ಶೋಷಣೆ, ದಬ್ಬಾಳಿಕೆಯ ಪಿಡುಗು ಹೋಗಲಾಡಿಸಲು ಚಿಂತನೆಗಳು ಚಿಂತನೆಗಳು ಅವಶ್ಯಕತೆ ಇದೆ /ಎಂಎಲ್ಸಿ ನಾಗರಾಜ್ ಯಾದವ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ
ಸಮಾಜದಲ್ಲಿನ ಶೋಷಣೆ, ದಬ್ಬಾಳಿಕೆಯ ಪಿಡುಗುಗಳನ್ನು ಹೋಗಲಾಡಿಸಲು ಚಿಂತನೆಗಳು ಅವಶ್ಯಕತೆ ಇದ್ದು ಪ್ರತಿಯೊಬ್ಬರೂ ಇದರ ಬಗ್ಗೆ ಯೋಚಿಸಿ ಸಮಾಜವನ್ನು ಸರಿದಾರಿಗೆ ತರಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್ ತಿಳಿಸಿದರು,

ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಆರ್ ಶಂಕರಪ್ಪ ಅವರಿಗೆ ಅಭಿನಂದನೆ, ಬೀಳ್ಕೊಡುಗೆ ಹಾಗೂ "ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಆಡಳಿತ, ಸ್ಪರ್ಧಾ ದಾರಿದೀಪ " ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿ ಇವತ್ತು ಒಂದು ಕಡೆ ಶೋಷಣೆ ಮತ್ತೊಂದು ಕಡೆ ಭ್ರಷ್ಟಾಚಾರ, ಕೋಮುವಾದವು ಸಮಾಜಕ್ಕೆ ಕಳಂಕ ತಂದಿದೆ. ಇದನ್ನು ಹೋಗಲಾಡಿಸಲು ಯುವಜನರಲ್ಲಿ ಅರಿವು ಮುಖ್ಯವಾಗಿದೆ. ಇದಕ್ಕೆ ಬರವಣಿಗೆ ಮತ್ತು ಶಿಕ್ಷಣದಿಂದ ಮಾತ್ರ ಸಾಧ್ಯವಾಗುತ್ತದೆ ಎಂದರು.

ಶಿಕ್ಷಕ ವೃತ್ತಿಯಿಂದ ಸಮಾಜದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗಿದೆ. ವಿಧ್ಯಾರ್ಥಿಗಳಿಗೆ ಕೇವಲ ಪಠ್ಯಪುಸ್ತಕಗಳು ಅಷ್ಟೇ ಭವಿಷ್ಯವನ್ನು ರೂಪಿಸುವುದಿಲ್ಲ. ಪ್ರೀತಿ ವಿಶ್ವಾಸದಿಂದ ಅವರಿಗೆ ಹೊಣೆಗಾರಿಯ ಜವಾಬ್ದಾರಿಯನ್ನು ವಹಿಸಬೇಕಾಗಿದೆ. ಯುವ ಪೀಳಿಗೆ ಇತಿಹಾಸವನ್ನು ತಿಳಿದುಕೊಳ್ಳುವ ಜೊತೆಗೆ ವಿವಿಧ ವಿಚಾರಗಳ ಸಂಶೋಧನೆಗಳ ಕಡೆಗೆ ಗಮನ ಹರಿಸಿ ಸಮಸ್ಯೆಗಳನ್ನು ಪರಿಹಾರ ಮಾಡಬೇಕಾಗಿದೆ. ಕೋಲಾರದಲ್ಲಿ ಸರಿ ಸುಮಾರು ೭೫ ವರ್ಷಗಳ ಇತಿಹಾಸವಿರುವ ಬಾಲಕರ ಕಾಲೇಜಿಗೆ ವಿಶೇಷವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರಕಾರದ ಸಿಎಂ. ಡಿಸಿಎಂ ಜೊತೆಗೆ ಚರ್ಚಿಸಿ ಅನುದಾನ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡತ್ತೇನೆ ಎಂದರು.

