ಶಿಕ್ಷಣದ ಗುಣಮಟ್ಟ ಹೆಚ್ಚಿಸಿ

14 pnh 1 school
ಸಿಂಗಟಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಫೋಕನ್ ಇಂಗ್ಲಿಷ್ ತರಗತಿಯನ್ನು ಬಿಇಒ ಸಿದ್ದರಾಜು ನಾಯಕ್ ಉದ್ಘಾಟಿಸಿದರು. ಗಿರೀಶ್ ಆರಾಧ್ಯ, ಮಲ್ಲಿಕಾರ್ಜುನ್, ರಾಜು, ಜಗದೀಶ್, ರೇಖಾ, ಬಾಬು ಇದ್ದರು.
Published on

ಪಂಚನಹಳ್ಳಿ: ಗ್ರಾಮೀಣ ಮಕ್ಕಳ ಶಿಕ್ಷಣದ ಜತೆಗೆ ಆತ್ಮಸ್ಥೈರ್ಯ ಹೆಚ್ಚಿಸಲು ಸರ್ಕಾರ ಪ್ರತಿ ಶನಿವಾರ ಒಂದು ತಾಸು ಸ್ಫೋಕನ್ ಇಂಗ್ಲಿಷ್ ತರಗತಿ ಪ್ರಾರಂಭಿಸಿರುವುದರಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯ ಎಂದು ಕಡೂರು ತಾಲೂಕು ಬಿಇಒ ಸಿದ್ದರಾಜ್ ನಾಯಕ್ ತಿಳಿಸಿದರು. ಸಿಂಗಟಗೆರೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಫೋಕನ್ ಇಂಗ್ಲಿಷ್ ತರಗತಿ ಪ್ರಾರಂಭಿಸಿ ಮಾತನಾಡಿ, ಮಕ್ಕಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಇಂಗ್ಲಿಷ್ ಕಲಿಕೆ ಸಹಾಯಕ ಎಂದು ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಗಿರೀಶ ಆರಾಧ್ಯ ಮಾತನಾಡಿ, ಸ್ಫೋಕನ್ ಇಂಗ್ಲಿಷ್ ತರಗತಿ ಪ್ರಾರಂಭವಾಗಿದ್ದು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ತಿಳಿಸಿದರು. ಶಿಕ್ಷಕರಾದ ರಾಜು, ಜಗದೀಶ್, ರೇಖಾ, ಅಭಿಲಾಷ್, ರಾಜಶೇಖರ್, ಎಸ್‌ಡಿಎಂಸಿ ಸದಸ್ಯರಾದ ರಂಗನಾಥ್, ಜಯಣ್ಣ, ಬಾಬು, ತಾರಾಮಣಿ, ಮಲ್ಲಿಕಾರ್ಜುನ್, ಮಯೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net