ವಿಪತ್ತು ಘಟಕದಿಂದ ಶಾಲಾ ಆವರಣ ಸ್ವಚ್ಛತೆ

02bhr 1 kasa
ಬಾಳೆಹೊನ್ನೂರು ಸಮೀಪದ ಜೇನುಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯ ನಡೆಸಲಾಯಿತು. ಚಂದ್ರಶೇಖರ್ ರೈ, ಸುರೇಶ್ ಕೋಟಿಯಾನ್, ವಿಜಯಕುಮಾರ್ ಮತ್ತಿತರರಿದ್ದರು.
Published on

ಬಾಳೆಹೊನ್ನೂರು: ಭಾರಿ ಮಳೆಗೆ ಸಮೀಪದ ಖಾಂಡ್ಯ ಹೋಬಳಿಯ ಜೇನುಗದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಕೊಳಚೆ ನೀರು ಸಂಗ್ರಹಗೊಂಡಿದ್ದು ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಅದನ್ನು ಸ್ವಚ್ಛಗೊಳಿಸಲಾಯಿತು.

ಇತ್ತೀಚೆಗೆ ಸುರಿದ ಮಳೆಯ ಹಿನ್ನೆಲೆಯಲ್ಲಿ ಶಾಲಾ ಆವರಣದ ಸುತ್ತಲೂ ಮುಖ್ಯರಸ್ತೆಯ ನೀರು ನುಗ್ಗಿ ಕೆಸರುಮಯವಾಗಿತ್ತು. ಇದರಿಂದಾಗಿ ಶಾಲಾ ಮಕ್ಕಳು ಶಾಲೆಯ ಒಳಗೆ ಪ್ರವೇಶಿಸದ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಗಮನಿಸಿದ ಖಾಂಡ್ಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಸ್ಥಳಕ್ಕೆ ಧಾವಿಸಿ ಚರಂಡಿ ತೆಗೆದು ನೀರು ಸರಾಗವಾಗಿ ಶಾಲಾ ಆವರಣದಿಂದ ಹೊರ ಹೋಗುವಂತೆ ಮಾಡಿದರು. ಸ್ಥಳೀಯ ದೇವದಾನ ಗ್ರಾಪಂ ಅಧ್ಯಕ್ಷ ಸಂಪತ್ ಅವರಿಗೂ ಈ ಕುರಿತು ಮಾಹಿತಿ ನೀಡಿದ್ದು ಶಾಲಾ ಸುತ್ತ ಜೆಸಿಬಿಯಿಂದ ದೊಡ್ಡ ಕಾಲುವೆ ನಿರ್ಮಿಸಿ ಚರಂಡಿ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಖಾಂಡ್ಯ ಶೌರ್ಯ ವಿಪತ್ತು ಘಟಕದ ಸ್ವಯಂ ಸೇವಕರಾದ ಹನ್ೀ, ಚಂದ್ರಶೇಖರ್ ರೈ, ಸುರೇಶ್ ಕೋಟಿಯಾನ್, ವಿಜಯಕುಮಾರ್ ಮತ್ತಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net