ಬೆAಗಳೂರು ಉತ್ತರ ವಿವಿ ಕುಲಪತಿ ನಿರಂಜನ್ ವಾನಳ್ಳಿ ಮಾತನಾಡಿ ಸಮಾಜದಲ್ಲಿ ಪುಸ್ತಕಗಳನ್ನು ಓದುವ ಪ್ರವೃತ್ತಿ ಕಡಿಮೆಯಾಗಿದೆ ಹೊಸ ತಲೆಮಾರಿನ ಜನರು ಜ್ಞಾನದ ಕಡೆಗೆ ಹೆಚ್ಚಿನ ಜವಾಬ್ದಾರಿ ವಹಿಸಬೇಕಾಗಿದೆ. ಡಾ.ಶಂಕರಪ್ಪ ನವರು ಸರಕಾರಿ ಸೇವೆಯಿಂದ ಅಷ್ಟೇ ನಿವೃತ್ತಿಯಾಗಿದ್ದಾರೆ ಮುಂದೆ ಅವರು ಬರವಣಿಗೆ ಹೆಚ್ಚಿನ ಸಮಯ ವಹಿಸಲಿದ್ದಾರೆ. ಯಾರೇ ಸರಕಾರಿ ನೌಕರರಾಗಿ ನಿವೃತ್ತಿ ಹೊಂದಿದ ದಿನವೇ ಕನಿಷ್ಠ ಅವರಿಗೆ ಸರಕಾರದಿಂದ ಸಿಗುವ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯಗಳನ್ನು ಕೊಡುವ ಕೆಲಸವನ್ನು ಸಂಬAಧಿಸಿದ ಇಲಾಖೆ ಮತ್ತು ಸರಕಾರ ಮಾಡಬೇಕಾಗಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಶಂಕರಪ್ಪ ನನ್ನ ಬರವಣಿಗೆ ಮತ್ತು ಪ್ರಾಧ್ಯಾಪಕ ವೃತ್ತಿಯಲ್ಲಿ ಬೆಂಬಲವಾಗಿ ನಿಂತ ಪ್ರತಿಯೊಬ್ಬರಿಗೂ ಧನ್ಯವಾದಗಳು. ಸಮಾಜಕ್ಕೆ ಏನಾದರೂ ಕೊಡುಗೆಯಾಗಿ ನೀಡಬೇಕು ಎಂದು ಬೋಧನೆಯ ಜೊತೆಗೆ ಬರವಣಿಗೆ ಆಯ್ಕೆ ಮಾಡಿಕೊಂಡಿದ್ದೇನೆ. ಸಮಾಜದಲ್ಲಿ ವಿಧ್ಯಾರ್ಥಿಗಳಿಗೆ ಮೌಲ್ಯಾಧಾರಿತ, ನೈತಿಕ, ಜ್ಞಾನ, ಹಾಗೂ ಕಲಿಕೆ ಆಧಾರಿತ ಶಿಕ್ಷಣವನ್ನು ಕಲಿಸಬೇಕು ಮನುಷ್ಯನ ವಿಕಸನಕ್ಕೆ ನಾಲ್ಕು ಮುಖ್ಯ ಅಂಶಗಳಾಗಿವೆ ಎಂದರು,

ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ತ್ಯಾಗರಾಜ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಉತ್ತರ ವಿವಿಯ ಮೌಲ್ಯಮಾಪನ ಕುಲಸಚಿವ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ ಗೋಪಾಲಗೌಡ, ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನಿವೃತ್ತ ಉಪ ನಿರ್ದೇಶಕ ವೆಂಕಟಾಚಲಪತಿ, ಸಮಾಜಸೇವಕ ಶಬರೀಷ್ ಯಾದವ್, ನಿವೃತ್ತ ಪ್ರಾಂಶುಪಾಲ ಎ.ವಿ ರೆಡ್ಡಿ, ಪ್ರಾಧ್ಯಾಪಕರಾದ ಶ್ರೀನಿವಾಸಗೌಡ, ಶಂಕರಪ್ಪ ನವರ ಧರ್ಮಪತ್ನಿ ಉಷಾರಾಣಿ ಮುಂತಾದವರು ಇದ್ದರು.

ಚಿತ್ರ ೧೪ ಕೆ.ಎಲ್.ಆರ್. ೦೧ ನಗರದ ಸರ್ಕಾರಿ ಬಾಲಕರ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಿವೃತ್ತ ಪ್ರಾಧ್ಯಾಪಕ ಹಾಗೂ ಸಾಹಿತಿ ಆರ್ ಶಂಕರಪ್ಪ ಅವರಿಗೆ ಅಭಿನಂದನೆ, ಬೀಳ್ಕೊಡುಗೆ ಹಾಗೂ "ಕರ್ನಾಟಕ ರಾಜಕೀಯ ಇತಿಹಾಸ ಮತ್ತು ಆಡಳಿತ, ಸ್ಪರ್ಧಾ ದಾರಿದೀಪ " ಎಂಬ ಎರಡು ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಎಂ.ಎಲ್.ಸಿ. ನಾಗರಾಜ್ ಯಾದವ್, ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ್ ವಾನಳ್ಳಿ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net