ಶುಕ್ರವಾರ ಶಾಲೆ ಶುಭಾರಂಭ

Published on


-ಶಾಲೆಗಳಲ್ಲಿ ಮಕ್ಕಳ ಕಲರವ
-10-12ನೇ ತರಗತಿ ಆರಂಭ
-ಪರಿಷ್ಕೃತ ವಿದ್ಯಾಗಮಕ್ಕೂ ಚಾಲನೆ

ಆದಾಗ್ಯೂ ನಾವು ಶಾಲೆ ಆವರಣದಲ್ಲಿ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ನಿಮ್ಮಂತೆಯೇ ನಾವು ಮಕ್ಕಳನ್ನು ಜೋಪಾನ, ಜತನದಿಂದ ನೋಡಿಕೊಳ್ಳುತ್ತೇವೆ. ಅದಕ್ಕೆ ಪೂರಕ ವಾತಾವರಣ ಸೃಷ್ಟಿ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಕರೊನಾ ಸೋಂಕಿನ ಸಂಖ್ಯೆ ಕಡಿಮೆ ಆಗುತ್ತಿದೆ. ಅನೇಕ ಕಡೆ ಇಲ್ಲವೇನೋ ಎಂಬ ಪರಿಸ್ಥಿತಿ ಇದೆ.

ಮಕ್ಕಳನ್ನು ಶಾಲೆಗೆ ಕಳುಹಿಸುವ ವಿಚಾರದಲ್ಲಿ ಪೋಷಕರು ಆತಂಕ ಇಟ್ಟುಕೊಳ್ಳಬೇಡಿ ಎಂದು ಹೇಳಿದರು.

ಶಾಲೆ ಆರಂಭಿಸುವ ಹಿನ್ನೆಲೆಯಲ್ಲಿ ಬೆಂಗಳೂರಿನ ಅನೇಕ ಶಾಲೆಗಳಿಗೆ ಭೇಟಿ ಕೊಟ್ಟು ಪರಿಶೀಲನೆ ಮಾಡಿದ್ದೇನೆ. ಇಲಾಖೆ ಉನ್ನತ ಅಧಿಕಾರಿಗಳು ಭೇಟಿ ಮಾಡಿದ್ದಾರೆ. ಮಾರ್ಗಸೂಚಿ ಪಾಲನೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ಪೋಷಕರು, ಶಿಕ್ಷಕರಿಂದ ಫೀಡ್ ಬ್ಯಾಕ್ ಪಡೆದಿದ್ದೇವೆ.

ಶಾಲಾ ತರಗತಿ ಪ್ರಾರಂಭಿಸುವುದು ಶಿಕ್ಷಣ ಇಲಾಖೆಗೆ ಪ್ರತಿಷ್ಠೆಯ ವಿಷಯವಲ್ಲ. ಬದಲಾಗಿ ಅದು ನಮ್ಮ ಬದ್ಧತೆ ಎಂದು ಸುದ್ದಿಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಸ್ಪಷ್ಟಪಡಿಸಿದರು.

ಪ್ರತಿಷ್ಠೆ ಅಲ್ಲ, ನಮ್ಮಬದ್ಧತೆ:

ಎಸ್ಸೆಸ್ಸೆಲ್ಸಿ ಮತ್ತು ಪಿಯು ತರಗತಿಗಳು ಶುಕ್ರವಾರದಿಂದ ನಡೆಯಲಿವೆ. ಅಲ್ಲದೆ 6 ರಿಂದ 9ನೇ ತರಗತಿವರೆಗೆ ಶಾಲಾ ಆವರಣದಲ್ಲೇ ಪರಿಷ್ಕೃತ ರೂಪದಲ್ಲಿ ವಿದ್ಯಾಗಮ ಕೂಡ ಆರಂಭವಾಗಲಿದೆ. ವಿದ್ಯಾಗಮದಲ್ಲಿ ಸಾಂಪ್ರದಾಯಿಕ ಶಿಕ್ಷಣದ ಬದಲು ಅ್ಯಕ್ಟ್ಟಿವಿಟಿ ಮೂಲಕ ನಡೆಸಲಾಗುತ್ತದೆ. ಇಲ್ಲಿ ದೈನಂದಿನ ಶಾಲಾ ಚಟುವಟಿಕೆ ಇರುವುದಿಲ್ಲ. ಆದರೆ, ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವುದು ಮ್ಯಾಂಡೇಟರಿ ಅಲ್ಲ. ಸ್ವಯಂ ಪ್ರೇರಿತರಾಗಿ ಕಳುಹಿಸಬೇಕು ಹಾಗೂ ತರಗತಿಗೆ ಹಾಜರಾಗುವ ಮಕ್ಕಳು ಪೋಷಕರ ಒಪ್ಪಿಗೆ ಪತ್ರ ತರುವುದು ಕಡ್ಡಾಯ.

