಥವಾ ಸಸ್ಯ ಸಂರಕ್ಷಣಾ ಔಷಧ ಸಿಂಪಡಣೆ ವಾಡಬಾರದು.) ಸಿಂಪಡಣೆ ವಾಡಬೇಕಾಗುತ್ತದೆ. ಎಂ.ಗಾಯತ್ರಿ, ತೋಟಗಾರಿಕೆ ಉಪನಿರ್ದೇಶಕಿ, ಕೋಲಾರ ಕಳೆದ ವರ್ಷ ಜನವರಿಯಲ್ಲಿ ಮಳೆ ಬಂದಿದ್ದರಿಂದ ಹೂವು ಕಡಿಮೆಯಾಗಿ ಕಾಯಿಗಳ ಗಾತ್ರ ಹೆಚ್ಚಾಯಿತು. ಮುಂಗಾರು ಪೂರ್ವ ಮಳೆ ಹೆಚ್ಚಾಗಿದ್ದರಿಂದ ಆಂತ್ರಾಕ್ನೋಸ್(ಸಿಬ್ಬುರೋಗ)ಬಂದಿದ್ದಲ್ಲದೆ, ನೀರಿನಾಂಶ ಹೆಚ್ಚಾಗಿ ರುಚಿ ಕಡಿಮೆಯಾಗಿತ್ತು. ಕೆಜಿಗೆ 35ರಿಂದ 45 ರೂ.ಗೆ ಮಾರಾಟವಾಗುತ್ತಿದ್ದ ಬೇನಿಷಾ 2ರಿಂದ 12 ರೂ.ಗೆ, 14ರಿಂದ 20ರೂ.ಗೆ ಮಾರಾಟವಾಗುತ್ತಿದ್ದ ತೋತಾಪುರಿ 6.ರೂ.ಗೆ ವಾರಿ ನಷ್ಟ ಹೊಂದಿದೆವು. ಚಂದ್ರಶೇಖರ್, ನೀಲಟೂರು, ಶ್ರೀನಿವಾಸಪುರ