ವಿದ್ಯುತ್ ಸ್ಪರ್ಶಕ್ಕೆ ಕೊಡಗಿನಲ್ಲಿ ಕಾಡಾನೆ ಬಲಿ

madikeri
Published on

ಮಡಿಕೇರಿ: ವಿದ್ಯುತ್ ಸ್ಪರ್ಶಕ್ಕೆ ಕೊಡಗಿನಲ್ಲಿ ಕಾಡಾನೆವೊಂದು ಜೀವ ಕಳೆದುಕೊಂಡಿದೆ. ಸೋಮವಾರಪೇಟೆ ತಾಲೂಕು ವ್ಯಾಪ್ತಿಯ ಸುಂಟಿಕೊಪ್ಪ ಸಮೀಪದ ಅಂದಗೋವೆ ಗ್ರಾಮದ ಕಾಫಿ ತೋಟದಲ್ಲಿ ಕಾಡಾನೆ ಶವ ಬುಧವಾರ ಪತ್ತೆಯಾಗಿದೆ.

ಕಾಡಾನೆ ಹಾವಳಿ ತಡೆಗಟ್ಟಲು ಕಾಫಿ ತೋಟದ ಬೇಲಿಗೆ ಅಳವಡಿಸಲಾಗಿದ್ದ ಸೋಲಾರ್ ತಂತ್ರಿ ಸ್ಪರ್ಶಕ್ಕೆ ಕಾಡಾನೆ ಜೀವ ಕಳೆದುಕೊಂಡಿದೆ. ಎರಡು ದಿನಗಳ ಹಿಂದೆ ಈ ದುರ್ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬುಧವಾರ ತೋಟ ಕೆಲಸಕ್ಕೆ ಕಾರ್ಮಿಕರು ಬಂದಿದ್ದ ವೇಳೆ ಕಾಡಾನೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಶುವೈದ್ಯಾಧಿಕಾರಿಗಳು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತಪಟ್ಟ ಗಂಡಾನೆ ಅಂತ್ಯ ಸಂಸ್ಕಾರ ತೋಟದಲ್ಲಿ ನೆರವೇರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net