ಕರೊನಾ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆಯೊಂದಿಗೆ ಶಾಲೆ ತೆರೆಯಲು ಸರ್ಕಾರ ಹಸಿರು ನಿಶಾನೆ ತೋರಿದೆ.

ಹೊಸ ವರ್ಷದಿಂದ ಶಾಲೆಗಳಲ್ಲಿ ಮಕ್ಕಳ ಕಲರವ ಕಾಣಲಿದೆ. ಕರೊನಾ ಕರಿನೆರಳಿಂದ ಬರೋಬ್ಬರಿ ಒಂಭತ್ತು ತಿಂಗಳು ಬಾಗಿಲು ತೆರೆಯದೇ ಇದ್ದ ಶಾಲೆಗಳು ಶುಕ್ರವಾರದಿಂದ ಶುಭಾರಂಭ ಮಾಡಲಿವೆ.

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ವಿಧಾನ ಪರಿಷತ್‌ಸದಸ್ಯ ಶಶೀಲ್ ನಮೋಶಿ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಪ್ರಧಾನ ಕಾರ್ಯದರ್ಶಿ ಎಸ್. ಆರ್. ಉಮಾಶಂಕರ್, ಮುದ್ರಣ ಇಲಾಖೆ ನಿರ್ದೇಶಕ ಲಕ್ಷ್ಮೀನಾರಾಯಣ, ಜಂಟಿ ನಿರ್ದೇಶಕ ಬೋರಯ್ಯ ಮತ್ತಿತರರು ಭಾಗವಹಿಸಿದ್ದರು.

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸೇರಿ ಅನೇಕರು ಶಾಲೆ ಆರಂಭಿಸಲು ಬೆಂಬಲ ನೀಡಿದ್ದಾರೆ. ‘ಬನ್ನಿ ಕರೊನಾ ಓಡಿಸೋಣ, ವಿದ್ಯಾರ್ಥಿಗಳನ್ನು ಓದಿಸೋಣ’ ಎಂಬುದು ನಮ್ಮ ಟ್ಯಾಗ್ ಲೈನ್ ಆಗಿದೆ ಎಂದು ತಿಳಿಸಿದರು.

ಶಾಲೆ ಆರಂಭದ ದಿನವಾದ ಶುಕ್ರವಾರ ದೊಡ್ಡ ಸಂಖ್ಯೆ ಮಕ್ಕಳ ನಿರೀಕ್ಷೆ ಇಲ್ಲ. ಶೇ.50 ರಷ್ಟು ಮಕ್ಕಳು ಬರುವ ನಿರೀಕ್ಷೆ ಇದೆ. ಎಲ್ಲ ಶಿಕ್ಷಕರು, ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಸಂಘಟನೆಗಳು ಶಾಲಾ ಆರಂಭಕ್ಕೆ ಕೈಜೋಡಿಸಿವೆ ಎಂದು ಹೇಳಿದರು.

ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ಮಕ್ಕಳ ವಿದ್ಯಾಭ್ಯಾಸದ ಮಹತ್ವದ ಘಟ್ಟಗಳು. ಇದನ್ನು ತಿಳಿಹೇಳುವ ಮೂಲಕ ಮಕ್ಕಳ ಆತ್ಮವಿಶ್ವಾಸ ಹೆಚ್ಚಿಸುವಂತೆ ತಿಳಿಸಿದರು.

