ಶಿಕಾರಿಪುರಕ್ಕೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಒದಗಿಸಿ

vijeyendra
ಶಿಕಾರಿಪುರಕ್ಕೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸಿಬ್ಬಂದಿ ಒದಗಿಸುವಂತೆ ಶಾಸಕ ಬಿ.ವೈ.ವಿಜಯೇಂದ್ರ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
Published on

ಶಿಕಾರಿಪುರ: ಪಟ್ಟಣಕ್ಕೆ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಸಿಬ್ಬಂದಿ ಒದಗಿಸುವಂತೆ ಶಾಸಕ ಬಿ.ವೈ.ವಿಜಯೇಂದ್ರ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದರು.
ಶಿಕಾರಿಪುರದಲ್ಲಿ ಸುಸಜ್ಜಿತವಾದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮತ್ತು ಡಿಪೋ ನಿರ್ಮಾಣವಾಗಿವೆ. ಇದರಿಂದ ತಾಲೂಕಿನ ಬಹುದಿನದ ಕನಸು ಈಡೇರಿದಂತಾಗಿದೆ. ಆದರೆ ಲೋಕಾರ್ಪಣೆಯಾಗಿ ಸಾಕಷ್ಟು ದಿನಗಳು ಕಳೆದರೂ ಇನ್ನೂ ಸಮರ್ಪಕವಾದ ಬಸ್ ಸೇವೆ ಲಭ್ಯವಾಗಿಲ್ಲ. ಇದರಿಂದ ಹಳ್ಳಿಗಳಿಂದ ಶಿರಾಳಕೊಪ್ಪ ಮತ್ತು ಶಿಕಾರಿಪುರ ಪಟ್ಟಣಕ್ಕೆ ದಿನನಿತ್ಯ ವಿದ್ಯಾಭ್ಯಾಸಕ್ಕಾಗಿ ಬರುವ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ತಿಳಿಸಿದ್ದಾರೆ.
ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಆಗುವ ನಿಟ್ಟಿನಲ್ಲಿ ಹೆಚ್ಚುವರಿಯಾಗಿ ಹೊಸ ಬಸ್‌ಗಳ ವ್ಯವಸ್ಥೆ ಹಾಗೂ ತಕ್ಷಣ ಸಾರಿಗೆ ಸಿಬ್ಬಂದಿ ನೇಮಕಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿ ಸರ್ಕಾರ ಹೊಸ ಬಸ್‌ಗಳನ್ನು ಶೀಘ್ರದಲ್ಲೇ ಖರೀದಿಸಲಿದೆ. ಶಿಕಾರಿಪುರಕ್ಕೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net