ಶ್ರೀನಿವಾಸಪುರ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಆ.೨೩ ರಂದು ಚುನಾವಣೆ / ಜೆಡಿಎಸ್ ಕಾಂಗ್ರೇಸ್‌ನಿoದ ಅಧ್ಯಕ್ಷ ಸ್ಥಾನಕ್ಕೆ ಫೈಟ್ / ಜೆಡಿಎಸ್‌ನ ೬ ಜನ ಸದಸ್ಯರನ್ನು ಹೈಜಾಕ್ ಮಾಡಿದ ಕಾಂಗ್ರೇಸ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಎನ್. ಮುನಿವೆಂಕಟೇಗೌಡ
ಜಿಲ್ಲೆಯ ಶ್ರೀನಿವಾಸಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯ ಕಾವು ರಂಗೇರಿದ್ದು. ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಬಹುಮತವಿರುವ ೬ ಜನ ಜೆಡಿಎಸ್ ಸದಸ್ಯರನ್ನು ಹೈಜಾಕ್ ಮಾಡಿ ಅಧಿಕಾರ ಚುಕ್ಕಾಣಿ ಹಿಡಿಯಲು ಹೊರಟಿದೆ.

ಶ್ರೀನಿವಾಸಪುರ ಪುರಸಭೆಯಲ್ಲಿ ಒಟ್ಟು ೨೩ ಸದಸ್ಯರಿದ್ದು, ಜೆಡಿಎಸ್ ೧೨ ಮತ್ತು ಕಾಂಗ್ರೆಸ್ ೧೧ ಜನ ಸದಸ್ಯರಿದ್ದಾರೆ. ಜೆಡಿಎಸ್ ಪಕ್ಷಕ್ಕೆ ೧೨ ಜನ ಸದಸ್ಯರು ಸೇರಿದಂತೆ ಎಂ ಎಲ್ ಎ ಮತ್ತು ಲೋಕಸಭಾ ಸದಸ್ಯರು ಸೇರಿ ಒಟ್ಟು ೧೪ ಮತಗಳ ಬಲವಿರುತ್ತದೆ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿ ಬಹುಮತದ ಕೊರತೆಯಿಲ್ಲ, ಮೀಸಲಾತಿಗೆ ಅನುಗುಣವಾಗಿ ಆಕಾಂಕ್ಷಿಗಳು ಪಕ್ಷದಲ್ಲಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಬಹುಮತದ ಕೊರತೆ ಇದೆ, ಜೆಡಿಎಸ್ ಪಕ್ಷದ ಸದಸ್ಯರನ್ನು ಹೈಜಾಕ್ ಮಾಡಿ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳನ್ನು ತನ್ನದಾಗಿಸಿಕೊಳ್ಳಲು ಮುಂದಾಗಿದ್ದು, ಈಗಾಗಲೇ ಜೆಡಿಎಸ್ ನ ೬ ಜನ ಅಲ್ಪ ಸಂಖ್ಯಾತ ಸದಸ್ಯರನ್ನು ಹೈಜಾಕ್ ಮಾಡಿ, ಕಾಂಗ್ರೆಸ್ ಸದಸ್ಯರ ಜೊತೆಗೂಡಿ ಪ್ರವಾಸ ಕೈಗೊಂಡಿದ್ದಾರೆ. ಜೆಡಿಎಸ್ ನ ೬ ಜನರಲ್ಲಿ ಪರಿಶಿಷ್ಠ ಜಾತಿ ಮಹಿಳೆಯು ಸೇರಿದ್ದು, ಜೆಡಿಎಸ್ ಪಕ್ಷದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಫರ್ಧೆಮಾಡುವ ಅಭ್ಯರ್ಥಿಯೇ ಇಲ್ಲದಂತಾಗಿದೆ.

ಕಾAಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಗಾದಿಗಾಗಿ ಬಿ.ಎಲ್ ನಾರಾಯಣಸ್ವಾಮಿ ಕುಟುಂಬದ ಬಿ.ವಿ ಬಾಸ್ಕರ್ ಪ್ರಬಲ ಆಕಾಂಕ್ಷಿಯಾಗಿದ್ದು ೬ ಜನ ಜೆಡಿಎಸ್ ಸದಸ್ಯರನ್ನು ಹೈಜಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಧ್ಯಕ್ಷ ಆಕಾಂಕ್ಷಿಗಳಾಗಿ ಹನೀಸ್ ಅಹಮದ್ ಮತ್ತು ಮುನಿರಾಜು ಸಹ ಇದ್ದಾರೆ.

ಜೆಡಿಎಸ್ ಪಕ್ಷದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಹಾಗು ಸದಸ್ಯ ಬಿ.ವೆಂಕಟರೆಡ್ಡಿ ಆಕಾಂಕ್ಷಿಯಾಗಿದ್ದು ಜೆಡಿಎಸ್ ಪಕ್ಷದಲ್ಲಿ ಒಮ್ಮತದ ಅಭ್ಯರ್ಥಿಯೂ ಆಗಿದ್ದಾರೆ. ಅವರ ಹಿರಿತನವನ್ನು ನೋಡಿ ಒಂದು ಬಾರಿ ಅಧ್ಯಕ್ಷರನ್ನಾಗಿ ಮಾಡಬೇಕೆಂದು ಜೆಡಿಎಸ್ ಪಕ್ಷ ಕಾರ್ಯಕರ್ತರ ಒತ್ತಾಯವೂ ಆಗಿದೆ.

