ಶಿಕ್ಷಣದಿಂದ ಉಜ್ವಲ ಭವಿಷ್ಯ

14sri-3 school
ಶೃಂಗೇರಿಯ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ವಿದಾರ್ಥಿಗಳಿಗೆ ನೋಟ್‌ಬುಕ್ ವಿತರಿಸಲಾಯಿತು. ರವಿಕುಮಾರ್, ವೆಂಕಟೇಶ್ ಭಟ್, ದಿಶಾ ಇದ್ದರು.
Published on

ಶೃಂಗೇರಿ: ಶಿಕ್ಷಣ ಎಂಬುದು ಕಷ್ಟಪಟ್ಟು ಸಂಪಾದಿಸುವ ಆಸ್ತಿ. ವಿದ್ಯಾವಂತರಿಗೆ ಎಲ್ಲೆಡೆ ಗೌರವ ಇದ್ದು ಜೀವನವೂ ಉಜ್ವಲವಾಗಿರುತ್ತದೆ ಎಂದು ಜ್ಞಾನಸಮೃದ್ಧಿ ಟ್ರಸ್ಟ್‌ನ ರವಿಕುಮಾರ್ ಹೇಳಿದರು.

ಪಟ್ಟಣದ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯಲ್ಲಿ ಶುಕ್ರವಾರ ಜ್ಞಾನಸಮೃದ್ಧಿ ಟ್ರಸ್ಟ್‌ನಿಂದ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಪೂರಕವಾಗಿ ಜ್ಞಾನಸಮೃದ್ಧಿ ಟ್ರಸ್ಟ್‌ನಿಂದ ನೋಟ್‌ಬುಕ್ ನೀಡಲಾಗುತ್ತಿದೆ ಎಂದು ಹೇಳಿದರು.

ಟ್ರಸ್ಟ್ ನಿರ್ದೇಶಕ ಭೀಮೇಶ್ ಮಾತನಾಡಿ, ಟ್ರಸ್ಟ್‌ನಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ನೀಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳ ಪಾಲಕರಿಗೆ ಆರ್ಥಿಕ ಹೊರೆ ಕಡಿಮೆಯಾಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಅನಿಲ್, ದಿಶಾ, ಮಿಗಿನಕಲ್ಲು ವೆಂಕಟೇಶ್‌ಭಟ್, ಮುಖ್ಯಶಿಕ್ಷಕ ಸಂತೋಷಕುಮಾರ್, ಶಿಕ್ಷಕ ಟಿ.ಆರ್.ಕೃಷ್ಣಮೂರ್ತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net