

ಲಿಂಗದಹಳ್ಳಿ: ಉಡೇವಾ ಗ್ರಾಮದ ಮರೆಕಲ್ಲಳ್ಳಿ ಶ್ರೀ ರಂಗನಾಥ ಸ್ವಾಮಿಯ ಜಾತ್ರಾ ಮಹೋತ್ಸವ ಮೇ 3ರಿಂದ ಪ್ರಾರಂಭವಾಗಿ ಮೇ 7ರಂದು ನಡೆಯಲಿರುವ ಬ್ರಹ್ಮ ರಥೋತ್ಸವದೊಂದಿಗೆ ಸಂಪನ್ನಗೊಳ್ಳಲಿದೆ. ಮೇ 3ರ ಮಧ್ಯಾಹ್ನ 3ಕ್ಕೆ ಧ್ವಜಾರೋಹಣ ನಡೆಯಲಿದ್ದು 4 ರಂದು ಮರೆಕಲ್ಲಳ್ಳಿ ದೇವರನ್ನು ಶ್ರೀಕ್ಷೇತ್ರ ಕಲ್ಲತ್ತಗಿರಿಗೆ ಕರೆದೊಯ್ಯಲಾಗುವುದು. 5ರಂದು ಉಡೇವಾ ಗ್ರಾಮದಲ್ಲಿ 101 ಎಡೆಸೇವೆ ಮತ್ತು ಗಂಗಾಪೂಜೆ ನಡೆಯಲಿದೆ. 6ರಂದು ರಾತ್ರಿ 10 ಗಂಟೆಯಿಂದ ಶ್ರೀ ದೇವರ ಭಕ್ತ ಮಂಡಳಿಯಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ರಾತ್ರಿ 3 ರಿಂದ 5 ರವರೆಗೆ ಕಳಸಾರೋಹಣ ಕಾರ್ಯಕ್ರಮ ನಡೆಯಲಿವೆ.
7 ರಂದು ಬೆಳಗ್ಗೆ 6 ಗಂಟೆಯಿಂದ 7.30ರವರೆಗೆ ಮರೆಕಲ್ಲಳ್ಳಿ ಶ್ರೀ ರಂಗನಾಥ ಸ್ವಾಮಿಯ ಬ್ರಹ್ಮ ರಥೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಉಡೇವಾ, ಲಿಂಗದಹಳ್ಳಿ, ಯರದಂಕಲು, ಗಂಗೂರು, ಕೃಷ್ಣಾಪುರ, ಕಾಮನದುರ್ಗ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಲಿದ್ದಾರೆ.