ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ

21 nrp 4 crime
ಮಡಬೂರು ಗ್ರಾಮದ ಗುಡ್ಡೇಕೊಪ್ಪದಲ್ಲಿ ಶೆಡ್ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಸುಟ್ಟು ಹೋಗಿರುವುದು.
Published on

ಎನ್.ಆರ್.ಪುರ: ಮುತ್ತಿನಕೊಪ್ಪ ಗ್ರಾಪಂ ಮಡಬೂರು ಗ್ರಾಮದ ಗುಡ್ಡೇಕೊಪ್ಪದ ಪುಟ್ಟೇಗೌಡ ಎಂಬುವರ ಮನೆಯ ಪಕ್ಕದ ಶೆಡ್‌ಗೆ ಬುಧವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೆಂಕಿ ಬಿದ್ದು ಶೆಡ್ ಸಂಪೂರ್ಣ ಸುಟ್ಟುಹೋಗಿದೆ.

ಪುಟ್ಟೇಗೌಡ ಅವರು ಗುಡ್ಡೇಕೊಪ್ಪದಲ್ಲಿ ಹೊಸ ಮನೆ ನಿರ್ಮಾಣ ಮಾಡುತ್ತಿದ್ದರು. ಆದ್ದರಿಂದ ಮನೆಯಲ್ಲಿ ಎಲ್ಲ ವಸ್ತುಗಳನ್ನು ಪಕ್ಕದ ಶೆಡ್‌ಗೆ ಸ್ಥಳಾಂತರಿಸಿದ್ದರು. ರಾತ್ರಿ ಮಲಗಲು ನಿರ್ಮಾಣ ಹಂತದಲ್ಲಿದ್ದ ಮನೆಗೆ ಹೋಗುತ್ತಿದ್ದರು. ಬುಧವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ನೋಡಿದಾಗ ಹೊಸ ಮನೆಯ ಪಕ್ಕದ ಶೆಡ್‌ಗೆ ಬೆಂಕಿ ಬಿದ್ದು ಹೊತ್ತಿ ಉರಿಯುತ್ತಿರುವುದು ಕಂಡುಬಂದಿದೆ. ತಕ್ಷಣ ಅಕ್ಕಪಕ್ಕದ ಮನೆಯವರಿಗೆ ತಿಳಿಸಿದ್ದಾರೆ. ಆದರೆ ಶೆೆಡ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಶೆೆಡ್‌ನಲ್ಲಿ ಎರಡು ಅಡಕೆ ಮೂಟೆ, ಅಡಕೆ ಸುಲಿಯುವ ಯಂತ್ರ, ಬೀರು, ಮಂಚಗಳು, ಪಾತ್ರೆ, ಬಟ್ಟೆ, ಟಾರ್ಪಲ್ ಹಾಗೂ ಮನೆಯ ಇತರ ಪರಿಕರಗಳು ಸಂಪೂರ್ಣ ಸುಟ್ಟು ಹೋಗಿವೆ. ಗ್ರಾಪಂ ಸದಸ್ಯ ಪ್ರವೀಣ್ ಸ್ಥಳ ವೀಕ್ಷಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net