ವಿಜಯವಾಣಿ ಸುದ್ದಿಜಾಲ ಕೋಲಾರ
ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿ ಚುನಾವಣೆ ಕಾಂಗ್ರೇಸ್ ಪಕ್ಷ ಸೋಲಿಗೆ ವಿಮರ್ಶೆ ಮತ್ತು ಚರ್ಚೆಗಳು ನಡೆಯುತ್ತಿದ್ದು, ಕಾಂಗ್ರೇಸ್ ಪಕ್ಷದಲ್ಲಿ ಮುಖಂಡರು ಒಗ್ಗಟ್ಟಾಗಿ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಳ್ಳದೇ ಇರುವುದೇ ಸೋಲಿಗೆ ಕಾರಣ ಎಂಬ ಆರೋಪ ಚರ್ಚೆಯಾಗತೊಡಗಿದೆ.
ವೇಮಗಲ್ ಕುರುಗಲ್ ಪಟ್ಟಣ ಪಂಚಾಯ್ತಿಯ ೧೭ ಸ್ಥಾನಗಳಲ್ಲಿ ೬ ಸ್ಥಾನಗಳನ್ನು ಮಾತ್ರ ಕಾಂಗ್ರೇಸ್ ಗೆದ್ದುಕೊಂಡಿದೆ. ಕಾಂಗ್ರೇಸ್ ಪಕ್ಷದಲ್ಲಿ ನಿರೀಕ್ಷೆ ಇದ್ದುದ್ದು ೧೦ ಸ್ಥಾನಗಳು ಆದರೆ ಗಳಿಸಿದ್ದು ೬ ಸ್ಥಾನಗಳು ಮಾತ್ರ. ಉಳಿದ ೪ ಸ್ಥಾನಗಳಲ್ಲಿ ಹಿನ್ನಡೆಯಾಗಿರುವ ಬಗ್ಗೆ ಹಲವು ಬಗೆಯ ಚರ್ಚೆ ಮತ್ತು ವಿಮರ್ಶೆಗಳು ನಡೆಯುತ್ತಿವೆ. ಚುನಾವಣಾ ಪ್ರಚಾರದ ಪ್ರಾರಂಭದಲ್ಲಿ ೧೦ ರಿಂದ ೧೩ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನು ಕಾಂಗ್ರೇಸ್ ಪಕ್ಷದವರು ಇಟ್ಟುಕೊಂಡಿದ್ದರು.
ಏಕಪಕ್ಷೀಯವಾಗಿ ಚುನಾವಣಾ ಪ್ರಚಾರವನ್ನು ಕಾಂಗ್ರೇಸ್‌ನಲ್ಲಿ ಕೆಲವೇ ಮಂದಿ ಮಾತ್ರ ನಡೆಸಿದ್ದರಿಂದ ಕಾಂಗ್ರೇಸ್ ಸೋಲಲು ಕಾರಣವಾಗಿದೆ ಎಂದು ಸ್ವಪಕ್ಷೀಯ ಶಾಸಕರಾದ ಎಸ್.ಎನ್.ನಾರಾಯಣಸ್ವಾಮಿ ಮತ್ತು ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ಆರೋಪಿಸುತ್ತಿದ್ದಾರೆ.
ಈ ಬಗ್ಗೆ ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ ಕಾಂಗ್ರೇಸ್ ಜಿಲ್ಲಾಧ್ಯಕ್ಷ ಲಕ್ಷಿö್ಮÃನಾರಾಯಣ ಕಾಂಗ್ರೇಸ್ ಪಕ್ಷದಲ್ಲಿ ವಿವಿಧ ಘಟಕಗಳಿವೆ. ಎಸ್.ಸಿ, ಎಸ್.ಟಿ, ಹಿಂದುಳಿದ, ಕಿಸಾನ್ ಮಜ್ದೂರ್ ಹೀಗೆ ವಿವಿಧ ಘಟಕಗಳಿದ್ದು, ಆ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದರೆ, ಆಯಾ ಘಟಕಗಳ ಸಮುದಾಯದ ಮತಗಳನ್ನು ಕ್ರೂಢೀಕರಿಸಬಹುದಾಗಿತ್ತು. ಶಾಸಕ ಕೊತ್ತೂರು ಮಂಜುನಾಥ್, ಎಂ.ಎಲ್.ಸಿ. ಅನಿಲ್‌ಕುಮಾರ್ ಇವರುಗಳು ಪ್ರಚಾರಕ್ಕೆ ಯಾರನ್ನೂ ಆಹ್ವಾನಿಸಲಿಲ್ಲ.
ವೇಮಗಲ್ ಮತ್ತು ಕುರುಗಲ್ ಪಟ್ಟಣ ಪಂಚಾಯ್ತಿಯ ವ್ಯಾಪ್ತಿಯಲ್ಲಿ ಅಹಿಂದ ಸಮುದಾಯದವರು ಮತ್ತು ಎಸ್.ಸಿ, ಎಸ್.ಟಿ. ಸಮುದಾಯದವರು ಹೆಚ್ಚಾಗಿದ್ದಾರೆ. ಆದರೆ ಪ್ರಚಾರಕ್ಕೆ ಆ ಸಮುದಾಯದ ಮುಖಂಡರನ್ನು ಮತ್ತು ಮುಂಚೂಣಿ ಘಟಕಗಳ ಅಧ್ಯಕ್ಷರನ್ನು ಪ್ರಚಾರಕ್ಕೆ ಆಹ್ವಾನಿಸಲಿಲ್ಲ. ಇದರಿಂದ ಕಾಂಗ್ರೇಸ್ ಪಕ್ಷಕ್ಕೆ ಮತ ಗಳಿಕೆಯಲ್ಲಿ ಹಿನ್ನಡೆ ಉಂಟಾಗಿದೆ ಎಂದು ತಿಳಿಸಿದರು.
ಚಿತ್ರ ೨೧ ಕೆ.ಎಲ್.ಆರ್. ೦೨ : ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷಿö್ಮÃನಾರಾಯಣ ರವರ ಭಾವಚಿತ್ರ