ಶ್ರೀರಾಮನ ಬದುಕು ಆದರ್ಶವಾಗಲಿ

6 nrp 1 swamiji
ಎನ್.ಆರ್.ಪುರ ತಾಲೂಕಿನ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ತತ್ವಜ್ಞಾನ ಮಹೋತ್ಸವ ಮತ್ತು ಶ್ರೀರಾಮ ಮಹೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಆಶೀರ್ವಚನ ನೀಡಿದರು.
Published on

ಎನ್.ಆರ್.ಪುರ: ಪ್ರತಿಯೊಬ್ಬರಿಗೂ ಶ್ರೀರಾಮನ ಬದುಕು ಆದರ್ಶವಾಗಬೇಕು ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರು ಹೇಳಿದರು.

ಭಾನುವಾರ ಸೀತೂರು ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ತತ್ವಜ್ಞಾನ ಮಹೋತ್ಸವ ಮತ್ತು ಶ್ರೀರಾಮ ಮಹೋತ್ಸವದಲ್ಲಿ ಆಶೀರ್ವಚನ ನೀಡಿ, ರಾಮನ ಬದುಕಿನ ಹೆಜ್ಜೆ ಗುರುತನ್ನು ಗಮನಿಸಿದರೆ ನಾವು ಹೇಗೆ ಬದುಕಬೇಕು ಎಂಬುದು ತಿಳಿಯುತ್ತದೆ. ಹೇಗೆ ಬದುಕಬಾರದು ಎಂದು ರಾವಣ ತೋರಿಸಿಕೊಟ್ಟಿದ್ದಾನೆ. ನ್ಯಾಯವಾಗಿ ಬದುಕಿದರೆ ಕಷ್ಟಗಳು ಬಂದಾಗ ಎಲ್ಲರೂ ಸಹಾಯ ಮಾಡುತ್ತಾರೆ. ರಾವಣನು ಸೀತೆಯನ್ನು ಅಪಹರಣ ಮಾಡಿದಾಗ ಜಿಂಕೆಗಳು ನೆರವಿಗೆ ಬಂದಿದ್ದವು. ಜಟಾಯು ಎಂಬ ಪಕ್ಷಿ ರಾವಣನ ವಿಮಾನವನ್ನು ಅಡ್ಡಗಟ್ಟಿತ್ತು. ಕಪಿಗಳು ಸಮುದ್ರಕ್ಕೆ ಸೇತುವೆ ನಿರ್ಮಿಸಲು ನೆರವು ನೀಡಿದವು. ಕಡೆಗೆ ರಾವಣನ ಸಹೋದರ ವಿಭೀಷಣನು ಸಹ ರಾಮನ ಪರವಾಗಿ ನಿಂತಿದ್ದನು ಎಂದರು.

ವಾಲ್ಮೀಕಿ ರಾಮಾಯಣದಲ್ಲಿ ರಾಮ ಹಾಗೂ ರಾವಣನ ಪಾತ್ರವನ್ನು ವಿಭಿನ್ನವಾಗಿ ಚಿತ್ರಿಸಲಾಗಿದೆ. ರಾಮನಂತೆ ಏಕೆ ಬದುಕಬೇಕು ಎಂಬುದನ್ನು ಸಮಗ್ರವಾಗಿ ಬರೆಯಲಾಗಿದೆ. ರಾವಣನಂತೆ ಯಾಕೆ ಬದುಕಬಾರದು ಎಂಬುದನ್ನು ಸಹ ಅದ್ಭುತವಾಗಿ ಚಿತ್ರಿಸಲಾಗಿದೆ. ಪ್ರತಿಯೊಬ್ಬರ ಹೃದಯದಲ್ಲೂ ರಾಮ, ಕೃಷ್ಣ ನೆಲೆಸಿರಬೇಕು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net