ಅಧ್ಯಕ್ಷ ಸ್ಥಾನ ಸಾಮಾನ್ಯ ಹಾಗು ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ ೨೩ ರಂದು ಚುನಾವಣಾ ದಿನಾಂಕ ನಿಗದಿಯಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಎರಡೂ ಪಕ್ಷಗಳಿಂದ ಪೈಪೋಟಿ ಇಲ್ಲ. ಅಧ್ಯಕ್ಷ ಸ್ಥಾನಕ್ಕೆ ಮಾತ್ರ ಪೈಪೋಟಿ ನಡೆಯುತ್ತಿದ್ದು, ಜೆಡಿಎಸ್ ಪಕ್ಷದಲ್ಲಿ ಬಹುಮತವಿದ್ದರೂ ೬ ಜನ ಸದಸ್ಯರನ್ನು ಕಾಂಗ್ರೆಸ್ ನವರು ಹೈಜಾಕ್ ಮಾಡಿರುವುದರಿಂದ ಕಾದು ನೋಡುವ ತಂತ್ರ ಜೆಡಿಎಸ್ ನವರ ಪರಿಸ್ಥಿತಿಯಾಗಿದೆ.

ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸದಸ್ಯರಿಗೆ ವಿಪ್ ಜಾರಿ ಮಾಡಲು ಮುಂದಾಗಿದ್ದಾರೆ. ವಿಪ್ ಜಾರಿಯಿಂದ ಎಷ್ಟರ ಮಟ್ಟಿಗೆ ಯಶಸ್ವಿಯಾಗಿತ್ತದೆ ಅನ್ನೋದನ್ನು ಕಾದು ನೋಡಬೇಕಾಗುತ್ತದೆ, ವಿಫ್ ಉಲ್ಲಂಘನೆ ಮಾಡದೆ ಸದಸ್ಯರು ಆಯಾ ಪಕ್ಷದ ಪರವಾಗಿ ಮತ ಚಲಾವಣೆ ಮಾಡಿದರೆ ಜೆಡಿಎಸ್ ಪಕ್ಷಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಉಳಿಯುತ್ತದೆ.

ಜೆಡಿಎಸ್ ಪಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಲ್ಪ ಸಂಖ್ಯಾತರಿಗೆ ಅಧ್ಯಕ್ಷ ಸ್ಥಾನ ನೀಡುವುದಾಗಿ ಭರವಸೆ ನೀಡಲಾಗಿದ್ದು, ಪ್ರವಾಸ ಕೈಗೊಂಡಿರುವ ಸದಸ್ಯರು ವಾಪಸ್ ಬರಲು ಮನವಿ ಮಾಡಿದ್ದಾರೆ ಎನ್ನಲಾಗಿದೆ. ವಿಪ್ ಜಾರಿಯಾದರೆ ಚುನಾವಣೆ ಪ್ರಕ್ರಿಯೆಯಿಂದ ಜೆಡಿಎಸ್ ಸದಸ್ಯರು ದೂರ ಸರಿದರೆ ಜೆಡಿಎಸ್ ನ ಸಂಖ್ಯಾಬಲ ಕಡಿಮೆಯಾಗಿ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬರು ಅಧ್ಯಕ್ಷರಾಗಲಿದ್ದಾರೆ.

ಬಾಕ್ಸ್.
ಬಿಜೆಪಿ. ಜೆಡಿಎಸ್ ಮೈತ್ರಿಯಿಂದ ಬೇಸತ್ತ ಅಲ್ಪಸಂಖ್ಯಾತ ಸದಸ್ಯರು ಕಾಂಗ್ರೆಸ್ ಪಕ್ಷದೂಂದಿಗೆ ಗುರ್ತಿಸಿಕೂಳ್ಳಲು ಹೋರಟಿದ್ದಾರೆ. ಆಸೆ ಆಮಿಷಗಳಿಗೆ ಒಳಗಾಗಿ ಕಾಂಗ್ರೆಸ್‌ನವರ ಜೋತೆ ಪ್ರವಾಸ ಹೋರಟಿದ್ದಾರೆ. ವಿಪ್ ಜಾರಿಮಾಡುವುದರಿಂದ ವಾಪಸ್ ಬರಲಿದ್ದಾರೆ. ಅವರ ಸಂಪರ್ಕದಲ್ಲಿದ್ದೇವೆ. ಬಹುಮತ ಜೆಡಿಎಸ್‌ಗೆ ಇರುವುದರಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳೆರಡು ಜೆಡಿಎಸ್. ವಶವಾಗಲಿದೆ ಎಂಬುವುದು ಆ ಪಕ್ಷದವರ ಆಶಯವಾಗಲಿದೆ.

ಚಿತ್ರ ೨೦ ಕೆ.ಎಲ್.ಆರ್. ೦೧ : ಶ್ರೀನಿವಾಸಪುರ ಪುರಸಭೆಯ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net