ವಿಜಯವಾಣಿ ಸುದ್ದಿಜಾಲ ಕೋಲಾರ
ಕನ್ನಡ ನಾಡಿನಲ್ಲಿ ಕನ್ನಡಕ್ಕೇ ಪ್ರಾತಿನಿಧ್ಯ ಇರಬೇಕು ಎಂಬ ನಿಯಮಗಳೊಂದಿಗೆ ಸರ್ಕಾರ ಮತ್ತು ಆಡಳಿತ ಕಾರ್ಯಕ್ರಮಗಳಲ್ಲಿ ಕನ್ನಡ ಬಳಕೆಗೆ ಅಧ್ಯತೆ ಇರಬೇಕು ಎಂಬುದು ಆದೇಶವಿದ್ದರೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ನಡೆದ ಕಾರ್ಯಕ್ರಮದಲ್ಲಿಯೇ ತೆಲುಗು ಪ್ರೇಮ ಮೆರೆದಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ನೇತೃತ್ವದಲ್ಲಿ ಶುಕ್ರವಾರ ಟಿ.ಚನ್ನಯ್ಯ ರಂಗಮAದಿರದಲ್ಲಿ ವೇಮನ ಜಯಂತಿಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಆರ್.ಗೀತಾ ಉಪಸ್ಥಿತರಿದ್ದರು. ಅವರ ಎದುರಲ್ಲೇ ವೇಮನ ಸಮುದಾಯದ ಮುಖಂಡರು ತೆಲುಗು ಭಾಷೆಯಲ್ಲಿ ಭಾಷಣ ಮಾಡಿದರು. ಇಲಾಖಾ ಅಧಿಕಾರಿ ಮೂಕ ಪ್ರೇಕ್ಷಕರಂತೆ ಆಲಿಸುತ್ತಿದ್ದರು. ಇವರ ನಡೆಯನ್ನು ಕಂಡ ಸಾರ್ವಜನಿಕರು ಹೊರಗಡೆ ಬಂದು ಕಾರ್ಯಕ್ರಮದ ಆಯೋಜಕರ ಮತ್ತು ಇಲಾಖಾ ಅಧಿಕಾರಿಗಳ ವಿರುದ್ಧ ಕೆಂಡಕಾರಿದರು.
ಕನ್ನಡ ಉಳಿವಿಗೆ ಹಾಗೂ ಬೆಳವಣಿಗೆಗೆ ಇಲಾಖೆಯ ಅಧಿಕಾರಿಯಾಗಿ ಕೆಲಸ ಮಾಡುವ ಉಪ ನಿರ್ದೇಶಕಿ ಆರ್.ಗೀತಾ ಈ ರೀತಿ ನಡೆದುಕೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದ್ದು ಮಾತ್ರ ಸತ್ಯ.
ಸಿದ್ದರಾಮಯ್ಯ ಸರ್ಕಾರವು ಸಹ ಇತ್ತೀಚೆಗೆ ಕಟ್ಟುನಿಟ್ಟಿನ ಸೂಚನೆಯು ನೀಡಿದೆ. ಶೇ.೬೦ ರಷ್ಟು ಕನ್ನಡ ಬರಹ ಫಲಕಗಳಲ್ಲಿ ಇರಬೇಕು ಎಂದು ಆದೇಶಿಸಿದೆ. ರಾಜ್ಯದ ಕನ್ನಡ ಪರ ಸಂಘಟನೆಗಳು ವಿವಿಧ ಹೋರಾಟಗಳು ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಗಳು ನಡೆಯುತ್ತಿದ್ದರೆ. ಕೋಲಾರ ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ನಡೆದ ಜಿಲ್ಲಾಡಳಿತ ಕಾರ್ಯಕ್ರಮದಲ್ಲಿಯೇ ವೇಮನ ಸಮುದಾಯದ ಮುಖಂಡರು ತೆಲುಗು ಭಾಷೆಯಲ್ಲಿಯೇ ಮಾತನಾಡಿ ಕಾರ್ಯಕ್ರಮ ಸಮಾಪ್ತಿಗೊಳಿಸಿದರು.
ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕೃತ ಇಲಾಖೆ ಕನ್ನಡ ಉಳಿವಿಗಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲು ಸಾಕಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಶುಕ್ರವಾರ ನಡೆದ ವೇಮನ ಜಯಂತಿಗೂ ಸರ್ಕಾರವೇ ಹಣ ಬಿಡುಗಡೆ ಮಾಡಿದ್ದರೂ ಸಹ ಕಾರ್ಯಕ್ರಮದಲ್ಲಿ ತೆಲುಗು ಪ್ರೇಮ ಎದ್ದು ಕಾಣುತ್ತಾ ಇತ್ತು.
ರೆಡ್ಡಿ ಸಮುದಾಯದ ಜಿಲ್ಲಾಧ್ಯಕ್ಷ ರಾಘವೇಂದ್ರ ರೆಡ್ಡಿ, ಮುಳಬಾಗಿಲು ತಾಲ್ಲೂಕು ಬೆಳಪನಹಳ್ಳಿಯ ಸುಬ್ಬಾರೆಡ್ಡಿ ಇವರಿಂದ ಉಪನ್ಯಾಸ ಜರುಗಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಗೀತಾ ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.
ಚಿತ್ರ ೧೯ ಕೆ.ಎಲ್.ಆರ್. ೦೪ : ರಂಗಮAದಿರದಲ್ಲಿ ನಡೆದ ವೇಮನ ಜಯಂತಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಆರ್.ಗೀತಾ ಹಾಗೂ ವೇಮನ ಸಮುದಾಯದ ಮುಖಂಡರು ಹಾಜರಿದ್ದರು.