ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಧ್ಯೇಯದೊಂದಿಗೆ ಕೋಲಾರದಿಂದ ಮುಂಬೈ ಚೈತ್ಯ ಭೂಮಿಗೆ ಸೈಕಲ್ ಯಾತ್ರೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲೆಯ ಹಿರಿಯ ಕ್ರೀಡಾಪಟು ಬೀರಮಾನಹಳ್ಳಿ ಶ್ರೀನಿವಾಸ್ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಧ್ಯೇಯದೊಂದಿಗೆ ಸಂವಿಧಾನ ದಿನದಿಂದ ಆರಂಭಿಸಿರುವ ಸೈಕಲ್ ಜಾಥಾ ಡಿ.೬ಕ್ಕೆ ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ಸ್ಥಳವಾದ ಮುಂಬೈನ ಚೈತ್ಯ ಭೂಮಿಗೆ ಸೈಕಲ್ ಯಾತ್ರೆಯನ್ನು ಆರಂಭಿಸಿದರು.

ನಗರದ ಶ್ರೀ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮಂಗಳವಾರ ಬೆಳಿಗ್ಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಿಂದ ಸೈಕಲ್ ಯಾತ್ರೆಯನ್ನು ಆರಂಭಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕಿ ಗೀತಾ ಹಸಿರು ನಿಶಾನೆ ತೋರಿಸುವ ಮೂಲಕ ಸೈಕಲ್ ಯಾತ್ರೆಗೆ ಚಾಲನೆ ನೀಡಿ, ಸೈಕಲ್ ಯಾತ್ರೆಯು ಶುಭವಾಗಲಿ ಎಂದು ಶುಭ ಹಾರೈಸಿದರು.

ಸೈಕಲ್ ಯಾತ್ರೆ ಆರಂಭಿಸಿದ ಬೀರಮಾನಹಳ್ಳಿ ಶ್ರೀನಿವಾಸ್ ಮಾತನಾಡಿ, ಕೋಲಾರದಿಂದ ಆರಂಭಿಸಿ ಸುಮಾರು ೧೧೦೦ ಕಿ.ಮೀ ದೂರ ಇರುವ ಚೈತ್ಯ ಭೂಮಿಗೆ ಸಮತಾ ಸೈಕಲ್ ರ‍್ಯಾಲಿಯನ್ನು ಆರಂಭಿಸುತ್ತಿದ್ದುö, ಸಂವಿಧಾನದ ಮಹತ್ವವನ್ನು ಸಾರುವ ಸಲುವಾಗಿ ತಾವು ಈ ಸೈಕಲ್ ರ‍್ಯಾಲಿಯನ್ನು ನಡೆಸುತ್ತಿರುವುದಾಗಿ ವಿವರಿಸಿದರು.

ಈ ಹಿಂದೆಯೂ ತಾವು ೨೦೧೬ ರಲ್ಲಿ ಶಾಶ್ವತ ನೀರಾವರಿಗೆ ಆಗ್ರಹಿಸಿ ದೆಹಲಿಗೆ, ೨೦೨೨ ರಲ್ಲಿ ಪರಿಸರ ಉಳಿಸಿ ಸೈಕಲ್ ಬಳಸಿ, ಪಾಸ್ಟಿಕ್ ತ್ಯಜಿಸಿ ಧ್ಯೇಯದೊಂದಿಗೆ ಕೋಲಾರದಿಂದ ಬೀದರ್‌ವರೆವಿಗೂ, ೨೦೨೪ ರಲ್ಲಿ ಅಕ್ಟೋಬರ್‌ನಲ್ಲಿ ಸೌಹಾರ್ದ ಭಾರತಕ್ಕಾಗಿ ಕೋಲಾರದಿಂದ ದೀಕ್ಷಾ ಭೂಮಿ ನಾಗಪುರಕ್ಕೆ ಸೈಕಲ್ ರ‍್ಯಾಲಿಗಳನ್ನು ನಿರ್ವಹಿಸಿದ್ದಾಗಿ ತಿಳಿಸಿದರು.

ಈಗ ಬಾಬಾ ಸಾಹೇಬ್ ಅಂಬೇಡ್ಕರ್‌ರ ಸಂವಿಧಾನದ ಆಶಯಗಳ ಮಹತ್ವವನ್ನು ಜನತೆಗೆ ಸಾರುವ ಸಲುವಾಗಿ ಹತ್ತು ದಿನಗಳ ಚೈತ್ಯ ಭೂಮಿ ಯಾತ್ರೆ ಹಮ್ಮಿಕೊಳ್ಳಲಾಗಿದೆ, ಡಿ.೬ ಅಂಬೇಡ್ಕರ್ ಪರಿನಿಬ್ಬಾಣ ದಿನ ಚೈತ್ಯ ಭೂಮಿ ಸೇರಿಕೊಳ್ಳಲಾಗುವುದು, ಸಂವಿಧಾನದಿAದ ಮಾತ್ರವೇ ಅಖಂಡ ಭಾರತ ಸಾಧ್ಯö ಸಂವಿಧಾನದಿAದಲೇ ದೇಶದ ಉಳಿವು ಎಂಬ ಸಂದೇಶವನ್ನು ಹರಡಲಾಗುವುದು ಎಂದರು.

ಪಿಡಿಒಗಳಾದ ರಾಮಕೃಷ್ಣಪ್ಪö, ಸಂಪರಾಜ್, ಜಿಲ್ಲಾ ಬಾರ್ ಅಸೋಸಿಯೇಷನ್ ಅಧ್ಯಕ್ಷ ಚಲಪತಿ, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಕೆ.ಎಸ್.ಗಣೇಶ್, ದಲಿತ ಮುಖಂಡ ಚಂದ್ರಮೌಳಿ, ಆಂಜಪ್ಪö, ಮಂಜುನಾಥ್, ದಳಸನೂರು ಕೃಷ್ಣಪ್ಪö, ಹನುಮಂತಪ್ಪö, ಕೋಚ್‌ಗಳಾದ ವೆಂಕಟೇಶ್ ಮತ್ತಿತರರು ಹಾಜರಿದ್ದುö, ಸೈಕಲ್ ಯಾತ್ರೆಗೆ ಶುಭ ಕೋರಿದರು.

ಚಿತ್ರ ೨೬ ಕೆ.ಎಲ್.ಆರ್. ೦೬ ಕೋಲಾರ ಜಿಲ್ಲೆಯ ಹಿರಿಯ ಕ್ರೀಡಾಪಟು ಬೀರಮಾನಹಳ್ಳಿ ಶ್ರೀನಿವಾಸ್ ಸಂವಿಧಾನ ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ ಧ್ಯೇಯದೊಂದಿಗೆ ಸಂವಿಧಾನ ದಿನದಿಂದ ಆರಂಭಿಸಿ ಅಂಬೇಡ್ಕರ್ ಪರಿನಿಬ್ಬಾಣ ಹೊಂದಿದ ಡಿ.೬ ರವರೆಗೂ ಮುಂಬೈನ ಚೈತ್ಯ ಭೂಮಿಗೆ ಸೈಕಲ್ ಯಾತ್ರೆಯನ್ನು ಆರಂಭಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net