ಸಂಸ್ಕೃತ ಶ್ರೀಮಂತ ಭಾಷೆ

teacher
ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಸಂಸ್ಕೃತೋತ್ಸವದಲ್ಲಿ ಸಂಸ್ಕೃತ ವಿದ್ವಾಂಸ ಮಹೇಶ್ ಕಾಕತ್ಕರ್ ಅವರನ್ನು ಶಿಕ್ಷಕ ಟಿ.ಆರ್.ಕೃಷ್ಣಮೂರ್ತಿ ಗೌರವಿಸಿದರು.ಸ್ನೇಹಾ, ಅಭಿಷೇಕ್, ಗಾಯತ್ರಿ ಇದ್ದರು.
Published on

ಶೃಂಗೇರಿ: ಶ್ರೀ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಶುಕ್ರವಾರ ಶಿಕ್ಷಕರ ದಿನಾಚರಣೆ ಹಾಗೂ ಸಂಸ್ಕೃತೋತ್ಸವ ನೆರವೇರಿತು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಮಹೇಶ್ ಕಾಕತ್ಕರ್ ಮಾತನಾಡಿ, ಸಂಸ್ಕೃತ ಎಂಬ ಪದದಲ್ಲಿ ಸಂಸ್ಕೃರಿಸಲ್ಪಟ್ಟ ಎಂಬ ಅರ್ಥವಿದೆ. ಹಲವು ಸಾಹಿತ್ಯ ಗ್ರಂಥಗಳನ್ನು ಹೊಂದಿರುವ ಶ್ರೀಮಂತ ಭಾಷೆ ಸಂಸ್ಕೃತವಾಗಿದೆ. ಪ್ರತಿಯೊಬ್ಬರು ವೇದ, ಗ್ರಂಥಗಳ ಅಧ್ಯಯನ ಮಾಡಬೇಕು. ಪ್ರತಿನಿತ್ಯ ಕೆಲವು ವಾಕ್ಯಗಳನ್ನು ಮಾತನಾಡಬೇಕು. ಆಗ ಮಾತ್ರ ಭಾಷೆಯಲ್ಲಿ ಹಿಡಿತ ಸಾಸಲು ಸಾಧ್ಯ ಎಂದರು.
ಶಾಲಾ ಸಂಸ್ಕೃತ ಶಿಕ್ಷಕ ಟಿ.ಆರ್.ಕೃಷ್ಣಮೂರ್ತಿ ಮಾತನಾಡಿ, ಸಂಸ್ಕೃತ ಸರಳ, ಸುಂದರ, ಮಧುರಭಾಷೆ. ಬೇರೆ ಭಾಷೆಗಳು ಕೆಲವೇ ಪ್ರದೇಶಗಳಿಗೆ ಸೀಮಿತವಾಗಿದೆ. ಆದರೆ ಸಂಸ್ಕೃತ ವಿಶ್ವಭಾಷೆಯಾಗಿದ್ದು ಭಾರತೀಯ ಸಂಸ್ಕೃತಿಯನ್ನು ಅರಿಯಲು ಈ ಭಾಷೆ ಪೂರಕವಾಗಿದೆ ಎಂದರು.
ಸಂಸ್ಕೃತೋತ್ಸವ ಅಂಗವಾಗಿ ಏರ್ಪಡಿಸಿದ್ದ ವಿವಿಧ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಮಹೇಶ್ ಕಾಕತ್ಕರ್,
ವಿದ್ಯಾ ಅವರನ್ನು ಗೌರವಿಸಲಾಯಿತು. ನಿವೃತ್ತ ಶಿಕ್ಷಕಿ ವಿದ್ಯಾ ಪಿ.ರಾವ್, ವಿಜಯಕುಮಾರ್, ಅನಮ್ಯ, ಅಭಿಷೇಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net