ಶಿಕ್ಷಕರು ಶುಕ್ರವಾರ ಮೊದಲ ಅವಧಿ ಮಕ್ಕಳ ಜತೆ ಮಾತನಾಡಬೇಕು. ಅವರ ಭಾವನೆ ಅರಿತುಕೊಳ್ಳಬೇಕು. ಕರೊನಾ ಬಗ್ಗೆ ಮಾರ್ಗದರ್ಶನ ಮಾಡಬೇಕು. ಕರೊನಾ 2ನೇ ಅಲೆ, ಬ್ರಿಟನ್ ವೈರಾಣು ಕರೊನಾಕ್ಕಿಂತ ಅಪಾಯಕಾರಿ ಅಲ್ಲ. ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳು ಇದಕ್ಕೆ ಸಾಕು ಎಂಬುದನ್ನು ಮಕ್ಕಳಿಗೆ ಮತ್ತು ಪೋಷಕರಿಗೆ ಮನವರಿಕೆ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರಿಗೆ ಸಚಿವರ ಕಿವಿ ಮಾತು:

ಮುಂದಿನ ದಿನಗಳಲ್ಲಿ 1 ರಿಂದ 5 ರವರೆಗೆ ಹೇಗೆ ಎಂದು ಯೋಚಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಹು ದಿನಗಳ ಬಳಿಕ ಶಾಲೆ ಆರಂಭಿಸುವ ವಿಚಾರದಲ್ಲಿ ಶಿಕ್ಷಕರಲ್ಲಿ ಸಂತೋಷವಿದೆ. ನಾಳೆ ವಿವಿಧ ಶಾಲೆಗಳಲ್ಲಿ ವಿವಿಧ ರೀತಿ ಮಕ್ಕಳನ್ನು ಸ್ವಾಗತಿಸಲಾಗುತ್ತಿದೆ. ತಳಿರು ತೋರಣ, ಹೂ ಕೊಟ್ಟು ಸ್ವಾಗತಿಸಲಿದ್ದಾರೆ. ಇನ್ನು ಕೆಲವು ಕಡೆ ಬ್ಯಾಂಡ್ ಸೆಟ್ ಮೂಲಕ ಸ್ವಾಗತಿಸಲಾಗುತ್ತಿದೆ ಎಂದರು.

ಮಕ್ಕಳನ್ನು ನೀವು ಮನೆಯಿಂದ ಜೋಪಾನವಾಗಿ ಕಳಿಸಿ, ನಾವೂ ಜೋಪಾನದಿಂದ ಕಳುಹಿಸುತ್ತೇವೆ ಎಂದರು.

ಜೋಪಾನ, ಜತನ ನಮ್ಮ ಕರ್ತವ್ಯ:

ಶಾಲೆ ಆರಂಭಿಸುವುದು ನನಗೆ ಅಗ್ನಿ ಪರೀಕ್ಷೆ ಅಲ್ಲ, ಸಹಜ ಪ್ರಕ್ರಿಯೆ. ಇದು ನಮ್ಮ ಕರ್ತವ್ಯ, ಪ್ರತಿಷ್ಠೆ ಪ್ರಶ್ನೆ ಅಲ್ಲ, ಬದ್ಧತೆ ಪ್ರಶ್ನೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಶಾಲೆ ಆರಂಭಿಸುವ ವಿಚಾರದಲ್ಲಿ ಸಮ್ಮತಿಸಿದ್ದಾರೆ. ಪೋಷಕರು ಸೇರಿ ಎಲ್ಲರೂ ಸಹಕಾರ ಕೊಡಬೇಕು ಎಂದು ಸುರೇಶ್‌ಕುಮಾರ್‌ಮನವಿ ಮಾಡಿದರು.

ಬಾಕ್ಸ್:

ವಿದ್ಯಾರ್ಥಿಗಳು ಕಳೆದ ವರ್ಷದ ಬಸ್ ಪಾಸ್ ಅನ್ನೇ ಬಳಸಿ ಓಡಾಡಬಹುದು. ಎಲ್ಲ ರೂಟ್ಗಳಲ್ಲಿ ಬಸ್ ವ್ಯವಸ್ಥೆ ಮಾಡಲು ಸಾರಿಗೆ ಇಲಾಖೆ ಸಮ್ಮಿತಿಸಿದೆ ಎಂದು ಸುರೇಶ್ ಕುಮಾರ್ ಹೇಳಿದರು.

