ಶರಣರ ಸಾನ್ನಿಧ್ಯ ರುದ್ರಭೂಮಿಯಲ್ಲಿ ಮೌಢ್ಯವಿರುದ್ಧ ಜಾಗೃತಿ

ctd 6 muruga vedike (2).jpg nn
Published on

ವೇದಿಕೆ ಅಧ್ಯಕ್ಷ ಅಂಜಿನಪ್ಪ,ಪ್ರೊ.ಲೇಪಾಕ್ಷ ಮಾತನಾಡಿದರು. ಡಿಸಿಸಿ ಅಧ್ಯಕ್ಷ ಎಂ.ಕೆ.ತಾಜ್‌ಪೀರ್,ಮಾಜಿ ಅಧ್ಯಕ್ಷ ಫಾತ್ಯರಾಜನ್, ಡಿ.ಎನ್.ಮೈಲಾರಪ್ಪ,ಮೀನಾಕ್ಷಮ್ಮ,ಬಿ.ಟಿ.ಜಗದೀಶ್,ಪಾಪಣ್ಣ,ರ ಘುರಾಂರೆಡ್ಡಿ,ಮೋಹನ್,ಪ್ರಕಾಶ್,ಅಜ್ಜಣ್ಣ, ಜಯಣ್ಣ, ರಾಜೇಂದ್ರ ಚಕ್ರವರ್ತಿ,ಟಿಪ್ಪು ಅಲಿ ಖಾಸಿಂಮರುಳಾರಾಧ್ಯಮತ್ತಿತರರ ಮುಖಂಡ ರು ಇದ್ದರು. ಕಾರ‌್ಯಕ್ರಮದ ಬಳಿಕ ಸ್ಥಳದಲ್ಲೇ ಉಪಹಾರ ವಿತರಿಸಲಾಯಿತು.

ಧರ್ಮದಲ್ಲಿ ಸಂಪ್ರದಾಯಗಳು ಸಹಜ,ಆದರೆ ಗೊಡ್ಡು ಸಂಪ್ರದಾಯಗಳೇ ಧರ್ಮವಾಗಬಾರದು ಎಂದು ಎಚ್ಚರಿಸಿದ ಶರಣರು, ಬದುಕಿಗೆ ನಂಬಿಕೆ ಬೇಕು,ಮೂಢ ನಂಬಿಕೆ ಅಲ್ಲ. ಕಂದಾಚಾರಗಳ ಆಚರಣೆ ಸಲ್ಲದು. ಬುದ್ಧ ಮಾನವೀಯತೆ, ಬಸವಣ್ಣ ಸಮಾನತೆ ಹಾ ಗೂ ಅಂಬೇಡ್ಕರ್ ವೈಚಾರಿಕತೆಯನ್ನು ಬೋಧಿಸಿದರು. ಅಂಬೇಡ್ಕರ್ ಸಹಿತ ಎಲ್ಲ ದಾರ್ಶನಿಕರ ಆದರ್ಶಗಳು ವೈಚಾರಿಕತೆಯ ರೂಢಿಗೆ ಸಹಕಾರಿಯಾಗಿವೆ ಎಂದರು.

ನಗರದ ಮಾನವ ಬಂಧುತ್ವ ವೇದಿಕೆ ಅಂಬೇಡ್ಕರ್ ಮಹಾ ಪರಿ ನಿರ್ವಾಣ ದಿನದ ಅಂಗವಾಗಿ ಯಂಗವ್ವಕಟ್ಟೆ ಸ್ಮಶಾನದಲ್ಲಿ ಭಾ ನುವಾರ ಆಯೋ ಜಿಸಿದ್ದ ಮೌಢ್ಯದ ವಿರುದ್ಧ ಜಾಗೃತ ಕಾರ‌್ಯಕ್ರಮ‘ಪರಿವರ್ತನಾ ದಿನ’ದಲ್ಲಿ ಮಾತನಾಡಿ,ಅಂಬೇಡ್ಕರ್ ಪ್ರಖರ ವಿಚಾರಧಾರೆಯನ್ನು ಬಳಸಿ ಕೊಂಡೆ ತಮ್ಮಲ್ಲಿರುವ ಅಪಾರ ಶಕ್ತಿಯನ್ನು ದಮನಿತರ ಏಳಿಗೆ ಹಾಗೂ ಜಾಗೃತ ಭಾರತ ನಿರ್ಮಾಣಕ್ಕೆ ಮುಂ ದಾಗಿದ್ದರು.

ಚಿತ್ರದುರ್ಗ: ಸತತ ಅಧ್ಯಯನದಿಂದಾಗಿ ತಮ್ಮಲ್ಲಿರುವ ಗೊಂದಲಗಳನ್ನು ನಿವಾರಿಸಿಕೊಂಡು ಜಗತ್ತಿಗೆ ಪ್ರಖರ ಮತ್ತು ಸ್ಪಷ್ಟ ವಿಚಾರಧಾರೆಯನ್ನು ಕೊಡಲು ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಾಧ್ಯವಾಯಿತು ಎಂದು ಡಾ.ಶಿವಮೂರ್ತಿ ಮುರುಘಾ ಶರಣರು ಹೇಳಿ ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net