ವಿದ್ಯುತ್ ತಂತಿ ಸ್ಪರ್ಶಿಸಿದ ಬಾಲಕಿ ಸಾವು

death
Published on

ಖಾನಾಪುರ: ತಾಲೂಕಿನ ಇದ್ದಲಹೊಂಡ ಗ್ರಾಮದಲ್ಲಿ ಬಾಲಕಿಯೊಬ್ಬಳು ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ಸ್ಪರ್ಶಿಸಿ ಸಾವಿಗೀಡಾದ ಘಟನೆ ಬುಧವಾರ ಸಂಭವಿಸಿದೆ.

ಮೃತ ಬಾಲಕಿಯ ಹೆಸರು ಮನಾಲಿ ಮಾರುತಿ ಚೋಪ್ಡೆ ( 9). ಮನೆಯ ಪಕ್ಕದಲ್ಲಿದ್ದ ಇಟ್ಟಿಗೆ ಬಟ್ಟಿ ಇದ್ದು, ಅದರ ಮಾಲೀಕರು ಹೆಚ್ಚಿಗೆ ಇಟ್ಟಿಗೆ ತಯಾರಿಸುವ ಸಲುವಾಗಿ ಅಪಾರ ಪ್ರಮಾಣದ ಜೇಡಿಮಣ್ಣು ಸಂಗ್ರಹಿಸಿದ್ದರು.

ನಾಲ್ಕು ಮಕ್ಕಳೊಂದಿಗೆ ಜೇಡಿಮಣ್ಣಿನ ಮೇಲೆ ಬಾಲಕಿ ಮನಾಲಿ ಆಟವಾಡುತ್ತಿದ್ದಳು. ಆಟವಾಡುವಾಗ ಸಮತೋಲನ ಕಳೆದುಕೊಳ್ಳುವ ಭಯದಲ್ಲಿ ಆಧಾರಕ್ಕಾಗಿ ವಿದ್ಯುತ್ ಪ್ರವಹಿಸುವ ತಂತಿ ಕೈಯಲ್ಲಿ ಹಿಡಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.

ಒಬ್ಬ ಬಾಲಕ ಗಾಯಗೊಂಡು ಖಾನಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಕುರಿತಾಗಿ ಖಾನಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net