ಬಾಕ್ಸ್:

ಖಾಸಗಿ ಸಂಸ್ಥೆಗಳ ಸಂಘಟನೆಗಳು ನನ್ನ ಜತೆ ಮಾತನಾಡಿವೆ. ಶುಲ್ಕದ ವಿಚಾರದಲ್ಲಿ ಪೋಷಕರಿಗೆ ಹೊರೆ ಆಗದ ಹಾಗೆ ಸೂತ್ರ ಮಾಡುವುದಾಗಿ ಹೇಳಿದ್ದಾರೆ. ನಾವೂ ಕೂಡ ಈ ಬಗ್ಗೆ ಸಭೆ ಮಾಡುತ್ತೇವೆ. ಅನೇಕರಿಗೆ ಹಿಂದಿನಂತೆ ಫೀಸ್ ಕೊಡುವ ಶಕ್ತಿ ಇಲ್ಲ. ಈ ಕುರಿತು ಪೋಷಕರು ಮತ್ತು ಶಾಲೆಗಳು ಚರ್ಚೆ ಮಾಡಬೇಕು ಎಂದು ಸುರೇಶ್‌ಕುಮಾರ್ ತಿಳಿಸಿದರು.

ಬಾಕ್ಸ್:

ಶಾಲಾ ಪಠ್ಯ ವಸ್ತುವಿನ ಬಗ್ಗೆ ನಮಗೆ ಗೊಂದಲವಿಲ್ಲ. ಪಠ್ಯ ಕಡಿತ ಎನ್ನಬಾರದು. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಪರೀಕ್ಷೆಗೆ ಎಷ್ಟು ಸಿಲೆಬಸ್ ಇರುತ್ತೆ ಎಂಬುದು ಮುಖ್ಯ.ಜತೆಗೆ ಅಗತ್ಯ ಕಲಿಕೆಯಿಂದ ವಿದ್ಯಾರ್ಥಿಗಳು ವಂಚನೆ ಆಗಬಾರದು ಎಂಬ ಅಂಶಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಆರೇಳು ದಿನದಲ್ಲಿ ಸಿಲೆಬಸ್ ಎಷ್ಟು ಇರುತ್ತದೆ ಎಂಬುದು ಹಾಗೂ ತಾತ್ಕಾಲಿಕ ಟೈಮ್ ಟೇಬಲ್ನ್ನು ಸಿದ್ಧಪಡಿಸಲಾಗುತ್ತದೆ ಎಂದು ಸುರೇಶ್‌ಕುಮಾರ್ ಹೇಳಿದರು.

ಬಾಕ್ಸ್:

ಪರೀಕ್ಷೆ ತರಾತುರಿ ಇಲ್ಲ, ಆತಂಕ ಬೇಕಿಲ್ಲ…

ಬಾಕ್ಸ್:

ಎಂದಿನಂತೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಪರೀಕ್ಷೆ ಮಾಡುವಿರಾ ಎಂದು ಕೆಲವರು ಕೇಳುತ್ತಾರೆ. ನಾವು ಈ ವರ್ಷ ಎಸ್ಸೆಸ್ಸೆಲ್ಸಿ, ಪಿಯು ಮಕ್ಕಳಿಗೆ ಒತ್ತಡ ಇಲ್ಲದ ಹಾಗೆ ಓದಲು ಸಾಕಷ್ಟು ಸಮಯ ಕೊಡುತ್ತೇವೆ. ತದನಂತರ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸುತ್ತೇವೆ. ಹಾಗಾಗಿ ಮಕ್ಕಳು ಮತ್ತು ಪೋಷಕರು ಈ ವಿಚಾರದಲ್ಲಿ ಆತಂಕಪಡಬೇಕಿಲ್ಲ ಎಂದು ಸುರೇಶ್‌ಕುಮಾರ್ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net